ಶುಂಠಿ ಬೆಳೆಯ ಪ್ರಮುಖ ಕೀಟ ಮತ್ತು ನಿಯಂತ್ರಣ

ಶುಂಠಿ ಹೊಲ

ಶುಂಠಿ ಬೆಳೆಯನ್ನು ತುಂಬಾ ನಿಗಾ ವಹಿಸಿ ಬೆಳೆದರೆ ಮಾತ್ರ ಅದು ಕೈ ಹಿಡಿಯುತ್ತದೆ. ನಾಟಿಯಿಂದ ಬೆಳೆವಣಿಗೆ ತನಕ ಪ್ರತೀ ಹಂತದಲ್ಲೂ ತೀವ್ರ ನಿಗಾ ಬೇಕು. ಅಷ್ಟೇ ಗಮನವೂ ಬೇಕು. ಶುಂಠಿಯಲ್ಲಿ ಸಸಿ ಹಂತದಲ್ಲಿ ನಿತ್ಯ ಗಮನಿಸಬೇಕಾದುದು ಅದರ ಕೀಟ ಹಾವಳಿ.ಶುಂಠಿಗೆ ಕಾಂಡ  ಕೊರಕ ಹುಳಿವಿನ ತೊಂಡರೆ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಕಂಡು ಬರುವ ಸಮಸ್ಯೆ. ಕಾಂಡ ಕೊರಕ ಹುಳು ಹೆಚ್ಚಾದರೆ ಬೆಳೆ ಗಣನೀಯವಾಗಿ ನಷ್ಟವಾಗುತ್ತದೆ. ಇದನ್ನು ನಿತ್ಯ ಗಮನಿಸಿ  ನಿರ್ವಹಣೆ ಮಾಡಬೇಕು.

ಯಾವಾಗ ಹೆಚ್ಚು:

 • ಕಾಂಡ ಕೊರಕ ಹುಳುವಿನ ಉಪಟಳ ಸಾಮಾನ್ಯವಾಗಿ  ಮಳೆ ಬಂದ ನಂತರ ಪ್ರಾರಂಭವಾಗಿ ಅಕ್ಟೋಬರ್ ತನಕವೂ ಮುಂದುವರಿಯುತ್ತದೆ.
 • ಒಂದು ಹುಳವು ಶುಂಠಿ ಸಸ್ಯದ ಕಾಂಡದ ಒಳಗೆ ಕೊರೆದು ಒಳ ಸೇರಿ ಅದನ್ನು ಒಣಗುವಂತೆ ಮಾಡುತ್ತದೆ.
 • ಈ ಸಮಯದಲ್ಲಿ ಶುಂಠಿ ಎಲೆಗಳು ಅಲ್ಲಲ್ಲಿ ಹಳದಿಯಾಗಿ ಹಣ್ಣಾದಂತೆ ಕಂಡರೆ , ಅದು ಕೊಳೆ ರೋಗ ಎಂದು ತೀರ್ಮಾನಕ್ಕೆ ಬರುವ ಮುಂಚೆ  ಆ ಗಿಡದ ಪಕ್ಕಕ್ಕೆ  ಹೋಗಿ, ಅದರ ಕಾಂಡವನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಪತ್ತೆ ಹೇಗೆ:

