ಪ್ರಪಂಚದಲ್ಲೇ ಅತೀ ಉತ್ಕೃಷ್ಟ ಸಾಗುವಾನಿ ತಳಿ ಇದು.

by | May 12, 2022 | Agro Forestry (ಕೃಷಿ ಅರಣ್ಯ) | 0 comments

ಕೆಲವೊಂದು ಮರಮಟ್ಟುಗಳು ಅವುಗಳ ವಂಶ ಗುಣಕ್ಕನುಗುಣವಾಗಿ ಚೆನ್ನಾಗಿ ಬೆಳೆಯುತ್ತದೆ. ಕೆಲವು ಎಷ್ಟೇ ಪಾಲನೆ ಪೋಷಣೆ  ಮಾಡಿದರೂ ಬೆಳವಣಿಗೆ ಕಡಿಮೆ. ತಳಿ ಆಯ್ಕೆ ಮಾಡುವಾಗ ಯಾವಾಗಲೂ ಉತ್ತಮ ವಂಶ ಗುಣದ ತಳಿಯನ್ನೇ ಆಯ್ಕೆ ಮಾಡುವುದು ಕ್ರಮ. ಕೇರಳದ ನಿಲಂಬೂರು ಎಂಬಲ್ಲಿ  ಇಂತಹ ವಂಶ ಗುಣದ ಸಾಗುವಾನಿ ತಳಿಯನ್ನು  ಬ್ರಿಟೀಷರೇ ಆಯ್ಕೆ ಮಾಡಿದ್ದಾರೆ. ಸ್ವಾತಂತ್ರ್ಯಾ ನಂತರ ನಾವೂ ಅದನ್ನು ಮುಂದುವರಿಸಿದ್ದೇವೆ. ಪ್ರಪಂಚದಲ್ಲೇ ಅತ್ಯುತೃಷ್ಟ ಸಾಗುವಾನಿ ಎಂದು ಇದ್ದರೆ ಅದು

ಯಾವುದೇ ಒಂದು ಸಸ್ಯ- ಪ್ರಾಣಿ ಅದರ ಉತ್ಕೃಷ್ಟ ಗುಣಮಟ್ಟಕ್ಕೆ ಅದರ ವಂಶ ಗುಣ ಕಾರಣ. ಕೇರಳದ ನೆಲಂಬೂರು ಎಂಬಲ್ಲಿನ ಸಾಗುವಾನಿ ಯನ್ನು ಬ್ರಿಟೀಷರು ಪ್ರಪಂಚದ ಅತೀ ಉತ್ಕೃಷ್ಟ ಸಾಗುವಾನಿ ಎಂದು ಪರಿಗಣಿಸಿದ್ದಾರೆ ಅದನ್ನು ಇಲ್ಲಿ ಬೆಳೆಸಿ ಸಂರಕ್ಷಿಸಿದ್ದಾರೆ.

ಸಾಗುವಾನಿ ಮರ:

 • ನಮ್ಮ ದೇಶವೂ ಸೇರಿದಂತೆ ಸಾಗುವಾನಿ ಬೆಳೆಯಲ್ಪಡುವ ಎಲ್ಲಾ ಕಡೆಯಲ್ಲೂ ಈ ಮರವು ನೈಸರ್ಗಿಕವಾಗಿಯೇ ಬೆಳೆಯಲ್ಪಡುತ್ತಿತ್ತು.
 • ಅದರದ್ದೇ ಬೀಜಗಳು ಬಿದ್ದು ಹುಟ್ಟಿ, ಸಸಿಯಾಗಿ ಮರವಾಗಿ ಬೆಳೆಯುತ್ತಿತ್ತು.
 • ಇಂತಹ ಅಪಾರ ಸಂಖ್ಯೆಯ ಮರಗಳು ನಮ್ಮಲ್ಲಿತ್ತು.
 • ಸಾಗುವಾನಿಯ ಬೀಜವನ್ನು ಸಸಿ ಮಾಡಿ ಅದನ್ನು ನೆಟ್ಟು ಸಾಗುವನಿ ತೋಟ ಮಾಡುವ ವಿಧಾನವು ಬ್ರಿಟೀಷರ ಮುತುವರ್ಜಿಯಲ್ಲಿ ಚಾಲನೆಗೆ ಬಂತು.

ಕೇರಳ ರಾಜ್ಯದ ಮಲಪ್ಪುರಂ  ಜಿಲ್ಲೆಯಲ್ಲಿ ಒಂದು ಊರು ನೀಲಂಬೂರು. ಇದು ಸಾಗುವಾನಿಗೆ  ಹೆಸರುವಾಸಿಯಾದ ಊರು. ಕೇರಳದಲ್ಲಿ ಸಾಗುವಾನಿಗೆ ‘ಕನ್ನಿಮರ’ ಎನ್ನುತ್ತಾರೆ. ಇಲ್ಲಿ ಏಷ್ಯಾ ಖಂಡದಲ್ಲೇ ಅತೀ ದೊಡ್ಡದಾದ ತೇಗದ ಮ್ಯೂಸಿಯಂ ಇದೆ. ಇದನ್ನು ಕೇರಳ ಅರಣ್ಯ ಸಂಶೋಧನಾ ಸಂಸ್ಥೆ ನಿರ್ವಹಿಸುತ್ತಿದೆ. ವಿಶ್ವದಲ್ಲೆ ಅತೀ ಹಳೆಯದಾದ ತೇಗದ ನೆಡು  ತೋಪು ಸಹ ಇಲ್ಲೇ ಇದೆ.

