ಜಲ –ಇದು ಲಕ್ಷ್ಮಿ . ಜಲವನ್ನು ಸಂರಕ್ಷಿಸೊಣ- ಗೌರವಿಸೋಣ.
ನಮಗೆ ಬಾವಿ ತೋಡಿದಾಗ ಹೇರಾವರಿ ನೀರು ಸಿಕ್ಕಿದರೆ ಅದು ನಮ್ಮ ಮನೆಗೆ ಲಕ್ಷ್ಮಿಯ ಕೃಪೆ ದಯಪಾಲಿಸಿದೆ ಎಂದರ್ಥ. ಲಕ್ಷ್ಮಿ ಒಲಿದಳೆಂದು ಸ್ವೇಚ್ಚಾಚಾರ ಮಾಡಿದರೆ ಯಾವುದೇ ಸಮಯದಲ್ಲಿ ಆಕೆ ನಿರ್ಗಮಿಸಿದರೂ ಅಚ್ಚರಿ ಇಲ್ಲ. ಇದು ನೀರು ಸಂಪತ್ತು ಎಲ್ಲದಕ್ಕೂ ಅನ್ವಯ.ಭಯ ಭಕ್ತಿ ಗೌರವದಿಂದ ಪ್ರಾಕೃತಿಕ ಕೊಡುಗೆಗಳನ್ನು ಅನುಭವಿಸಬೇಕು. ವಿಶ್ವ ಜಲ ದಿನ ಮಾರ್ಚ್ 22. ಜೀವ ಜಲದ ಪ್ರಾಮುಖ್ಯತೆ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು. ವರ್ಷ ವರ್ಷವೂ ನಾವು ಜಲ ದಿನ ಎಂದು ಈ ದಿನವನ್ನು ಆಚರಿ ಸುತ್ತೇವೆ….