ಶುಂಠಿ ಬೆಳೆಯುವ ರೈತರೆಲ್ಲರೂ ತಿಳಿದಿರಬೇಕಾದ ತಳಿ ಪರಿಚಯ.

ಶುಂಠಿ ತಳಿ ರೆಯೋಡಿಜೆನೆರಾ

ಶುಂಠಿ ಬೆಳೆಯುವ ರೈತರು ಬರೇ ಇಳುವರಿ ಒಂದನ್ನೇ ನೋಡುವುದಲ್ಲ. ಇಳುವರಿಯ ಜೊತೆಗೆ ಒಣ ತೂಕದ ಪ್ರಮಾಣ, ಅದರಲ್ಲಿ ನಾರಿನ ಅಂಶ ಹಾಗೆಯೇ ಅದರ ಓಲಿಯೋರೈಸಿನ್  ಎಣ್ಣೆ ಅಂಶ ಇವುಗಳನ್ನೂ ನೊಡಬೇಕು. ಮಾರುಕಟ್ಟೆಯಲ್ಲಿ  ಇಂತಹ ಆಯ್ಕೆ ತಳಿಗಳಿಗೆ ಬೇಡಿಕೆಯೇ ಬೇರೆ ಇರುತ್ತದೆ. ಬೆಲೆಯೂ ಹೆಚ್ಚು ದೊರೆಯುತ್ತದೆ.

 • ಶುಂಠಿ (ಜಿಂಜಿಬರ್ ಆಪಿಸಿನೇಲ್) ಜಿಂಜಿಬರೆಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವಾಣಿಜ್ಯ ಬೆಳೆ.  
 • ಇದಕ್ಕೆ ಇರುವ ಬೇಡಿಕೆ ಮತ್ತು ಬೆಲೆ ಬಹಳಷ್ಟು ಪ್ರದೇಶ ವಿಸ್ತರಣೆಗೆ ಕಾರಣವಾಗಿದೆ.
 • ರಾಜ್ಯದ ಕರಾವಳಿ, ಮಲೆನಾಡು, ಅರೆ ಮಲೆನಾಡು ಭಾಗಗಳಲ್ಲಿ  ಹಾಗೆಯೇ ಬಯಲು ಸೀಮೆಯಯಲ್ಲೂ ಕೆಲವರು ಬೆಳೆಯಲಾರಂಭಿಸಿದ್ದಾರೆ.
 • ಸರಿಯಾದ ಬೆಳೆ ಕ್ರಮವನ್ನು ಅನುಸರಿಸಿ  ಬೆಳೆದರೆ ಈ ಬೆಳೆಯಲ್ಲಿ ಅದೃಷ್ಟ ಖುಲಾಯಿಸುತ್ತದೆ.
 • ಅದೆಷ್ಟೂ ರೈತರು ಶುಂಠಿ ಬೆಳೆದು ತಮ್ಮ ಜೀವನೋದ್ದೇಶವನ್ನು ಸಕಾರ ಗೊಳಿಸಿಕೊಂಡದ್ದಿದೆ.  
 • ಶುಂಠಿಯ ಬಳಕೆ ಕ್ಷೇತ್ರ ವಿಸ್ತಾರವಾಗಿದೆ. 
 • ಆದ ಕಾರಣ ಬೆಳೆಯುವ ರೈತರು ಅದಕ್ಕೆ ಹೊಂದುವ ತಳಿಗಳನ್ನು ಆಯ್ಕೆ ಮಾಡಬೇಕು.

ಶುಂಠಿ ತಳಿ ವರದಾ

ಭಾರತವು ವಿಶ್ವದಲ್ಲಿ ಶುಂಠಿ ಉತ್ಪಾದಿಸುವ ದೇಶಗಳಲ್ಲಿ ಅಗ್ರಸ್ಥಾನದಲ್ಲಿದೆ, ಬಹುತೇಕ ಎಲ್ಲ ರಾಜ್ಯಗಳಲ್ಲಿ ಶುಂಠಿಯನ್ನು ಬೆಳೆಯಲಾಗುತ್ತಿದೆ ಪ್ರಮುಕವಾಗಿ ಕರ್ನಾಟಕ, ಅಸ್ಸಾಂ, ಒರಿಸ್ಸಾ, ಮೇಘಾಲಯ, ಮಿಜೋರಾಮ್, ಸಿಕ್ಕಿಂ, ಮಹರಾಷ್ಟ್ರ, ವೆಸ್ಟ್ ಬೆಂಗಾಲ್ ಮತ್ತು ಗುಜರಾತ್ ರಾಜ್ಯಗಳು, ಶೇ. 75 ರಷ್ಟು ಶುಂಠಿಯನ್ನು ಉತ್ಪಾದಿಸುತ್ತವೆ.

