ಸಾಗುವಾನಿ ಬೆಳೆಸಲು ಈ ಕಡ್ಡಿ ಸಾಕು.

stump planted teak

ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ಒಂದು ಅರಣ್ಯ ಪ್ರದೇಶ ಎಂದೇ ಹೇಳಬಹುದು. ಇದು ಪಶ್ಚಿಮ ಘಟ್ಟದ ತಪ್ಪಲು. ಸ್ವಲ್ಪ ಮುಂದೆ ಹೋದರೆ ತಮಿಳುನಾಡಿನ ಗಡಿ. ಅದನ್ನು ದಾಟಿದರೆ  ಕರ್ನಾಟಕದ ಬಂಡೀಪುರ. ಈ ಬೆಟ್ಟ ಗುಡ್ಡಗಳ ಪ್ರದೇಶದುದ್ದಕ್ಕೂ ನೈಸರ್ಗಿಕವಾಗಿ ಬೆಳೆದ ಮರಮಟ್ಟುಗಳು, ನೆಟ್ಟು ಬೆಳೆಸಿದ ಸಾಗುವಾನಿಯ ಮರಮಟ್ಟುಗಳು, ಹೇರಳವಾಗಿ ಕಾಣಸಿಗುತ್ತವೆ. ಇಲ್ಲೆಲ್ಲಾ ಇರುವುದು ಸಾಗುವಾನಿ ( ತೇಗದ) ಬೇರು ತುಂಡು (stump) ನೆಟ್ಟ ಮರಗಳು.

ನೇರವಾಗಿ ನೆಡುವ ಬುಡುಚಿ- Direct planting  stump

ಪ್ರಾರಂಭ:

  • ಅದು ಬ್ರೀಟೀಷರ ಕಾಲ 1840 ರಲ್ಲಿ ಇವರು ತ್ರಿಕಾಲಿಯೂರು ದೇವಸ್ವಂ Thrikkaliyur Dewaswom  ಇವರಿಂದ 50 ಚದರ ಮೈಲು ಅರಣ್ಯ ಪ್ರದೇಶವನ್ನು ಲೀಸ್ ಗೆ ಪಡೆದು ಅಲ್ಲಿ ಮೊದಲ ತೇಗದ ಪ್ಲಾಂಟೇಶನ್ ಪ್ರಾರಂಭಿಸಿದ ಇತಿಹಾಸ ಇದೆ.
  • ಆಗ ಮಲಬಾರ್‍ನ ಕಲೆಕ್ಟರ್ ಆಗಿದ್ದ ಕೊನೋಲಿ ಒಡಿ. Mr. Canolly  ಅವರು ಇಲ್ಲಿ ತೇಗದ ಬೀಜಗಳನ್ನು ಬಿತ್ತುವ ಮೂಲಕ ನೆಟ್ಟು ಬೆಳೆಸುವ ತೇಗದ ಪ್ಲಾಂಟೇಶನ್‍ಗೆ ಅಡಿಕಲ್ಲು ಹಾಕಿದ್ದರು.
  • ಆ ನಂತರ ಅದನ್ನು ಶ್ರೀ ಚಾತು ಮೆನೊನ್ Shri Chathu Menon ಎಂಬ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮುಂದುವರಿಸಿದರು.
  • ಕೆಲವು ಸಮಯದ ನಂತರ ಇಲ್ಲಿ ತೇಗ ಬೆಳೆಸುವ ಬೇರೆ ಬೇರೆ ವಿಧಾನಗಳ ( ಪ್ರೂನಿಂಗ್. ಅಧಿಕ ಸಾಂದ್ರದ ನಾಟಿ ಇತ್ಯಾದಿ ) ಪ್ರಯೋಗಗಳು ನಡೆದವು.
  • 1872 ರಲ್ಲಿ ಕೊಚ್ಚಿನ್ ರಾಜ್ಯದಲ್ಲಿ 14,000 ಎಕ್ರೆಗಳಷ್ಟು ತೇಗದ ಪ್ಲಾಂಟೇಶನ್ ಬೆಳೆಸಲಾಗಿತ್ತು.
  • ತ್ರಿವಾಂಕೂರು ರಾಜ್ಯದಲ್ಲಿ ವಂಬೂರಮ್ (Vembooram)ನಲ್ಲಿ  ಮೊದಲ ತೇಗದ ಪ್ಲಾಂಟೇಶನ್ ಅನ್ನು ಪೆರಿಯಾರ್ ನದಿಯ ದ್ವೀಪದಂತಹ ಭೂಭಾಗದಲ್ಲಿ ನೆಟ್ಟು ಬೆಳೆಸಲಾಯಿತು.
  • ಆ ಸಂದರ್ಭದಲ್ಲಿ ಟ್ರಿವಾಂಕೂರಿನ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ಟಿ ಎಫ್ ಬೌರ್ಡಿಲೋನ್ Mr. T F Bourdillon ಎಂಬವರು ತೇಗದ ಸಸಿಯನ್ನು ಬುಡುಚಿಯ (Stump) ಮೂಲಕ ನಾಟಿ ಮಾಡುವ ಕ್ರಮವನ್ನು ಪರಿಚಯಿಸಿದರು.