ಶುಂಠಿ ಸಸ್ಯ ಹೀಗಾದರೆ ಕಾಂಡ ಕೊರಕ ಬಂದಿರಬಹುದು.
ಶುಂಠಿ ಸಸ್ಯ ಹೀಗಾದರೆ ಕಾಂಡ ಕೊರಕ ಬಂದಿರಬಹುದು.
 • ಮೇಲೆ ಹೇಳಿದಂತೆ ಶುಂಠಿ ಹೊಲದಲ್ಲಿ ಗಿಡಗಲ ಎಲೆ ಹಳದಿಯಾಗಿದೆಯೇ  ಎಂದು ಗಮನಿಸಿರಿ.
 • ಇದು ಅದರ ಪ್ರಥಮ ಸೂಚನೆ.ಹಳದಿಯಾದ ಗಿಡದ ಸಮೀಪ ಹೋಗಿ ಅದರ ಸುಳಿಯನ್ನು ಎಳೆಯಿರಿ.
 • ಆಗ ಕಿತ್ತುಕೊಂಡು ಬರಬಹುದು. ಒಂದು ವೇಳೆ ಬುಡ ಭಾಗದಿಂದಲೇ ಕಿತ್ತುಕೊಂಡು ಬಂದರೆ ಅದು ಸುಳಿ ಕೊಳೆ ರೋಗ ಇರಬಹುದು.
 • ಅರ್ಧದಲ್ಲಿ ತುಂಡಾಗಿ ಬಂದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿ.
 • ಅಲ್ಲಿ ಹುಳು ತಿಂದು ತುಂಡಾಗಿರುವುದು ಕಂಡು ಬರುತ್ತದೆ.
 • ಅದು ರಸ ಹೀರಿ ಹೊರ ಹಾಕಿದ ನಾರು ಇರುತ್ತದೆ.ಇನ್ನೂ ಸೂಕ್ಷ್ಮ ವಾಗಿ ಗಮನಿಸಿದರೆ ಕಾಂಡದಲ್ಲಿ ಸಣ್ಣ ತೂತು ಇರುತ್ತದೆ.
 • ಕಾಂಡವನ್ನು ತುಂಡು ಮಾಡಿದರೆ ಅದರ ಒಳಗೆ ಸುಳಿ ಇರುವುದಿಲ್ಲ.
 • ಹಾನಿಯಾದ ಸಸ್ಯದ ಕಾಂಡವನ್ನು ತೆಗೆದು ಬಿಡಿಸಿ ನೊಡಿದಾಗ ಅದರ ಒಳಗೆ ಒಂದು ಹುಳ ಇರುತ್ತದೆ.
 • ಇದುವೇ ಕಾಂಡ ಕೊರಕ ಹುಳು.
ಶುಂಠಿ ಸಸ್ಯ ಕೊಳೆ ಬಂದರೂ ಹೀಗಾಗುತ್ತದೆ, ಕೀಟದಿಂದಲೂ ಹೀಗೆ ಆಗುತ್ತದೆ.
ಶುಂಠಿ ಸಸ್ಯ ಕೊಳೆ ಬಂದರೂ ಹೀಗಾಗುತ್ತದೆ, ಕೀಟದಿಂದಲೂ ಹೀಗೆ ಆಗುತ್ತದೆ.
 • ಒಂದು ಪತಂಗ  ಶುಂಠಿ ಸಸ್ಯದ ಕಾಂಡದಲ್ಲಿ ತೂತು  ಮಾಡಿ ಮೊಟ್ಟೆ ಇಡುತ್ತದೆ.
 • ಈ ಮೊಟ್ಟೆ ಮರಿಯಾಗಿ ಕಾಂಡವನ್ನು ಕೊರೆದು ರಸ ಹೀರುತ್ತದೆ.
 • ಇದರಿಂದ ಶುಂಠಿಯಲ್ಲಿ 20-30% ಬೆಳೆ ಹಾನಿ ಉಂಟಾಗುತ್ತದೆ.
 • ಪತಂಗಗಳು ಕಿತ್ತಳೆ ಹಳದಿ ರೆಕ್ಕೆಯನ್ನು ಹೊಂದಿದ್ದು, ರೆಕ್ಕೆಯಲ್ಲಿ ಕಪ್ಪು ಚುಕ್ಕೆ ಇರುತ್ತದೆ.
ಶುಂಠಿಯ ಕಾಂಡ ಕೊರಕ ಹುಳ
ಶುಂಠಿಯ ಕಾಂಡ ಕೊರಕ ಹುಳ

ಹುಳ

ನಿಯಂತ್ರಣ:

