ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.
ಕಳೆ ಸಸ್ಯಗಳೆಂದು ನಾವು ನಿರ್ಲಕ್ಷ್ಯ ಮಾಡುವ ಕೆಲವು ಸಸ್ಯಗಳು ಮಣ್ಣೀನ ಫಲವತ್ತತೆ ಹೆಚ್ಚಿಸಲು ಸಹಕಾರಿ. ಅವುಗಳಲ್ಲಿ ಒಂದು ಕ್ರೊಟಲೇರಿಯಾ ಜಾತಿಯ ಸಸ್ಯ. ಸಸ್ಯಗಳು ಮತ್ತು ಮಣ್ಣು: ಅಲ್ಪಾವಧಿಯ ಸಸ್ಯಗಳಾದ ಇವುಗಳನ್ನು ಹೊಲದಲ್ಲಿ ಬೆಳೆಯುವುದರಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ರಚನೆ ಅಭಿವೃದ್ದಿಯಾಗುತ್ತದೆ. ಇಂತವುಗಳು ನಮ್ಮ ಸುತ್ತಮುತ್ತ ಹಲವಾರು ಇವೆ. ಯಾವುದು ದ್ವಿದಳ ಕಾಳುಗಳನ್ನು ಕೊಡುವ ಸಸ್ಯಗಳಿವೆಯೋ ಅವೆಲ್ಲಾ ಪೋಷಕಾಂಶ ಕೊಡುವ ಸಸ್ಯಗಳು. ಮಣ್ಣು ಈ ತನಕ ಜೀವಂತವಾಗಿ ಉಳಿದುಕೊಂಡು ಬಂದುದು ಅದರಲ್ಲಿ ಆಶ್ರಯಿಸಿರುವ ಸೂಕ್ಷ್ಮ ಜೀವಿಗಳು, ಸಸ್ಯಗಳು…