ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ ಸೂಕ್ತ ವಿಧಾನ.
ಈಗ ಎಲ್ಲರೂ ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ (ಬೀಜದ ಅಡಿಕೆ) ಅವಸರದಲ್ಲಿದ್ದಾರೆ. ಉತ್ತಮ ಇಳುವರಿ ಕೊಡುವ ತಳಿ ಬೇಕು ಎಂಬುದು ಎಲ್ಲರ ಆಕಾಂಕ್ಷೆ . ಬೀಜದ ಅಡಿಕೆ ಹುಡುಕಾಟದ ಭರದಲ್ಲಿ ತಮ್ಮ ಕಾಲ ಬುಡದಲ್ಲೇ ಇರುವ ಉತ್ಕೃಷ್ಟ ತಳಿಯ ಅಡಿಕೆಯನ್ನು ಗಮನಿಸುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ಅವರವರ ಹೊಲದಲ್ಲಿ ಅಥವಾ ಅವರ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ತಳಿಗಳೇ ಉತ್ಕೃಷ್ಟ ತಳಿಯಾಗಿರುತ್ತದೆ. ಯಾವುದೇ ಬೆಳೆಯಲ್ಲಿ ಬೀಜದ ಆಯ್ಕೆ ಎಂಬುದು ಪ್ರಾಮುಖ್ಯ ಘಟ್ಟ. ಬೀಜದ ಗುಣದಲ್ಲೇ…