ಅಡಿಕೆ – ತಳಿ ಬೆರಕೆ ಆದರೆ ಇಳುವರಿ ಹೆಚ್ಚುತ್ತದೆ.
ತಳಿ ಯಾವುದೇ ಇದ್ದರೂ ಬರೇ ಒಂದೇ ತಳಿಯನ್ನು ನೆಡುವ ಬದಲು ಸ್ವಲ್ಪ ಪ್ರಮಾಣದಲ್ಲಿ ಬೇರೆ ತಳಿಗಳನ್ನೂ ಮಿಶ್ರಣ ಮಾಡಿದರೆ ಪರಾಗ ಸ್ಪರ್ಶಕ್ಕೆ ಅನುಕೂಲವಾಗಿ ಇಳುವರಿ ಹೆಚ್ಚು ಬರುತ್ತದೆ. ಯಾವಾಗಲು ಬೆರಕೆ ತಳಿಗಳಿದ್ಡಲ್ಲಿ ನೈಸರ್ಗಿಕವಾಗಿ ತಳಿ ಅಭಿವ್ರುದ್ಧಿಯೂ ಆಗುತ್ತದೆ. ಇದು ತೆಂಗು, ಅಡಿಕೆಗೆರಡಕ್ಕೂ ಅನುಕೂಲ. ಅಡಿಕೆ ಬೆಳೆಸಲು ಈಗ ಪ್ರಾದೇಶಿಕ ಇತಿಮಿತಿಗಳು ದೂರವಾಗಿ ಬಯಲು ಸೀಮೆಯಲ್ಲೂ ಬೆಳೆ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಅಡಿಕೆ ಬೆಳೆ ಇದೆ.ಕರಾವಳಿ ಪ್ರದೇಶಕ್ಕೆ ಚಾಲಿಗೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಬೇಕು. ಮಲೆನಾಡು ಮತ್ತು…