ಈ ಬಿದಿರಿನ ಗಳಕ್ಕೆ ರೂ. 50,000 ನಂಬುತ್ತೀರಾ? ಇದು ನಿಜ.
ಬಿದಿರಿನ ಒಂದು ಗಳ ಅದರಲ್ಲೂ ಮುಳ್ಳು ಇರುವ ಸ್ಥಳೀಯ ಬಿದಿರಿನ ಒಂದು ಗಳಕ್ಕೆ ಹೆಚ್ಚೆಂದರೆ 100-200 ರೂ. ಪಡೆಯುವವರು ಇರಬಹುದು. ಈ ಹಿಂದೆ ಕೆಲವರು ಮರ ಹತ್ತಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಆ ಕಾಲ ಹೋಯಿತು.ಬಿದಿರಿನ ಏಣಿಯ ಬದಲು ಅಲ್ಯೂಮೀನಿಯಂ ಏಣಿ ಬಂದು ಬಿದಿರು ತೆರೆಯ ಮರೆಯಾಯಿತು. ಹಿಂದೆ ಮನೆ ಕಟ್ಟುವಾಗ ಮರದ ಬದಲಿಗೆ ಬಿದಿರಿನ ಗಳಗಳನ್ನು ಹಾಕಿ ಛಾವಣಿ ಮಾಡುತ್ತಿದ್ದರು. ಈಗ ಬಿದಿರಿನ ಗಳದ ಛಾವಣಿ ಮಾಡುವ ಖರ್ಚಿಗಿಂತ ಕಡಿಮೆ ಬೆಲೆಗೆ ಬೇರೆ ಸಾಮಾಗ್ರಿಗಳಿಂದ ಮಾಡಲಿಕ್ಕಾಗುತ್ತದೆ….