ಸಾಗುವಾನಿ ಬೆಳೆದರೆ ಮಣ್ಣು ಫಲವತ್ತಾಗುತ್ತದೆ.

ಸಾಗುವಾನಿ ಮರಗಳಲ್ಲಿ ಅತ್ಯಧಿಕ ಎಲೆಗಳು

ಜೀವಾಣುಗಳಿಂದ ಸಮೃದ್ಧವಾದ ಮಣ್ಣು  ಇರುವುದು ಮಾನವನ ಹಸ್ತಕ್ಷೇಪ ಇಲ್ಲದ ಕಾಡಿನ ಮಣ್ಣು ಮತ್ತು ಸಾಗುವಾನು ಮರದ ಬುಡದ ಮಣ್ಣಿನಲ್ಲಿ. ಯಾಕೆಂದರೆ ಸಾಗುವಾನಿ ಮರದ ಎಲೆಗಳ ರಚನೆಯೇ ಹಾಗೆ.

ಸಾಗುವಾನಿ ಮರದ ಬುಡದಲ್ಲಿ  ಬೇಸಿಗೆಯಲ್ಲಿ ನಡೆದುಕೊಂದು ಹೋದರೆ  ಚಕ್ಕುಲಿ  ಹುಡಿಯಾದ ಸದ್ದು ಕೇಳಿಸುತ್ತದೆ. ಮಳೆಗಾಲದಲ್ಲಿ ನಡೆದುಕೊಂಡು ಹೋದರೆ  ಜಾರಿ ಬೀಳಬಹುದು ಅಷ್ಟು ಪ್ರಮಾಣದ ಮೆಕ್ಕಲು ಮಣ್ಣು ಬುಡದಲ್ಲಿ ಸಂಗ್ರಹವಾಗಿರುತ್ತದೆ. ಇದು ಸಾಗುವಾನಿ ಮರದ ವೈಶಿಷ್ಟ್ಯ.

ಸಾಗುವಾನಿ ಅಥವಾ ತೇಗದ ಮರ ಎಲ್ಲಾ ಪ್ರದೇಶಗಳಲ್ಲೂ ಬೆಳೆಯುವ ಮರಮಟ್ಟು. ಕೃಷಿ ಅರಣ್ಯವೂ ಹೌದು. ಕಾಡಿನ ಮರವೂ ಹೌದು. ಒಂದು ಕೃಷಿ ಹೊಲದಲ್ಲಿ ಒಂದಷ್ಟು ಸಾಗುವಾನಿ ಮರಗಳಿದ್ದರೆ ಅದುವೇ ಶೋಭೆ ಎನ್ನುವ ಹಲವಾರು ರೈತರು ಇದ್ದಾರೆ. ಸಾಗುವಾನಿ ಎಂಬುದು ವರ್ಷ ವರ್ಷವೂ ಅಗಾಧ ಪ್ರಮಾಣದಲ್ಲಿ ಎಲೆ ಉದುರಿಸುತ್ತದೆ. ಇದರ ಎಲೆಗಳು ಇತರ ಮರಮಟ್ಟುಗಳ ಎಲೆಗಳಿಗಿಂತ ತುಂಬಾ ದೊಡ್ಡದು. ಇದು ಬೇಗ ಕರಗಿ ಗೊಬ್ಬರವಾಗುವಂತದ್ದು.

ಸಾಗುವಾನಿ ನೆಡು ತೋಪು – Teak plantations

ಸಾಗುವಾನಿ ಎಲೆ ಉದುರುವುದೇ ವರ:

