ರಬ್ಬರ್ ಜೇನು ಎಷ್ಟು ಉತ್ತಮ?

ರಬ್ಬರ್ ತೋಟದಲ್ಲಿ ಜೇನು ಪೆಟ್ಟಿಗೆ

ರಬ್ಬರ್ ಮರದಲ್ಲಿ ಚಿಗುರುವ ಸಮಯದಲ್ಲಿ ಎಲೆ ಭಾಗದಲ್ಲಿ ಒಂದು ರಸ ಸ್ರವಿಸುತ್ತದೆ. ಇದು ಮಾರ್ಚ್ ತನಕವೂ ಮುಂದುವರಿಯುತ್ತದೆ.  ಈಗ ಹಿಂದಿನಂತೆ ಕಾಡು ಜೇನು ಕಡಿಮೆ. ಇರುವುದು ಬಹುತೇಕ ರಬ್ಬರ್ ಮರದ ಜೇನು.

 •  ಜೇನು ಎಂದರೆ ಅದು ನಿಸರ್ಗದ  ವೈವಿಧ್ಯಮಯ ಹೂವುಗಳ ಮಧುವನ್ನು ಜೇನು ನೊಣ ಎಂಬ ಜೀವಿ ತನ್ನ ಶರೀರದ ಒಳಗೆ  ಹೀರಿಕೊಂಡು ಸಂಗ್ರಹಿಸಿದ ದ್ರವ.
 • ನೊಣಗಳು  ಅದನ್ನು ತಮ್ಮ ಗೂಡಿಗೆ ತರುತ್ತವೆ. ಅಲ್ಲಿ ಸ್ವಲ್ಪ ಕಾಲ ತಮ್ಮ ದೇಹದಲ್ಲಿ ಇಟ್ಟುಕೊಂಡು ನಂತರ ಅದನ್ನು ತಾವೇ ನಿರ್ಮಿಸಿದ ಜೇನು ಸಂಗ್ರಹಣಾ ಪಾತ್ರೆ  ‘ಎರಿ’ ಗೆ ತುಂಬಿಸುತ್ತವೆ.
 • ಸ್ವಲ್ಪ ಸ್ವಲ್ಪವೇ ಒಂದೊಂದೇ ಕೋಣೆಗೆ ತುಂಬಿಸುತ್ತಾ ಪೂರ್ತಿ ಎರಿಯ ಕೋಣೆಯೊಳಗೆ ಜೇನನ್ನು ಭರ್ತಿ ಮಾಡುತ್ತವೆ.

ಆರೋಗ್ಯಕರ ಜೇನು ಯಾವುದು?

 • ಜೇನು ಎಂದರೆ ವೈವಿಧಯಮಯ ಪುಷ್ಪಗಳ ಸಿಹಿ ಅಂಶ.
 • ನಿಸರ್ಗದಲ್ಲಿರುವ ಬೇರೆ ಬೇರೆ ಪುಷ್ಪಗಳ ಎಸಳುಗಳ ಸಮೀಪ ಈ ಸಿಹಿ ಪದಾರ್ಥ ಮಿಲಿ ಗ್ರಾಂ ಲೆಕ್ಕದಲ್ಲಿ  ಇರುತ್ತದೆ. 
 • ಇದನ್ನು ಜೇನು ನೊಣ ಮತ್ತು ಇನ್ನಿತರ ಸಣ್ಣ ಶರೀರದ ನೊಣಗಳು ಮಾತ್ರ  ಹುಡುಕಿ ಹೀರಲು ಸಾಧ್ಯವೇ ಹೊರತು ಉನ್ನತ  ಜೀವಿಗಳಿಗೆ  ಸಾಧ್ಯವಿಲ್ಲ.ಇದು ಪ್ರಾಕೃತಿಕ ಕ್ರಿಯೆ.


