ಬೀಜ – ಸಸಿ ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೆ ತಿಳಿದುಕೊಳ್ಳಿ.
ಹಿರಿಯರು ಹೇಳುವುದುಂಟು , ಪರವೂರಿನ ಸುಭಗನಿಗಿಂತ ( ನಯ ವಿನಯದ ವ್ಯಕ್ತಿ) ಊರಿನ ಕಳ್ಳನಾದರೂ ಆಗಬಬಹುದು ಎಂದು. ಇದು ನಿಜ. ರೈತರು ಖರೀದಿ ಮಾಡುವ ಸಸಿ, ಬೀಜ ಇವುಗಳನ್ನು ಗೊತ್ತು ಪರಿಚಯ ಇರುವವರಿಂದಲೇ ಖರೀದಿ ಮಾಡಿ. ನಾಳೆ ಮೋಸವಾದರೆ ಅವರು ನಿಮ್ಮ ಕಣ್ಣು ಮುಂದೆಯೇ ಇರುತ್ತಾರೆ. ನೆಡು ಸಾಮಾಗ್ರಿಗಳಾದ ಬೀಜ, ಸಸಿಗಳ ವ್ಯವಹಾರ ಎಂದರೆ ಬಲವಾದ ನಂಬಿಕೆ. ಇದು ದೇವರಿಗೆ ನಮಸ್ಕರಿಸಿ ಆಶೀರ್ವಾದ ಬೇಡುವುದಕ್ಕಿಂತಲೂ ಮಿಕ್ಕಿದ ನಂಬಿಕೆಯ ವ್ಯವಹಾರ. ಒಬ್ಬ ರೈತ ಒಂದು ಬೀಜ ಅಥವಾ ಸಸಿಯನ್ನು…