  • ತೇಗದ ಮರ ವರ್ಷದಲ್ಲಿ ಒಮ್ಮೆ ಎಲ್ಲಾ ಎಲೆಗಳನ್ನೂ  ಉದುರಿಸಿವ ಸಸ್ಯ.
  • ಡಿಸೆಂಬರ್ ನಿಂದ ಮಾರ್ಚ್ ವರೆಗೆ ಎಲೆ ಉದುರಿಸುತ್ತವೆ.
  •  ಪ್ರಖರ ಬಿಸಿಲಿರುವಾಗ ಮರ ಚಿಗುರಿಕೊಳ್ಳುತ್ತದೆ.
  • ನಂತರ ಚಿಗುರುತ್ತವೆ.  ತೇಗದ ಎಲೆಗಳು ದೊಡ್ಡದಾಗಿದ್ದು ಅಗತ್ಯ ತೇವಾಂಶ ದೊರೆತ ತಕ್ಷಣ ಶಿಥಿಲವಾಗುತ್ತದೆ.
  • ಎಲೆ ಉದುರಿಸಿದಾಗ ತೇಗದ ತೋಪಿನಲ್ಲಿ  ನಡೆದುಕೊಂಡು ಹೋಗುವಾಗ ಸದ್ದು ಆಗುತ್ತದೆ.
  • ನೀಲಗಿರಿ, ಗೇರು, ರಬ್ಬರ್,ಅಕೇಶಿಯಾ ಮುಂತಾದ ಗಿಡದ ಎಲೆಗಳು ಕಳಿಯುವುದಕ್ಕೆ ಹೆಚ್ಚು ಸಮಯ ಬೇಕು.
  • ಅದರಲ್ಲಿ ಲಿಗ್ನಿನ್ ಅಂಶ ಹೆಚ್ಚು.
  • ಆದರೆ  ಸಾಗುವಾನಿ ಗಿಡದ ಎಲೆ 6 ತಿಂಗಳಲ್ಲಿ ಕಳಿತು ಮಣ್ಣಿನೊಂದಿಗೆ ವಿಲೀನವಾಗುತ್ತದೆ.
  • ತೇಗದ ಮರದ ನೆಡು ತೋಪು ಮೋನೋಕಲ್ಚರ್ ಆಗುವುದಿಲ್ಲ.
  • ಇದು ತನ್ನ ಅಡಿಯಲ್ಲಿ  ಇತರ ಸಸ್ಯವರ್ಗವನ್ನೂ ಬದುಕಲು ಬಿಡುತ್ತದೆ.
  • ಮಣ್ಣಿನಲ್ಲಿ  ಸಾವಯವ ಅಂಶ ಹೆಚ್ಚಳವಾಗಿ ಮಣ್ಣು ಜೈವಿಕವಾಗಿ  ಸಂಪಧ್ಭರಿತವಾಗುತ್ತದೆ.
  • ಎಲೆಗಳು ದೊಡ್ಡದಿದ್ದು, ಅದರ ಮೇಲೆ  ಬಿದ್ದ ಮಳೆ ನೀರು ಮಣ್ಣು ಕೊಚ್ಚಣೆಯನ್ನು ತಡೆಯುತ್ತವೆ.
  • ಉಷ್ಟ ವಲಯದ ಕಾಡುಗಳ ಮಣ್ಣಿನಲ್ಲಿ ಇರುವ ಎಲ್ಲಾ ನಮೂನೆಯ ಜೀವಾಣುಗಳೂ ಇದರ ಬುಡದಲ್ಲಿ  ಇರುತ್ತವೆ.

ಸಾಗುವಾನಿ ಮಣ್ಣನ್ನು ಫಲವತ್ತಾಗಿಸುತ್ತದೆ:

ಸಾಗುವಾನಿ ಮರದ ಸೊಪ್ಪು ಬಿದ್ದಲ್ಲಿ ಎರೆಹುಳುಗಳ ಚಟುವಟಿಕೆ ಅಧಿಕ – Teak plantations provide food for Worms

ತೇಗದ ಮರದ ಅಡಿಯಲ್ಲಿರುವ ಮಣ್ಣಿನಲ್ಲಿ ಸಾವಯವ ಅಂಶವು(Organic matter)  ಮತ್ತು ಸತ್ವಾಂಶಗಳು( Nutrients) ಅತ್ಯಧಿಕವಾಗಿರುತ್ತವೆ.ಅದರಲ್ಲೂ ಕ್ಯಾಲ್ಸಿಯಂ 3.74 % ಅತ್ಯಧಿಕವಾಗಿರುತ್ತದೆ.ಇದಕ್ಕೆ ಬಹುಷಃ ತೇಗದ ಮರ ಹೆಚ್ಚು ಎಲೆ ಉದುರಿಸುವುದೇ ಕಾರಣ ಇರಬಹುದು. ಈ ಎಲೆಗಳು ಮಣ್ಣಿನಲ್ಲಿ ಎರೆಹುಳುಗಳಿಗೆ ಉತ್ತಮ ಆಹಾರವಾಗುತ್ತವೆ.

