ಕಳೆನಾಶಕಗಳಿಂದ ಕ್ಯಾನ್ಸರ್ ಬರುವುದು ನಿಜವೇ ?
ಕಳೆನಾಶಕಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದಾಗಿ ಈಗ ಇರುವ ವ್ಯಾಪಕ ಪ್ರಚಾರ. ಕಳೆನಾಶಕ ಬಳಕೆ ಮಾಡುವುದು ಕಳೆಗಳನ್ನು ಕೊಲ್ಲಲು. ಕಳೆಗಳನ್ನು ಕೊಲ್ಲಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇದ್ದರೆ, ಕಳೆನಾಶಕ ಬಳಸಿದ ಹುಲ್ಲನ್ನು ಪಶುಗಳಿಗೆ ಮೇವಾಗಿ ಕೊಟ್ಟರೆ ಅದು ಕ್ಯಾನ್ಸರ್ ಕಾರಕವಾಗಬಹುದು. ಆದರೆ ಹುಲ್ಲು ಸತ್ತಾಗ ಅದಕ್ಕೆ ಕ್ಯಾನ್ಸರ್ ಬರಲಾರದು. ಹಾಗಾಗಿ ಕಳೆನಾಶಕ ಕಳೆಗಳಿಗೆ ಅಗತ್ಯವಿದ್ದರೆ ಮಾತ್ರ ಬಳಕೆ ಮಾಡುವುದು ಸೂಕ್ತ. ಬಹುಷಃ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುವ ಪ್ರತೀಯೊಬ್ಬ ಕಳೆನಾಶಕ ಬಳಕೆದಾರನಿಗೂ ಈ ಸಂದೇಶ ತಲುಪಿರಬಹುದು….