
ಈ ವಾಸನೆ ಕೀಟಗಳ ಹಾವಳಿಯಿಂದ ಪಾರಾಗುವುದು ಹೇಗೆ?
ಬಹುತೇಕ ಎಲ್ಲಾ ಬೆಳೆಗಳಿಗೂ ರಸ ಹೀರಲು ಒಂದು ತಿಗಣೆ ಪ್ರಭೇದದ ಕೀಟ ಬರುತ್ತದೆ. ಇದು ತರಕಾರಿಗಳು, ಭತ್ತ, ಮೆಣಸು ಮುಂತಾದವುಗಳಲ್ಲಿ ಕುಳಿತು ರಸ ಹೀರಿ ಗಣನೀಯ ಬೆಳೆ ಹಾನಿ ಮಾಡುತ್ತವೆ. ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಬಂಬು ಕೀಟ ಎನ್ನುತ್ತಾರೆ. ಇವು ತಿಗಣೆಗಳು. ವಾಸನೆಯಿಂದ ಕುಡಿವೆ. ಹಾಸಿಗೆಯ ಎಡೆಗಳಲ್ಲಿ ವಾಸ ಮಾಡುವ ತಿಗಣೆಯಂತೆ ಇದು. ಇದು ರಸ ಹೀರಿದ ತರಕಾರಿ, ಹಣ್ಣು ಹಂಪಲುಗಳು ವಾಸನೆಯಿಂದ ಕೂಡಿರುತ್ತದೆ. ಕೈಯಲ್ಲಿ ಮುಟ್ಟಿದರೆ ಸಾಕು ಅಸಹ್ಯ ವಾಸನೆ ಕೊಡಬಲ್ಲ ಸಾವಿರಾರು ಬಗೆಯ…