ತೋಟಕ್ಕೆ ಸೊಪ್ಪು ಹಾಕಿ- ಮಣ್ಣಿನ ಆರೋಗ್ಯ ಹೆಚ್ಚಿಸಿ.
ತೋಟಕ್ಕೆ, ಗದ್ದೆಗೆ ಹಾಗೆಯೇ ಇನ್ನಿತರ ಬೆಳೆಗಳಿಗೆ ಅನಾದಿ ಕಾಲದಿಂದಲೂ ರೈತರು ಸೊಪ್ಪು ಹಾಕುತ್ತಿದ್ದರು. ಸೊಪ್ಪು ಹಾಕುವುದರಿಂದ ತುಂಬಾ ಪ್ರಯೋಜನ ಇದೆ. ಇದು ಉತ್ತಮ ಬೇಸಾಯ ಕ್ರಮ.ಮಣ್ಣಿನ ಸೂಕ್ಷ್ಮಾಣು ಜೀವಿಗಳ ಉತ್ತಮ ಕಾರ್ಯಚಟುವಟಿಕೆಗೆ ನೆರವಾಗಲು ಹಸುರೆಲೆ ಗೊಬ್ಬರ ಸಹಾಯಕ. ಸೊಪ್ಪು ಎಂದರೆ ಹಸುರೆಲೆ ಗೊಬ್ಬರ. ಹಸುರೆಲೆಗಳಲ್ಲಿ ಮುಖ್ಯ ಹಾಗೂ ಲಘು ಪೋಷಕಾಂಶಗಳು ಇರುವ ಕಾರಣ ಇದು ಕರಗಿ ಮಣ್ಣಿಗೆ ಸೇರಿ ಪೋಶಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹಸಿ ಸೊಪ್ಪನ್ನು ಹಾಕುತ್ತಾರೆ. ಅದು ಮಳೆಗಾಲ ಕಳೆಯುವಾಗ ಕರಗಿ ಗೊಬ್ಬರವಾಗುತ್ತದೆ….