ಗೋಬರ್ ಗ್ಯಾಸ್ ಸ್ಲರಿಯಲ್ಲಿ ಸತ್ವ ಇದೆ.
ಸಗಣಿಯನ್ನು ಹಾಗೆಯೇ ಬೆಳೆಗಳಿಗೆ ಹಾಕುವುದಕ್ಕಿಂತ ಅದನ್ನು ದ್ರವೀಕರಿಸಿ ಕೊಡುವುದರಿಂದ ಅದರ ಪೂರ್ಣ ಸತ್ವಗಳು ಬೆಳೆಗಳಿಗೆ ದೊರೆಯುತ್ತದೆ. ಅನಿಲ ಉತ್ಪಾದನೆ ಅಗುವಾಗ ಸಗಣಿಯ ಸಾರ ಕಡಿಮೆಯಾಗುತ್ತದೆ ಎಂಬುದು ನಿಜವಲ್ಲ. ಅನಿಲ ಉತ್ಪಾದನೆಗೆ ಬೇಕಾಗುವ ಅಂಶವೇ ಬೇರೆ. ಬೆಳೆಗಳಿಗೆ ಬೇಕಾಗುವುವಂತದ್ದು ಅದರಲ್ಲೇ ಉಳಿಯುತ್ತದೆ.ಪ್ರತೀಯೊಬ್ಬ ಗೋಬರ್ ಗ್ಯಾಸ್ ಸ್ಲರಿ ಬಳಕೆದಾರ ತಿಳಿಯಬೇಕಾದ ಮಾಹಿತಿ ಇಲ್ಲಿದೆ. ಹಳ್ಳಿಯಲ್ಲಿ ಕೃಷಿಕರ ಮನೆಯಲ್ಲಿ ಬಯೋಗ್ಯಾಸ್ ಅಥವಾ ಗೋಬರ್ ಗ್ಯಾಸ್ ಇದ್ದರೆ ಸಿದ್ದ ಗೊಬ್ಬರ ಇದ್ದಂತೆ. ಒಂದೆರಡು ದನ ಇದ್ದವರೂ ಗೋಬರ್ ಗ್ಯಾಸ್ ಮಾಡಿಕೊಳ್ಳಬಹುದು. ಹೆಚ್ಚು ದನ…