ಶುಂಠಿ ತಳಿಗಳು:

ಭಾರತದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಹಲವಾರು ಸ್ಥಳೀಯ ಶುಂಠಿ ತಳಿಗಳನ್ನು ಬೆಳೆಯಲಾಗುತ್ತಿದ್ದು, ಅವುಗಳನ್ನು ಬೆಳೆಯಲಾಗುತ್ತಿರುವ ಸ್ಥಳಗಳ ಹೆಸರುಗಳಿಂದಲೇ ಕರೆಯಲಾಗುತ್ತದೆ. ಮಾರನ್, ಕುರುಪ್ಪಂಪಾಡಿ, ಎರ್ನಾಡ್, ವ್ಯೆನಾಡ್, ಹಿಮಾಚಲ ಮತ್ತು ನಾಡಿಯಾ. ವಿದೇಶಿ ತಳಿಯಾದ ರಿಯೋಡಿಜನೈರೋ ತಳಿಯು ಅತ್ಯಂತ ಜನಪ್ರಿಯವಾಗಿದೆ.

ಶುಂಠಿ ತಳಿ ಮಹಿಮಾ

 • ..ಎಸ್.ಆರ್ ವರದ (IISR Indian institute of Spices Research) ತಳಿಯ ತಾಜಾ ಶುಂಠಿ, ಒಣ ಶುಂಠಿ ಹಾಗೂ ಕ್ಯಾಂಡಿ ಮಾಡಲು ಸೂಕ್ತವಾಗಿದೆ, ..ಎಸ್.ಆರ್ ರಜತ ಹೆಚ್ಚಿನÀ ಅಗತ್ಯ ತೈಲವನ್ನು ಹೊಂದಿರುವ ತಳಿ.

ರೈತರು ಶುಂಠಿ ಹೆಕ್ಟೇರಿಗೆ ಸರಾಸರಿ ಎಷ್ಟು ಇಳುವರಿ ಬರುತ್ತದೆ, ಎಷ್ಟು ದಿನಗಳಲ್ಲಿ ಬೆಳೆಯುತ್ತದೆ,  ಒಣ ತೂಕ Dw ಎಷ್ಟು, ನಾರು ಎಷ್ಟು , ಓಲಿಯೋರೈಸಿನ್ Ol ಪ್ರಮಾಣ ಎಷ್ಟು, ಮತ್ತು ಎಣ್ಣೆ Oil ಪ್ರಮಾಣ ಎಷ್ಟು ಎಂದು ತಿಳಿದು ಬೆಳೆಯಬೇಕು. 

ಅಲ್ಪಾವಧಿ ತಳಿಗಳು:

 • ಮಾರನ್ :                  25.21 ಟನ್ ಹೆಕ್ಟೇರ್ಗೆ –  200 ದಿನ20.0 Dw%     6.1% ನಾರು – 10.0% % Ol -1.9% Oil.
 •  ಹಿಮಾಚಲ್:              7.27 ಟನ್ ಹೆಕ್ಟೇರ್ಗೆ – 200 ದಿನ22.6 Dw%    – 5.6%ನಾರು –  5.3% Ol- 0.5% Oil.
 • ನಾಡಿಯ:                   28.55 ಟನ್ ಹೆಕ್ಟೇರ್ಗೆ –  200 ದಿನ22.6 Dw%-   3.9% ನಾರು –     5.4% Ol – 1.4% Oil.
 • ರಿಯೋಡಿ ಜನೈರೊ: 17.65 ಟನ್ ಹೆಕ್ಟೇರ್ಗೆ–  190 ದಿನ – 20.0 Dw% – 5.6 %  ನಾರು –10.5% Ol- 2.3% Oil.
 • IISR ವರದ:              22.6 ಟನ್ ಹೆಕ್ಟೇರ್ಗೆ– 200 ದಿನ20.7 Dw –     % 4.5 ನಾರು –    6.7 Ol% – 1.8 Oil
 • IISR ಮಹಿಮ:          23.2 ಟನ್ ಹೆಕ್ಟೇರ್ಗೆ–  200 ದಿನ23.0 Dw% – 3.3% ನಾರು – 4.5Ol%  – 1.7% Oil.
 • IISR ರಜತ:             22.4 ಟನ್ ಹೆಕ್ಟೇರ್ಗೆ– 200 ದಿನ –  19.0 Dw%  – 4.0% ನಾರು –6.3 % Ol – 2.4% Oil.
 • ಚೀನಾ:                      9.50 ಟನ್ ಹೆಕ್ಟೇರ್ಗೆ – 200 ದಿನ21 Dw%.- 3.4% ನಾರು – 7.0% Ol – 1.9% Oil.