ಜೇನು ತುಂಬಿಸಿದಾಕ್ಷಣ ಅದು ಜೇನಾಗುವುದಿಲ್ಲ. ಅ ಜೇನಿನಲ್ಲೆ ಏನಾದರೂ ತೇವಾಂಶ ಇದ್ದರೆ ಅದೆಲ್ಲಾ  ಅವಿಯಾಗುವ ತನಕ ಎರಿಯ ಮೇಲೆ ಜೇನು ನೊಣಗಳು ತಮ್ಮ ರೆಕ್ಕೆಯ ಮೂಲಕ  ಗಾಳಿ ಬೀಸುವ ಮೂಲಕ ಅದರ ತೇವಾಂಶವನ್ನು 18 -20 % ಕ್ಕೆ ಇಳಿಸುತ್ತವೆ. ನಂತರ ಜೇನು ತುಂಬಿದ ಕೋಣೆಯನ್ನು ಮೇಣದ ಮೂಲಕ ಸೀಲ್ ಮಾಡುತ್ತವೆ. ಆ ಜೇನು ಪರಿಶುದ್ಧ ಜೇನಾಗಿರುತ್ತದೆ. ಇದನ್ನು ಪಕ್ವ ಜೇನು ಜೇನು ಎಂದು ಕರೆಯುತ್ತಾರೆ.

ರಬ್ಬರ್ ಎಲೆಯಲ್ಲಿ ಜೇನು ಇರುವ ಭಾಗ
ರಬ್ಬರ್ ಎಲೆಯಲ್ಲಿ ಜೇನು ಇರುವ ಭಾಗ
 • ಈ ಪ್ರಕ್ರಿಯೆಯಲ್ಲಿ ಹಲವು ವಿಚಾರಗಳಿವೆ. ಅದೆಲ್ಲಾ ನಂತರ  ತಿಳಿಯೋಣ.
 • ಹೂವುಗಳು ಯಾವುದೇ ಸಸ್ಯಗಳದ್ದು ಆಗಬಹುದು.
 • ಅದೆಲ್ಲವೂ ಒಟ್ಟು ಸೇರಿದಾಗ ಅದರ ಸತ್ವಾಂಶಗಳು ಜೇನಿನಲ್ಲಿ  ಸೇರಿ ಅದು ಆರೋಗ್ಯಕರ ಜೇನು ಎನಿಸಿಕೊಳ್ಳುತ್ತದೆ.
 • ಒಂದೇ ಬಗೆಯ ಹೂವಿನ ಜೇನಿನಲ್ಲಿ  ಒಂದು ನಿರ್ದಿಷ್ಟ ಅಂಶ ಮಾತ್ರ ಇರುತ್ತದೆ.
 • ಈಗ ನಮ್ಮಲ್ಲಿ ಮರಮಟ್ಟುಗಳು ಕಡಿಮೆಯಾಗಿವೆ.
 • ವೈವಿಧ್ಯಮಯ ಕಾಡು ಮಾರಗಳ ಜೇನು  ಉತ್ಪಾದನೆಗೆ ಅವಕಾಶವೇ ಇಲ್ಲದ ಸ್ಥಿತಿ ಉಂಟಾಗಿದೆ.


ಆದರೆ  ಜೇನು ಎಂಬ ವ್ಯವಹಾರ ಮಾತ್ರ  ಹಿಂದಿಗಿಂತ ಜಾಸ್ತಿಯಾಗಿದೆ!.

 • ಈಗ ಲಭ್ಯವಾಗುವ ಜೇನಿನಲ್ಲಿ ನಾವು ಬೇರೆ ಬೇರೆ  ಮರಗಳ ಹೂವಿನ ಸಿಹಿ ರಸವನ್ನು ಪಡೆಯುವುದು ಅಸಾಧ್ಯ. ಅಂಥಃ ಜೇನಿನ ಉತ್ಪಾದನೆಯೂ ಈಗ ಆಗುತ್ತಿಲ್ಲ.
 • ಜೇನನ್ನು ಈಗ ಕೃತಕವಾಗಿ ತಯಾರು ಮಾಡುವ ದಂಧೆ  ಅಲ್ಲಲ್ಲಿ ಇದೆ.
 • ಜೇನು  ನೊಣಗಳಿಗೆ  ಸಕ್ಕರೆ ಅಥವಾ ಬೆಲ್ಲದ ದ್ರಾವಣವನ್ನು  ಸದಾ ತಿನ್ನಿಸುತ್ತಾ  ಅದರ ಮೂಲಕ ಜೇನನ್ನು ಉತ್ಪಾದನೆ  ಮಾಡಲಾಗುತ್ತದೆ ಎಂದು ಕೇಳಿ ಬರುತ್ತಿದೆ.

