ಶುಂಠಿ – ಗಡ್ಡೆ ತೂಕ ಬರಲು ಸೂಕ್ತ ಬೇಸಾಯ ವಿಧಾನ.
ಶುಂಠಿಯ ಸಸ್ಯ ಬೆಳೆವಣಿಗೆಯ ಮೇಲೆ ಗಡ್ಡೆ ಬೆಳೆವಣಿಗೆ ಇರುತ್ತದೆ. ಎಳವೆಯಲ್ಲಿ ಸಸ್ಯ ಚೆನ್ನಾಗಿ ಬೆಳೆದರೆ ಗಡ್ಡೆ ದೊಡ್ಡದಾಗುತ್ತದೆ. ಇದು ಸಸ್ಯದ ಮೊಳಕೆಗಳ ಮೇಲೆ ಅವಲಂಭಿತವಾಗಿದೆ. ಹೆಚ್ಚು ಮೊಳಕೆಗಳು ಆರೋಗ್ಯಕರ ಸಸ್ಯಗಳಿದ್ದಾಗ ಗಡ್ಡೆ ದೊಡ್ಡದಾಗಲೇ ಬೇಕು. ಬರೇ ಸಸ್ಯ ಬೆಳೆವಣಿಗೆ ಮಾತ್ರವಲ್ಲ ಸಮತೋಲನದ ಬೆಳೆವಣಿಗೆ ಎಂಬುದು ಎಲ್ಲಕ್ಕಿಂತ ಮುಖ್ಯ. ಕೆಲವು ಮನುಷ್ಯ ಸುಮಾರು 40-45 ವರ್ಷದ ತನಕ ಕಡಿಮೆ ತೂಕದವರಾಗಿರುತ್ತಾರೆ. ನಂತರದ ವರ್ಷಗಳಲ್ಲಿ ಶರೀರದಲ್ಲಿ ಮಾಂಸ ಹೆಚ್ಚಾಗದಿದ್ದರೂ ತೂಕ ಹೆಚ್ಚಾಗುತ್ತಾರೆ. ಕಾರಣ ಅವರ ಎಲುಬುಗಳ ತೂಕ ಹೆಚ್ಚಾಗಿರುತ್ತದೆ. ಹಾಗೆಯೇ…