ಸ್ಟಂಪ್ ಎಂದರೆ ಏನು:

ಸಾಗುವಾನಿ ಬುಡುಚಿ- Teak stump pack

  •  ಸ್ಟಂಪ್  ಅಥವಾ ಬುಡುಚಿ ಎಂದರೆ ಒಂದು ವರ್ಷದ ತನಕ ನರ್ಸರಿ ಬೆಡ್‍ನಲ್ಲಿ ತೇಗದ ಬೀಜವನ್ನು ಹಾಕಿ ಬೆಳೆಸುತ್ತಾರೆ.
  • ನಂತರ ಆ ಸಸಿಯನ್ನು ಕಿತ್ತು ತೆಗೆದು, ಮಣ್ಣಿನ ಮೇಲಿರುವ ಭಾಗವನ್ನು ತುಂಡು ಮಾಡಿ, ಕೆಳ ಬೇರಿನ ಭಾಗವನ್ನು 15 ಸೆಂ.ಮೀ ಇರುವಂತೆ ಕತ್ತರಿಸುವುದು.
  • ಅದರಲ್ಲಿ ಬೆಳೆದಿರುವ ಕವಲು ಬೇರುಗಳನ್ನೆಲ್ಲಾ ತೆಗೆದು ಬರೇ ಬೇರಿನ ಕಡ್ಡಿಯನ್ನು  ಮಾತ್ರ ಉಳಿಸಲಾಗುತ್ತದೆ.
  • ಈ ರೀತಿಯ ಸಸಿ ಉತ್ಪಾದನಾ ತಾಂತ್ರಿಕತೆ ಬಂದ ನಂತರ ಕೇರಳದಲ್ಲಿ ಇದು ಬಹಳ ಜನಪ್ರಿಯವಾಯಿತು.
  • ಕೇವಲ 15 ವರ್ಷಗಳಲ್ಲಿ ಈ ತಾಂತ್ರಿಕತೆಯಲ್ಲಿ ಸುಮಾರು 2750 ಎಕ್ರೆಯಷ್ಟು ತೇಗದ ಪ್ಲಾಂಟೇಶನು ತಲೆ ಎತ್ತಿತ್ತು.

ಈ ತನಕವೂ ತೇಗದ ಸಸಿ ಬೆಳೆಸಲು ಈತಾಂತ್ರಿಕತೆಯೇ ಚಾಲನೆಯಲ್ಲಿದೆ.  ಈಗ ಜಗತ್ಪ್ರಸಿದ್ದ ನೀಲಂಬೂರು ತೇಗ ಬೆಳೆಸಿದ ಲಕ್ಷಾಂತರ ಎಕರೆ ಪ್ರದೇಶ ದಲ್ಲೂ ಬುಡುಚಿ ನಾಟಿ ,ಮಾಡಿದ್ಡೇ ಆಗಿದೆ.

