
ತೆಂಗಿನ ಮರಕ್ಕೆ ಬೊಡ್ಡೆ ಬರುವುದು ಹೇಗೆ ಮತ್ತು ಇದರ ಪ್ರಯೋಜನ.
ತೆಂಗಿನ ಮರದ ಬುಡದಲ್ಲಿ ಬೆಳೆಯುವ ಒಂದು ರೀತಿಯ ಬೊಡ್ಡೆಯೇ (Bole) ಆ ಮರದ ಶಕ್ತಿ ಕೇಂದ್ರ. ಯಾವ ತೆಂಗಿನ ಮರಕ್ಕೆ ಬೊಡ್ಡೆ ಇದೆಯೋ ಆ ಮರ ಸ್ವಲ್ಪ ಮಟ್ಟಿಗೆ ಬರ ನಿರೋಧಕ ಶಕ್ತಿಯನ್ನು ಪಡೆದಿರುತ್ತದೆ. ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ ಅದನ್ನು ಬಳಸಿಕೊಂಡು ಬದುಕುತ್ತದೆ. ಅದೇ ರೀತಿ ಕೆಲವು ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಆಪತ್ಕಾಲಕ್ಕೆ ಬಳಕೆಗಾಗುವಂತೆ ತಮ್ಮಲ್ಲಿ ಆಹಾರ ದಾಸ್ತಾನು ಇಟ್ಟುಕೊಂಡಿರುತ್ತವೆ….