ಮಣ್ಣಿನ pH ಸ್ಥಿತಿ ಅವಲಂಭಿಸಿ ಫಸಲು ಮತ್ತು ಆರೋಗ್ಯ.
ಮಣ್ಣಿನ ಆರೋಗ್ಯ ಸ್ಥಿತಿಯನ್ನು ಅಳೆಯುವ ಮಾಪಕ pH (Potential of Hydrogen) ಮೌಲ್ಯ. pH ಮೌಲ್ಯ ತಟಸ್ಥವಾಗಿದ್ದರೆ (ಸಮಸ್ಥಿತಿ) ಅದು ಸಹನಾ ಸ್ಥಿತಿ ಯುಳ್ಳ ಮಣ್ಣು ಎನ್ನಿಸುತ್ತದೆ. ಬೆಳೆ ಬೆಳೆಯುವ ಮಣ್ಣು ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ ನಾವು ಕೊಡುವ ಎಲ್ಲಾ ಪೋಷಕಗಳೂ ಸಮರ್ಪಕವಾಗಿ ದೊರೆತು ಬೆಳೆಯಲ್ಲಿ ಫಸಲು ಉತ್ತಮವಾಗುತ್ತದೆ. ಮಣ್ಣಿನ ಆರೋಗ್ಯ ಸಹ ಉತ್ತಮವಾಗಿದ್ದು, ರೋಗ ಕೀಟ ಬಾಧೆಯೂ ಕಡಿಮೆಯಾಗುತ್ತದೆ. ಬಹುತೇಕ ನಾವೆಲ್ಲಾ ತಾಂಬೂಲ ತಿಂದು ಬಲ್ಲವರು. ತಾಂಬೂಲ ಜಾಗಿಯುವಾಗ ವೀಳ್ಯದೆಲೆ, ಸುಣ್ಣ…