ಶುಂಠಿ ಬೆಳೆಯ ಪ್ರಮುಖ ಕೀಟ ಮತ್ತು ನಿಯಂತ್ರಣ
ಶುಂಠಿ ಬೆಳೆಯನ್ನು ತುಂಬಾ ನಿಗಾ ವಹಿಸಿ ಬೆಳೆದರೆ ಮಾತ್ರ ಅದು ಕೈ ಹಿಡಿಯುತ್ತದೆ. ನಾಟಿಯಿಂದ ಬೆಳೆವಣಿಗೆ ತನಕ ಪ್ರತೀ ಹಂತದಲ್ಲೂ ತೀವ್ರ ನಿಗಾ ಬೇಕು. ಅಷ್ಟೇ ಗಮನವೂ ಬೇಕು. ಶುಂಠಿಯಲ್ಲಿ ಸಸಿ ಹಂತದಲ್ಲಿ ನಿತ್ಯ ಗಮನಿಸಬೇಕಾದುದು ಅದರ ಕೀಟ ಹಾವಳಿ.ಶುಂಠಿಗೆ ಕಾಂಡ ಕೊರಕ ಹುಳಿವಿನ ತೊಂಡರೆ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಕಂಡು ಬರುವ ಸಮಸ್ಯೆ. ಕಾಂಡ ಕೊರಕ ಹುಳು ಹೆಚ್ಚಾದರೆ ಬೆಳೆ ಗಣನೀಯವಾಗಿ ನಷ್ಟವಾಗುತ್ತದೆ. ಇದನ್ನು ನಿತ್ಯ ಗಮನಿಸಿ ನಿರ್ವಹಣೆ ಮಾಡಬೇಕು. ಯಾವಾಗ ಹೆಚ್ಚು: ಕಾಂಡ ಕೊರಕ…