ರಬ್ಬರ್ ಜೇನು ಎಷ್ಟು ಉತ್ತಮ?
ರಬ್ಬರ್ ಮರದಲ್ಲಿ ಚಿಗುರುವ ಸಮಯದಲ್ಲಿ ಎಲೆ ಭಾಗದಲ್ಲಿ ಒಂದು ರಸ ಸ್ರವಿಸುತ್ತದೆ. ಇದು ಮಾರ್ಚ್ ತನಕವೂ ಮುಂದುವರಿಯುತ್ತದೆ. ಈಗ ಹಿಂದಿನಂತೆ ಕಾಡು ಜೇನು ಕಡಿಮೆ. ಇರುವುದು ಬಹುತೇಕ ರಬ್ಬರ್ ಮರದ ಜೇನು. ಜೇನು ಎಂದರೆ ಅದು ನಿಸರ್ಗದ ವೈವಿಧ್ಯಮಯ ಹೂವುಗಳ ಮಧುವನ್ನು ಜೇನು ನೊಣ ಎಂಬ ಜೀವಿ ತನ್ನ ಶರೀರದ ಒಳಗೆ ಹೀರಿಕೊಂಡು ಸಂಗ್ರಹಿಸಿದ ದ್ರವ. ನೊಣಗಳು ಅದನ್ನು ತಮ್ಮ ಗೂಡಿಗೆ ತರುತ್ತವೆ. ಅಲ್ಲಿ ಸ್ವಲ್ಪ ಕಾಲ ತಮ್ಮ ದೇಹದಲ್ಲಿ ಇಟ್ಟುಕೊಂಡು ನಂತರ ಅದನ್ನು ತಾವೇ ನಿರ್ಮಿಸಿದ…