ಪ್ರಪಂಚಕ್ಕೇ ಮಾದರಿ:

ಭಾರೀ ಬೆಲೆಬಾಳುವ ಸಾಗುವಾನಿ ಮರಗಳು

 • ನೀಲಂಬೂರಿನಲ್ಲಿ ಬೆಳೆಸಲಾದ ಸಾಗುವಾನಿಯ ನೆಡು ತೋಪು ವಿಶ್ವಕ್ಕೇ ಮಾದರಿ.
 • ಭಾತರಕ್ಕೆ ವ್ಯಾಪಾರಕ್ಕಾಗಿ ಬಂದ ಬ್ರಿಟೀಷರು ಇಲ್ಲಿಯ ಮರಮಟ್ಟಾದ ಸಾಗುವಾನಿಯನ್ನು ಕಂಡು ಮನಸೋತು ತಮ್ಮ ದೇಶಕ್ಕೆ ಹಡಗು ಗಟ್ಟಲೆ ಮರ ಸಾಗಾಣಿಕೆ ಮಾಡಿದರು.
 • ಕೊನೆಗೆ ಇನ್ನೂ ಬೇಕಾದರೆ ಎಂದು ಸಾಗುವಾನಿ ನೆಡು ತೋಪು ಮಾಡುವ ಮನಸ್ಸು ಮಾಡಿದರು.
 • 1844 ರಲ್ಲಿ ಕೇಳದ ನಿಲಂಬೂರು ಎಂಬಲ್ಲಿ ಸುಮಾರು13 ಹೆಕ್ಟೇರ್ ಪ್ರದೇಶದಲ್ಲಿ ಆಗಿನ ಜಿಲ್ಲಾಧಿಕಾರಿಗಳಾಗಿದ್ದ, ಶ್ರೀ ಎಚ್ ವಿ ಕನೊಲಿ ಎಂಬವರು ಈ ಕೆಲಸ ಮಾಡಿಸಿದ್ದರು
 • ಶ್ರೀ ಚಾತುಮೆನನ್ ಎಂಬ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ  ನೀಲಂಬೂರು ನದಿಯು ಹರಿಯುವ ನಡುಗಡ್ಡೆಯಲ್ಲಿ ಪ್ರಪ್ರಥಮ ಸಾಗುವಾನಿಯ ನೆಡು ತೋಪನ್ನು ಬೆಳೆಸಿದರು.
 • ಇದಕ್ಕೆ ಕನ್ನೊಲಿ  (Kanoli plantation )ಪ್ಲಾಂಟೇಶನ್ ಎಂದು ಹೆಸರು.

ಮಾದರಿ ಸಾಗುವಾನಿ ತೋಟ:

 • ಇಲ್ಲಿ ಈಗಲೂ ಸಾಗುವನಿಯ ನೆಡು ತೋಪು ಇದ್ದು, ಸುಮಾರು 175 ವರ್ಷ ಪ್ರಾಯದ ಮರಗಳು ಇವೆ.
 • ಇಲ್ಲಿ ಕೆಲವು ಮರಗಳು 6 ಮೀ ಸುತ್ತಳತೆಯನ್ನೂ  ಹೊಂದಿರುವುದುಂಟು.
 • ಎತ್ತರ 120 ಅಡಿಗೂ ಮಿಕ್ಕಿ ಬೆಳೆದುದುಂಟು.
 • ನೀಲಂಬೂರು ತೇಗ ಒಂದು ವಿಶಿಷ್ಟ ಗುಣವನ್ನು ಹೊಂದಿದ್ದು, ಇದನ್ನು ಅಭ್ಯಸಿಸಿ ಅದರ ತಳಿ ಗುಣದ ಸಸ್ಯೋತ್ಪಾದನೆ  ಪ್ರಾರಂಭಿಸಲಾಗಿದೆ.
 • ನೀಲಂಬೂರು ತೇಗದ ಸಸಿಗಳು ಉತ್ತಮವಾಗಿ ಬೆಳೆದು, ಉತ್ತಮ ಗುಣಮಟ್ಟದ ಮರವನ್ನು ಕೊಡುತ್ತವೆ.
 • ಇಲ್ಲಿ ಸಾಗುವಾನಿಯ ಸಸಿ ಮಾಡಿ ಅದನ್ನು ಬುಡುಚಿಗಳನ್ನಾಗಿ ಮಾಡಿ ದೇಶದ ಯಾವ ಪ್ರದೇಶದವರು ಬೇಡಿಕೆ ಕೊಟ್ಟರೂ ತಲುಪಿಸುವ ವ್ಯವಸ್ಥೆ ಇದೆ.
 • ಈ ಬುಡುಚಿ Stump ನಾಟಿ ತಂತ್ರಜ್ಞಾನವು ಸುಮಾರು 150 ವರ್ಷಗಳ ಹಿಂದಿನಿಂದಲೂ ಚಾಲ್ತಿಯಲ್ಲಿದ್ದು,
 • ಈ ವಿಧಾನದಲ್ಲಿ ನಾಟಿ ಮಾಡಿ ಬೆಳೆದ ಸಾವಿರಾರು ಹೆಕ್ಟೇರು ಪ್ಲಾಂಟೇಶನ್‍ಗಳು ಕೇರಳ,ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ನಾವು ಕಾಣಬಹುದು.

ಸಾಗುವಾನಿ ಬೆಳೆಸಬೇಕೆಂಬ ಹಂಬಲ ಇದೆಯಾ- ಹಾಗಿದ್ದರೆ ಯಾವ್ಯಾವುದೋ ಸಸ್ಯ ಮೂಲಕ್ಕೆ ಹೋಗಬೇಡಿ. ನೀಲಂಬೂರು ತೇಗ ನೆಡಿ. ಇದು ತುಂಬಾ ಅಗ್ಗ ಸಹ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!