ಏಕ ಬೆಳೆಗಳ ಜೇನು:

 • ಅಡಿಕೆ ತೋಟಗಳು ಮತ್ತು ರಬ್ಬರ್ ತೋಟಗಳು ಹೆಚ್ಚಿದೆ. ಈ ಬೆಳೆಗಳಲ್ಲೂ ಜೇನಿನ ಉತ್ಪಾದನೆ  ಆಗುತ್ತದೆ.
 • ಆದರೆ ಅದರ ಆರೋಗ್ಯ ಗುಣದ ಬಗ್ಗೆ ಹೇಳುವಂತಿಲ್ಲ.
 • ರಬ್ಬರ್  ಮರದ ಹೂವಿನಲ್ಲಿ ಯಾವುದೇ ಮಧು ಇರುವುದಿಲ್ಲ.
 • ಅದರ ಪತ್ರ ದಂಟಿನಲ್ಲಿ ಎಲೆ ಮೂಡುವ ಭಾಗದಲ್ಲಿ ಒಂದು ಸಿಹಿ ರಸ ಉತ್ಪಾದನೆಯಾಗುತ್ತದೆ.
 • ಇದು ಒಂದು ಪುಷ್ಪದ ಜೇನಿಗಿಂತ 5 ಪಟ್ಟು ಹೆಚ್ಚು.
 • ಇದನ್ನು ಜೇನು ನೊಣಗಳು ಸಂಗ್ರಹಿಸಿ ಜೇನು ಮಾಡುತ್ತವೆ.

ಈಗ ಲಭ್ಯವಿರುವ ಬಹುತೇಕ ಜೇನು ರಬ್ಬರ್ ಹಾಗೂ ಅಡಿಕೆ  ಮರಗಳ ಜೇನಾಗಿರುತ್ತದೆ. ಅಡಿಕೆ ಮರಗಳ ಹೂವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೇನು ಇರುವುದಿಲ್ಲ. 

 • ಇಂತಹ  ಕೆಲವು ಜೇನನ್ನು ಪರಿಶುದ್ಧ ಜೇನು ಎಂದು ಹೇಳುವಂತಿಲ್ಲ.
 •  ಕೆಲವರು ಸಂಗ್ರಹಿಸುವ ವಿಧಾನವೂ ತೀರಾ ವ್ಯಾವಹಾರಿಕವಾಗಿವೆ.
 • ಸಮರ್ಪಕವಾಗಿ ಪಕ್ವವಾಗುವ ಮುನ್ನ  ಜೇನನ್ನು ತೆಗೆಯಲಾಗುತ್ತದೆ.
 • ಅವೈಜ್ಞಾನಿಕ ವಿಧಾನದಲ್ಲಿ ಸಂಗ್ರಹ ಮಾಡಲಾಗುತ್ತದೆ.
 • ಆಹಾರ ಶ್ರೇಣಿಯಲ್ಲದ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡಲಾಗುತ್ತದೆ.
 • ಈ ಜೇನು ಹುಳಿ ಬರುವುದು ಬೇಗ.  ಹುಳಿ ಬಂದ ಜೇನು ಸೇವನೆಗೆ ಯೋಗ್ಯವಲ್ಲ.


ಪಕ್ವ ಜೇನು ಎಂದರೆ ಇಳಿಯುವಾಗ ಬಿದ್ದ ಭಾಗದಲ್ಲಿ ಕುಳಿ ಬೀಳದೆ ಮೇಲೆ ಎತ್ತರ ಬೀಳಬೇಕು. ಅಂಥಹ ಜೇನನ್ನು ನೀವು ಕಂಡಿದ್ದೀರಾ? ತಿಂದಿದ್ದೀರಾ. ಅದು ಈಗ ದೊರೆಯುವುದು ಕಷ್ಟ.

Leave a Reply

Your email address will not be published. Required fields are marked *

error: Content is protected !!