
ಎರೆಹುಳು ಬಗ್ಗೆ ನಾವು ತಿಳಿಯಬೇಕಾದ ವಾಸ್ತವ ಸಂಗತಿ.
ಎರೆಗೊಬ್ಬರ ಎಂದರೆ ಅದು ಸಂಪಧ್ಭರಿತ ಗೊಬ್ಬರ ಅಲ್ಲ. ಅದು ಒಂದು ಸಾವಯವ ವಸ್ತುಗಳನ್ನು ಹುಡಿ ಮಾಡಿದ ಮಿಶ್ರಣ ಅಷ್ಟೇ. ಇದು ಬೆಳೆಗೆ ದೊರೆಯಬೇಕಾದರೆ ಮಣ್ಣಿನಲ್ಲಿರುವ ಸ್ಥಳೀಯ ಎರೆಹುಳುಗಳು ಕೆಲಸ ಮಾಡಲೇ ಬೇಕು. ಎರೆಹುಳ ಏನು? ಎರೆಹುಳು ಎಂಬ ದುಂಡು ಹುಳ (ಅನೆಲಿಡಾ) ಜಾತಿಗೆ ಸೇರಿದ ಜೀವಿಯು ಸಾವಯವ ತ್ಯಾಜ್ಯಗಳನ್ನು ರೂಪಾಂತರಿಸಿ ಕೊಡುತ್ತದೆ. ಇದನ್ನು ಬೆಳೆಗಳಿಗೆ ಗೊಬ್ಬರವಾಗಿ ಬಳಕೆ ಮಾಡಿದಾಗ ಅಧ್ಬುತ ಇಳುವರಿ ಬರುತ್ತದೆ, ಮಣ್ಣು ಶ್ರೀಮಂತವಾಗುತ್ತದೆ. ಸಾವಯವ ಕೃಷಿ ಎಂಬ ಅಹಿಂಸಾತ್ಮಕ ಕೃಷಿ ವಿಧಾನಕ್ಕೆ ಇದು ಒಂದು ಸರಳ…