 • ಈ ಕೀಟದ ನಿಯಂತ್ರಣಕ್ಕಾಗಿ ಕೆಲವು ರೈತರು ಕರಾಟೆ( ಲಾಮ್ಬ್ದ್ರಾಸೈಹೋಥ್ರಿನ್) ಪ್ರಭಲ ಕೀಟನಾಶಕಗಳನ್ನು ಬಳಕೆ ಮಾಡುತ್ತಾರೆ.
 • ಇದರ ಅವಶ್ಯಕತೆ ಇರುವುದಿಲ್ಲ. ಶುಂಠಿ ಹೊಲದ ಸುತ್ತ ಕಳೆಗಳನ್ನು ಬೆಳೆಯಲು ಬಿಡಬಾರದು. ಅದನ್ನು ನಾಶ ಮಾಡಬೇಕು.
 • ಕ್ವಿನಾಲ್ ಫೋಸ್ ಕೀಟನಾಶಕವನ್ನು ಸಿಂಪಡಿಸಿ ಇದನ್ನು ಹತೋಟಿ ಮಾಡಬಹುದು.
 • ಮಳೆಗಾಲ ಪ್ರಾರಂಭವಾದ ತರುವಾಯ 15 ದಿನಕ್ಕೊಮ್ಮೆ ನಾಲ್ಕರಿಂದ ಐದು ಬಾರಿ ಆಗಸ್ಟ್ ತನಕ ಸಿಂಪರಣೆ ಮಾಡಿ ನಿಯಂತ್ರಣ  ಮಾಡಬಹುದು.

ಹೀಗಾದರೆ ಕಾಂಡದಲ್ಲಿ ತೂತು ಇರುವುದು ಹುಳ ಇರುವ ಸೂಚನೆ

 • ಶುಂಠಿಯ ಹೊಲದಲ್ಲಿ ಎಲೆಗಳು ಸ್ವಲ್ಪ ಬಾಡಿದಂತೆ ಕಂಡು ಬಂದರೆ ಅಲ್ಲಿ ಈ ಹುಳ ವಾಸ್ತವ್ಯ ಇದೆ ಎಂದರ್ಥ.
 • ಆ ಸಮಯದಲ್ಲಿ ಸಿಂಪರಣೆ ಮಾಡಬೇಕು.
 • ಮೆಲಾಥಿಯಾನ್ ಕೀಟ ನಾಶಕದಲ್ಲೂ ಇದು ನಿಯಂತ್ರಣಕ್ಕೆ  ಬರುತ್ತದೆ.
 • ಬಾಧೆಗೊಳಗಾದ ಸಸ್ಯದ ಭಾಗಗಳನ್ನು ಸುಟ್ಟು ನಾಶ ಮಾಡಬೇಕು.

ಅನವಶ್ಯಕವಾಗಿ ಪ್ರಭಲ,ಅಂತರ್ ವ್ಯಾಪೀ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಡಿ. ಇದಕ್ಕೆ ಕೀಟಗಳು  ಬೇಗ ನಿರೋಧಕ ಶಕ್ತಿಯನ್ನು ಪಡೆಯುತ್ತವೆ. ಮತ್ತೆ ಇನ್ನೂ ಪ್ರಭಲ  ಕೀಟನಾಶಕ ಬೇಕಾಗುತ್ತದೆ. ಇದು ಬಹಳ ದುಬಾರಿಯೂ ಆಗುತ್ತದೆ. ಸಾವಯವ ವಿಧಾನದಲ್ಲಿ ಇದನ್ನು ಹತೋಟಿ ಮಾಡಲು ಪ್ರಾರಂಭದಲ್ಲೇ ಹಾನಿಯಾದ ಸಸ್ಯದ ಭಾಗಗಳನ್ನು ಸುಡಬೇಕು. ನಿತ್ಯ  ಗಮನಿಸಿ ನಾಶ ಮಾಡುತ್ತಾ ಇದ್ದರೆ ಹಾನಿ ಪ್ರಮಾಣ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!