ತೆಂಗಿಗೂ ತೊಂದರೆ ಮಾಡುತ್ತಿದೆ- ಬೇರು ಹುಳ
ಎಷ್ಟೇ ಪೊಷಕಾಂಶ ಒದಗಿಸಿದರೂ ಸ್ಪಂದಿಸದೆ, ಮರದ ಗರಿಗಳು ಸದಾ ತಿಳಿ ಹಸುರು ಬಣ್ಣದಲ್ಲಿದ್ದರೆ, ಇಳುವರಿ ತೀರಾ ಕಡಿಮೆ ಇರುವುದೇ ಆಗಿದ್ದರೆ ಅಂತಹ ಮರಕ್ಕೆ ಬೇರು ಹುಳದ ತೊಂದರೆ ಇದೆ ಎಂದು ಸಂಶಯ ಪಡಬಹುದು. ತೆಂಗಿನ ಮರಕ್ಕೆ ಸಾಕಷ್ಟು ನೀರು ಒದಗಿಸಿ- ಗೊಬ್ಬರ ಕೊಡಿ ಒಂದು ವರ್ಷ ತನಕ ಕಾಯಿರಿ. ಎಲೆಗಳು ಹಸುರಾಗದೇ, ಗರಿಗಳು ಹೆಚ್ಚದೇ ಇದ್ದರೆ ಅಂತಹ ಮರಗಳಿಗೆ ಬೇರು ಹುಳ ಬಾಧಿಸಿದೆ ಎಂದು ಖಾತ್ರಿ ಮಾಡಿಕೊಳ್ಳಬಹುದು. ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಬಹುತೇಕ ಹೆಚ್ಚು ಕಡಿಮೆ …