
ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ಹಾಸ್ ತಳಿಯನ್ನು ಹೇಗೆ ಬೆಳೆಯಬೇಕು?
ಹಾಸ್ ಹೆಸರಿನ ಬೆಣ್ಣೆಹಣ್ಣು ತಳಿ (Avocado) ಜಾಗತಿಕವಾಗಿ ಮನ್ನಣೆ ಪಡೆದ ಸರ್ವ ಶ್ರೇಷ್ಟ ಹಣ್ಣಾಗಿದ್ದು, ಇದನ್ನು ಕೆಲವು ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಬೆಳೆಯಬಹುದು. ಈ ತಳಿಯ ಬೆಣ್ಣೆ ಹಣ್ಣಿಗೆ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಹಾಗಾಗಿಯೇ ಇದಕ್ಕೆ ಉತ್ತಮ ಬೆಲೆ ಮತ್ತು ಬೇಡಿಕೆ. ಹಾಗಾದರೆ ಹ್ಯಾಸ್ ತಳಿ ಏನು, ಇದನ್ನು ಎಲ್ಲೆಲ್ಲಿ ಬೆಳೆದರೆ ಮಾತ್ರ ಫಲ ಪಡೆಯಬಹುದು ಎಂಬುದನ್ನು ತಿಳಿಯೋಣ. ಬೆಣ್ಣೆ ಹಣ್ಣು, ಅವಕಯಾಡೋ,ದಲ್ಲಿ ಹಲವಾರು ತಳಿಗಳಿವೆ. ಗಾತ್ರದಲ್ಲಿ, ಬಣ್ಣದಲ್ಲಿ, ರಚನೆಯಲ್ಲಿ ಇರುವ ವ್ಯತ್ಯಾಸಕ್ಕನುಗುಣವಾಗಿ ತಳಿಗಳಿಗೆ ನಾಮಕರಣ…