  • ನೀಲಂಬೂರಿನಲ್ಲಿ ಪ್ರಪ್ರಥಮ ತೇಗದ ಪ್ಲಾಂಟೇಶನು ಇದೆ ಅಲ್ಲದೇ ಈ ನೆನೆಪಿಗಾಗಿ ಜಗತ್ತಿನಲ್ಲೇ ಇನ್ನೆಲ್ಲೂ ಕಾಣಸಿಗದ ತೇಗದ ಮ್ಯೂಸಿಯಂ ಸಹ ಇದೆ.
  • ಇಲ್ಲಿ ಚಾತು ಮೆನನ್ ಇವರು ಶ್ರೀ. ಕನೋಲೀ  ಇವರ ಮಾರ್ಗದರ್ಶನದಲ್ಲಿ ಬೆಳೆಸಿದ ತೇಗದ ಸುಮಾರು 179 ವರ್ಷ ಪ್ರಾಯದ ಮರಗಳನ್ನು ಕನೋಲೀ ಪ್ಲಾಂಟೇಶನ್ ಎಂದು ಇಂದಿಗೂ ಸಂರಕ್ಷಿಸಲಾಗಿದೆ.
  • ಈ ತೇಗದ ವೈಶಿಷ್ಟ ಗುಣಗಳನ್ನು ಅಂದು ಬ್ರಿಟೀಷರೂ ಅಭ್ಯಸಿಸಿದ್ದರು. ಈಗಿನವರೂ ಅಭ್ಯಸಿದ್ದಾರೆ.
  • ಆವರೆಲ್ಲರು ಕಂಡುಕೊಂಡಂತೆ  ಇದು ಶೀಘ್ರ ಬೆಳೆಯುವ ಮತ್ತು ಉತ್ತಮ ಗುಣಮಟ್ಟದ ಚೇಗನ್ನು (Hart wood) ಕೊಡಬಲ್ಲುದು.
  • ಅದಕ್ಕಾಗಿ ಈ ತಳಿ ಮೂಲದಿಂದಲೇ ಬೀಜಗಳನ್ನು  ಪ್ಲಸ್ ಟ್ರೀ ಗಳ ಮೂಲಕ ಪಡೆದು ಅದನ್ನೇ ಸಸ್ಯಾಭಿವೃದ್ದಿ ಮಾಡಿಕೊಡಲಾಗುತ್ತದೆ.

ಸಾಗಾಣಿಕೆ ಸುಲಭ:

  • ನೀಲಂಬೂರಿನ ತೇಗದ ಮ್ಯೂಸಿಯಂ ಇರುವ ಆವರಣದಲ್ಲಿ ಇದೇ ತೇಗದ ಬುಡುಚಿಯ ಉತ್ಪಾದನೆಯೂ ನಡೆಯುತ್ತಿದ್ದು, ವರ್ಷ ವರ್ಷವೂ ಇಲ್ಲಿ ಲಕ್ಷಕ್ಕೂ ಹೆಚ್ಚು ಬುಡುಚಿಗಳ ಉತ್ಪಾದನೆಯಾಗುತ್ತಿದೆ.
  • ಈ ಬುಡುಚಿಗಳ ವಿಶೇಷತೆಯೆಂದರೆ ಇದನ್ನು ಎಲ್ಲಿಗೆ ಬೇಕಾದರೂ ಕೊರಿಯರ್ ಮೂಲಕ ಕಳುಹಿಸಬಹುದು.
  • ಪಾತಿಯಿಂದ ಕಿತ್ತ ಬುಡುಚಿ ಕನಿಷ್ಟ ಸುಮಾರು ಒಂದು ವಾರದ ತನಕವೂ ಜೀವಂತವಾಗಿರುತ್ತದೆ.
  • ಸಸಿಯಿಂದ ಬೇರ್ಪಡಿಸಲಾದ ಬುಡುಚಿಯಲ್ಲಿ ಬೇರಿನ ಬೆಳವಣಿಗೆ ಮತ್ತು ಚಿಗುರಿನ ಬೆಳವಣಿಗೆಯ ಶಕ್ತಿ ಬಹಳ ಉತ್ತಮವಾಗಿರುತ್ತದೆ.
  • ಒಂದು ಊರಿನಿಂದ ಮತ್ತೊಂದು ಊರಿಗೆ ಕಳುಹಿಸಿದಾಗ ಆ ಬುಡಿಚಿಯಲ್ಲಿ ಚಿಗುರಿನ ಮೊಳಕೆ ಹಾಗೆಯೇ ಬೇರಿನ ಬೆಳವಣಿಗೆಯೂ ಪ್ರಾರಂಭವಾಗಿರುತ್ತದೆ.
  • ಇದನ್ನು ನೇರವಾಗಿ ಮಳೆಗಾಲ ಪ್ರಾರಂಭವಾಗುವಾಗ ನೆಲವನ್ನು ರಾಡ್‍ನಲ್ಲಿ ತೂತು ಮಾಡಿ (ಬುಡುಚಿಯಷ್ಟೇ ಗಾತ್ರದ) ಅದರೊಳಗೆ ತುರುಕಿ, ನೀರು ನಿಲ್ಲದಂತೆ ಗಟ್ಟಿ ಮಾಡಿ, ನೆಲವನ್ನು ಬೇಕಿದ್ದರೆ ಪಿಕ್ಕಾಸಿಯಲ್ಲಿ ಒಮ್ಮೆ ಅಗೆದು ಅಲ್ಲೇ ಸಡಿಲ ಮಾಡಬಹುದು.
  • ಇದರಿಂದ ಅಲ್ಪ ಸ್ವಲ್ಪ ಮಳೆ ನೀರು ಬುಡುಚಿಗೆ ಲಭ್ಯವಾಗಿ ಬೇಗನೆ ಚಿಗುರು ಬರುತ್ತದೆ. ನೆಲದ ಬಿಸಿ ಮತ್ತು ಹಿತ ಮಿತ ಮಳೆಯಿಂದ ಸುಪ್ತಾವಸ್ತೆಯಲ್ಲಿದ್ದ ಅದರ ಬೆಳವಣಿಗೆಗೆ ಉತ್ತೇಜನ ದೊರೆತು ನಾಟಿ ಮಾಡಿದ ಒಂದು ವಾರದಲ್ಲಿ ಮೊಳಕೆ ಬರುತ್ತದೆ.
  • ನಂತರ ಬೆಳವಣಿಗೆಯಾಗುತ್ತಾ ಇರುತ್ತದೆ.

