ಜೇನಿನಲ್ಲಿ ಕಲಬೆರಕೆ ಯಾಕೆ ಆಗುತ್ತಿದೆ?
ಒಬ್ಬ ಜೇನು ಸಾಕಾಣಿಕೆ ಮಾಡುವವನು ಅಂಗಡಿಯ ಜೇನನ್ನು ಉಚಿತವಾಗಿ ಕೊಟ್ಟರೂ ಖರೀದಿ ಮಾಡಲಾರ. ಅವನಿಗೆ ಗೊತ್ತಿದೆ ಯಾವುದು ಶುದ್ಧ ಜೇನು ಎಂದು. ಜನರಿಗೆ ಅರೋಗ್ಯ ಕಳಕಳಿ ಹೆಚ್ಚುತ್ತಿದೆ. ಅವರು ಆರೋಗ್ಯಕ್ಕಾಗಿ ಮಾಡುವುದೆಲ್ಲಾ ಅನಾರೋಗ್ಯವನ್ನು ಆಹ್ವಾನಿಸುತ್ತದೆ. ಜನ ಮಂಗ ಆಗುತ್ತಾರೆಯೇ ಹೊರತು ಮಂಗ ಮಾಡುವುದಲ್ಲ. ಜೇನು ಸಂತತಿ ಕಡಿಮೆಯಾಗಿದೆ. ಪರಾಗದಾನಿಗಳು ಇಲ್ಲದೆ ಬೆಳೆ ನಷ್ಟವಾಗುತ್ತಿದೆ ಎಂಬುದಾಗಿ ಬಲ್ಲವರು ಎಚ್ಚರಿಸುತ್ತಿದ್ದಾರೆ. ಕಾಡು ಕಡಿಮೆಯಾಗಿದೆ. ಪುಷ್ಪಗಳು ಇಲ್ಲದಾಗಿದೆ. ಆಹಾರ ಇಲ್ಲದೆ ಜೇನಿನ ಸಾಕಾಣಿಕೆಗೆ ತೊಂದರೆಯಾಗಿದೆ ಎಂದು ಎಲ್ಲಾ ಕಡೆಯಲ್ಲೂ ಎಚ್ಚರಿಕೆಗಳು ಕೇಳಿ…