ಮಧ್ಯಮಾವಧಿ ತಳಿಗಳು:

ಶುಂಠಿ ತಳಿ ರಜೆತಾ

 • ಅಸ್ಸಾಂ:             11.78 ಟನ್ ಹೆಕ್ಟೇರ್ಗೆ – 210 ದಿನ18.0 Dw%- 5.8% ನಾರು 7.9% Ol- 2.2% Oil.
 • ಸುರುಚಿ :            11.6 ಟನ್ ಹೆಕ್ಟೇರ್ಗೆ – 218 ದಿನ  – 23.5 Dw% –  3.8% ನಾರು – 10.0% Ol – 2.0% Oil.
 • ಸುರವಿ:               17.5 ಟನ್ ಹೆಕ್ಟೇರ್ಗೆ -225 ದಿನ      23.5 Dw% – 4.0% ನಾರು –  10.2% Ol – 2.1% Oil.
 • ಸುಭದ:               18.0 ಟನ್ ಹೆಕ್ಟೇರ್ಗೆ– 210 ದಿನ  –22.4 Dw% – 3.4% ನಾರು  – 10.4% Ol – 2.0 %Oil.

ಧೀರ್ಘಾವಧಿ ತಳಿಗಳು:

 • ಸುಪ್ರಭಾ :  16.6 ಟನ್ ಹೆಕ್ಟೇರ್ಗೆ -229ದಿನ  – 20.5 Dw%   – 4.4% ನಾರು 8.9% Ol – 1.9% Oil.
 • ಹಿಮಗಿರಿ:   13.5 ಟನ್ ಹೆಕ್ಟೇರ್ಗೆ – 230 ದಿನ 20.6 Dw%- 6.4% ನಾರು – 4.3% Ol – 1.6% Oil.
 • ಅತಿರಾ:     21.0 ಟನ್ ಹೆಕ್ಟೇರ್ಗೆ– 220-240 –   ದಿನ 22.6 Dw% – 3.4% ನಾರು –   6.8% Ol- 3.1% Oil.
 • ಕಾರ್ತಿಕ:   19.0 ಟನ್ ಹೆಕ್ಟೇರ್ಗೆ– 220-240 ದಿನ 21.6 Dw% – 3.7 % ನಾರು –   7.2% Ol- 3.2% Oil.
 • ಅಶ್ವತಿ:      23.0 ಟನ್ ಹೆಕ್ಟೇರ್ಗೆ– 220-240  ದಿನ  – 19.7 Dw% – 3.5% ನಾರು-   7.5% Ol – 3.3% Oil.

ಶುಂಠಿ ಬೆಳೆಯುವ ರೈತರು ಆಯ್ಕೆ ಮಾಡಬಹುದಾದ ಪ್ರದೇಶಕ್ಕೆ ಹೊಂದುವ ತಳಿಗಳು ಮತ್ತು ಬೆಳೆ ಬೆಳೆಸುವ ಮಾಹಿತಿಗಾಗಿ  ಭಾರತೀಯ ಸಾಂಬಾರ ಬೆಳೆಗಳ  ಪ್ರಾದೇಶಿಕ ಸಂಶೋಧನಾ ಸಂಸ್ಥೆ ಯನ್ನು ಸಂಪರ್ಕಿಸಬಹುದು. ಈ ಕೇಂದ್ರವು ಕೊಡಗು ಜಿಲ್ಲೆ, ಬಾಗಮಂಡಲ ರಸ್ತೆಯಲ್ಲಿ ಮಡಿಕೇರಿಯಿಂದ 8 ಕಿಲೋ ಮೀಟರ್ ದೂರದ ಅಪ್ಪಂಗಳದಲ್ಲಿ ಇದೆ.
ಲೇಖಕರು:  ಅಂಕೇಗೌಡ ಎಸ್. ಜೆ., ಹೊನ್ನಪ್ಪ ಆಸಂಗಿ, ಶಿವಕುಮಾರ್ ಎಂ. ಎಸ್, ಅಕ್ಷಿತಾ ಎಚ್. ಜೆ., ಬಾಲಾಜಿ ರಾಜ್‍ಕುಮಾರ್ ಎಂ. ಮತ್ತು ಮೊಹಮ್ಮದ್ ಫೈಸಲ್ ಪಿ.  .ಸಿ..ಆರ್.- ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ, ಕೊಡಗು– 571 201.
end of the article: ——————————————————-
search words: Ginger# Ginger varieties# IISR Appangala#  ginger cultivation# Improved Ginger varieties#
 

Leave a Reply

Your email address will not be published. Required fields are marked *

error: Content is protected !!