ಶುಂಠಿ ಬೆಳೆಯುವ ರೈತರೆಲ್ಲರೂ ತಿಳಿದಿರಬೇಕಾದ ತಳಿ ಪರಿಚಯ.
ಶುಂಠಿ ಬೆಳೆಯುವ ರೈತರು ಬರೇ ಇಳುವರಿ ಒಂದನ್ನೇ ನೋಡುವುದಲ್ಲ. ಇಳುವರಿಯ ಜೊತೆಗೆ ಒಣ ತೂಕದ ಪ್ರಮಾಣ, ಅದರಲ್ಲಿ ನಾರಿನ ಅಂಶ ಹಾಗೆಯೇ ಅದರ ಓಲಿಯೋರೈಸಿನ್ ಎಣ್ಣೆ ಅಂಶ ಇವುಗಳನ್ನೂ ನೊಡಬೇಕು. ಮಾರುಕಟ್ಟೆಯಲ್ಲಿ ಇಂತಹ ಆಯ್ಕೆ ತಳಿಗಳಿಗೆ ಬೇಡಿಕೆಯೇ ಬೇರೆ ಇರುತ್ತದೆ. ಬೆಲೆಯೂ ಹೆಚ್ಚು ದೊರೆಯುತ್ತದೆ. ಶುಂಠಿ (ಜಿಂಜಿಬರ್ ಆಪಿಸಿನೇಲ್) ಜಿಂಜಿಬರೆಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವಾಣಿಜ್ಯ ಬೆಳೆ. ಇದಕ್ಕೆ ಇರುವ ಬೇಡಿಕೆ ಮತ್ತು ಬೆಲೆ ಬಹಳಷ್ಟು ಪ್ರದೇಶ ವಿಸ್ತರಣೆಗೆ ಕಾರಣವಾಗಿದೆ. ರಾಜ್ಯದ ಕರಾವಳಿ, ಮಲೆನಾಡು, ಅರೆ…