  • ಮಳೆಗಾಲ ಮತ್ತು ಚಳಿಗಾಲದಲ್ಲಿ  ಹಕ್ಕಿಗಳು ತೇಗದ ಮರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡುತ್ತಿರುತ್ತವೆ.
  • ಕಾರಣ ಇದರ ಸೊಪ್ಪು ದೊಡ್ದದಿದ್ದು, ರಕ್ಷಣೆ  ಕೊಡುವಂತಿವೆ.
  • ಈ ಹಕ್ಕಿಗಳು ತಿಂದು ಹಾಕುವ ಹಲವು ಬೀಜಗಳು ಈ ತೋಪಿನ ಒಳಗೆ ಮೊಳೆತು ಸಸ್ಯ ಜೀವ ವೈವಿಧ್ಯಗಳಿಗೆ ಬೆಳೆಯಲು ಅನುಕೂಲ ಪರಿಸ್ಥಿತಿಯಾಗಿರುತ್ತವೆ.
  • ಹುಲ್ಲು ಬೆಳೆಯುವುದಿಲ್ಲ ಎಂಬ ಅಭಿಪ್ರಾಯ ಇದೆಯಾದರೂ ನೆಲದಲ್ಲಿ ಬೀಳುವ ತರಗೆಲೆಯನ್ನು  ತೆಗೆದು ಬೇರೆ ಕಡೆ ಮುಚ್ಚಿಗೆಯಾಗಿ ಬಳಸಿದಲ್ಲಿ  ಹುಲ್ಲಿನ ಬೀಜಗಳು ಗಾಳಿಯ ಮೂಲಕ ಬಂದು ಮಳೆಗಾಲದಲ್ಲಿ  ಮೊಳೆಯುತ್ತವೆ.

 ಉದುರಿದ ಎಲೆಗಳಿಂದ ಪ್ರಯೋಜನ:

  • ಬೇಸಿಗೆಯ ಎಲೆ ಉದುರಿಸುವ ಸಮಯದಲ್ಲಿ ತೇಗದ ಮರದ ಆಡಿಯಲ್ಲಿ ಎಲೆಗಳೇ ಹಾಸಲಾಗಿದ್ದರೂ ಇದು ಮಣ್ಣಿಗೆ  ಪ್ರಯೋಜನವೇ ಹೊರತು ನಷ್ಟವಿಲ್ಲ.
  • ಇದರಿಂದ ನೆಲದ ನೀರಿನ ಆವೀಕರಣ ತಡೆಯಲ್ಪಡುತ್ತದೆ.
  • ಸಾಗುವಾನಿ ಮರದ ನಿರ್ವಹಣೆ ಮಾಡುವಾಗ ಅನಿವಾರ್ಯವಾಗಿ ಕಡಿಯಬೇಕಾಗಿ ಬರುವ ಗೆಲ್ಲುಗಳಿಂದ ದೊರೆಯುವ ಸೊಪ್ಪು  ಉತ್ತಮ ಪೋಷಕಾಂಶವನ್ನು ಒಳಗೊಂಡಿರುತ್ತದೆ.
  • ಸಾಗುವಾನಿ ಮರಗಳಿರುವ ತೋಟದ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಿಸಿ ಕೊಡುವ ಮೈಕೋರೈಜಾ ಜೀವಾಣುಗಳು ಇರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ಸಾಗುವಾನಿ ತೋಟದಲ್ಲಿ ಮಾನವನ ಹಸ್ತಕ್ಷೇಪ ಇಲ್ಲದಿದ್ದರೆ ಸಾಕಷ್ಟುಸಸ್ಯ ವೈವಿಧ್ಯಗಳು ಹುಟ್ಟಿಕೊಳ್ಳುತ್ತವೆ.ಸಾಗುವಾನಿ ನೆಟ್ಟವರು ಅದು ಉತ್ತಮ ಮರಮಟ್ಟು ಆಗಬೇಕಾದರೆ ಗೆಲ್ಲು ಸವರುವುದನ್ನು ಮಾಡಬಾರದು. ಅದರಷ್ಟಕ್ಕೇ ಉದುರಿದ ಎಲೆಗಳನ್ನು ಬಳಸಿಕೊಳ್ಳಬಹುದು. ಅಲ್ಲೇ ಬಿಡುವುದರಿಂದ ಮರ ವರ್ಷದಿಂದ ವರ್ಷಕ್ಕೆ  ಹೆಚ್ಚು ಹೆಚ್ಚು ಬೆಳೆಯುತ್ತಾ ಹೋಗುತ್ತದೆ.

Leave a Reply

Your email address will not be published. Required fields are marked *

error: Content is protected !!