ಈ ತಳಿಯ ತೇಗವನ್ನು ನಾಟಿ ಮಾಡುವಾಗ ಸಸಿಯಿಂದ ಸಸಿಗೆ ಸಾಲಿನಿಂದ ಸಾಲಿಗೆ 6x6x6ಅಡಿ ಅಂತರದಲ್ಲಿನಾಟಿ ಮಾಡಿದರೆ ನೇರ ಬೆಳವಣಿಗೆ ಹೊಂದುತ್ತದೆ. ಇದರಲ್ಲಿ  ಬದುಕುವ ಪ್ರಮಾಣ ಶೇ90 ಕ್ಕೂ ಹೆಚ್ಚು. ಮುಂಗಾರು ಮಳೆಯ ಪ್ರಾರಂಭದ ದಿನಗಳಲ್ಲಿ ಈ ಬುಡುಚಿಗಳು ಲಭ್ಯವಿದ್ದು , ನೆಲಂಬೂರು ಅರಣ್ಯ ಸಂಶೋಧನಾ ಕೇಂದ್ರದಿಂದ ರೈತರು ಪಡೆದುಕೊಳ್ಳಬಹುದು.

ಸೂಚನೆ;

ಕಳೆದ ಎರಡು ವರ್ಷಗಳಿಂದ ಕೇರಳದ ನೆಲಂಬೂರಿನ ಅರಣ್ಯ ಸಂಶೋಧನಾ  ಸಂಸ್ಥೆಯಲ್ಲಿ ಈ ರೀತಿಯ ಸಸಿ ಮಾಡುವುದನ್ನು ನಿಲ್ಲಿಸಿರಿರುತ್ತಾರೆ. ಕೆಲವು ಖಾಸಗಿ ನರ್ಸರಿಗಳು ಇದನ್ನು ಮಾಡುತ್ತಿದ್ದು, ಕೊರೋನಾ ಕಾರಣದಿಂದ  ಮಾಹಿತಿ ಲಭ್ಯವಾಗುತ್ತಿಲ್ಲ. ಆನ್ ಲೈನ್ ನಲ್ಲಿ ಇದರ ಲಭ್ಯತೆ ಇದೆ. ಕೇರಳದ ಅದರಲ್ಲೂ ಮಲಪ್ಪುರಂ ಜಿಲ್ಲೆಯಲ್ಲಿ ಯಾರಾದರೂ ಸಂಪರ್ಕದಲ್ಲಿದ್ದರೆ ಅವರಲ್ಲಿ Staump  ಬಗ್ಗೆ ವಿಚಾರಿಸಿ ತರಿಸಿಕೊಳ್ಳಬಹುದು. ನಮ್ಮತಿಳುವಳಿಕೆಯಲ್ಲಿ ನೆಲಂಬೂರಿನಲ್ಲಿ Nilambur teak nursery ಇಲ್ಲಿ ಸ್ಟಂಪುಗಳು ಲಭ್ಯ.  94462 43043  Joseph)

Leave a Reply

Your email address will not be published. Required fields are marked *

error: Content is protected !!