ಇದು ಆರೋಗ್ಯ ರಕ್ಷಕ ಹಣ್ಣು ಗೊತ್ತೇ?

by | Oct 17, 2020 | Medicinal Plant (ಔಷಧಿಯ ಸಸ್ಯ) | 0 comments

ದಾರೆ ಹುಳಿ ಎಂದು ಸಾಮಾನ್ಯ ಆಡು ಭಾಷೆಯಲ್ಲಿ ಕರೆಯಲ್ಪಡುವ  ಹಣ್ಣು ಹುಳಿ ಮತ್ತು ಸಿಹಿ ರುಚಿಯಲ್ಲಿ  ಇರುತ್ತದೆ. ಸಾಮಾನ್ಯವಾಗಿ ಇದನ್ನು ಹಳ್ಳಿಗಳಲ್ಲಿ  ಬೆಳೆಸಿ ಅದನ್ನು ಹುಳಿಯ ಬದಲಿಗೆ  ಉಪಯೋಗ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ ಹಣ್ಣುಬಹಳಷ್ಟು ಔಷಧೀಯ ಗುಣಗಳನ್ನು  ಹೊಂದಿದೆ.ನಾವು ಸಣ್ಣವರಿದ್ದಾಗ ಲಿಂಬೆ ಹುಳಿ ಶರಬತ್ತಿನ ಬದಲು ಇದನ್ನು ಹಿಚುಕಿ ಬೆಲ್ಲ ಹಾಕಿ ಕುಡಿಯುತ್ತಿದ್ದ ನೆನಪು ಈಗಲೂ ಇದೆ.

fruit

ಸಸ್ಯ ಮೂಲ:

 •  ಕನ್ನಡದಲ್ಲಿ ಇದನ್ನು ಕರಿಮಾದಲ,  ದಾರೆ ಹುಳಿಕಮ್ರ  ದ್ರಾಕ್ಷಿಕೊಮರಿಕೆ  ಆಂಗ್ಲ ಭಾಷೆಯಲ್ಲಿ ಸ್ಟಾರ್ ಫ್ರುಟ್ಇತರ ಭಾಷೆಗಳಲ್ಲಿ ಕಮರಕ್ (ಹಿಂದಿ), ತಮರಕಮು( ತೆಲುಗು) ಬೃಹದಮ್ಲಾ ( ಸಂ) ಕರೆಯುತ್ತಾರೆ.
 • ಇದರ ವೈಜ್ಞಾನಿಕ ಹೆಸರು Averroha carambola ಕುಟುಂಬಕ್ಕೆ ಸೇರಿದೆ.
 • ಇದು ನಮ್ಮ ದೇಶವಲ್ಲದೆ ಉಷ್ಣ ವಲಯದ ಬೇರೆ ದೇಶಗಳಲ್ಲೂ ಬೆಳೆಯುತ್ತದೆ.
 • ಯಥೇಚ್ಚ ಎಲೆಗಳುಳ್ಳ ಈ ಮರ ಸಾಕಷ್ಟು ಸೊಪ್ಪನ್ನು ನೀಡುತ್ತದೆ.

ಬಹುವಾರ್ಷಿಕ ಮರ:

Bunch bunch yield

 • ಇದು ಸಾಮಾನ್ಯ ಎತ್ತರಕ್ಕೆ ಬೆಳೆಯುವ ಮರವಾಗಿದೆ. ಬೀಜದಿಂದ ಮತ್ತು ಕಸಿ ವಿಧಾನದಿಂದ ಸಸ್ಯಾಭಿವೃದ್ದಿ ಮಾಡುತ್ತಾರೆ
 • ಹಣ್ಣುಗಳನ್ನು ಗಿಳಿ, ಅಳಿಲು ತಿನ್ನುತ್ತದೆ. ಇವುಗಳೇ ಇದನ್ನು ಬೀಜ ಪ್ರಸಾರ  ಮಾಡುತ್ತವೆ
 • ಸಾಂಪ್ರದಾಯಿಕ ಹಣ್ಣು  ಬೆಳೆಯುವ ಮಕ್ಕಳ ಪೋಷಣೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು  ಮೂಳೆ ಮತ್ತು ಹಲ್ಲಿನ ಆರೋಗ್ಯಕ್ಕೆ  ಸಹಕಾರಿ
 • ಇದು ಅತೀ ಮಲ ತಡೆಗೆ ಕಫ ಕೆಮ್ಮು  ಹಾಗೂ ವಾತ ದೋಷ ನಿವಾರಣೆಗೆ ಉತ್ತಮವಾಗಿದ್ದು,
 • ಹಣ್ಣಿನ ಸೇವನೆ ಜಾಂಡೀಸ್ ರೋಗ, ಜಂತು ಹುಳು ನಿವಾರಕ, ಜೀರ್ಣಕಾರಕ  ಮತ್ತು ವಾಂತಿ ತಡೆಯಲು ಸಹಕಾರಿ.
 • ಎಲೆಯನ್ನು  ಬೆರಿಬೆರಿ ಹಾಗೂ  ಜ್ವರಕ್ಕೆ  ಔಷಧಿಯಾಗಿ ಉಪಯೋಗಿಸುತ್ತಾರೆ
 • ವಿಷಾಹಾರ ಸೇವನೆಯ ಉಪಶಮನಕ್ಕೆ  ಬೇರು ಸಹಕಾರಿ.
 • ಬೇರನ್ನು ಜಜ್ಜಿ ಕಷಾಯ ಮಾಡಿ ಸೇವಿಸುವುದರಿಂದ ಶರೀರದಲ್ಲಿ ಸೇರಿರುವ ವಿಷ ಅಂಶ ಹೋಗುತ್ತದೆ
 • ತಾಜಾ ಹಣ್ಣು ಸ್ವಲ್ಪ ಹುಳಿಯಾಗಿದ್ದರೂ ಸಹ ಅದು ದೇಹಕ್ಕೆ ಆಮ್ಲ ಕಾರಕವಾಗಲಾರದು. ಅದನ್ನು ಸಂಸ್ಕರಿಸಿದಾಗ ಅದು ಆಮ್ಲೀಯವೆನಿಸುತ್ತದೆ.

ಅಡುಗೆ – ಆಹಾರವಾಗಿ ಬಳಕೆ:

 • ಇದನ್ನು ಅಡಿಗೆ ಸೋಡಾ ದಂತೆ  ಉಪಯೋಗಿಸಬಹುದು.
 • ಇದು ಬಹಳ ಆಮ್ಲೀಯವಾಗಿದ್ದು ಲೋಹದ ಪಾತ್ರೆ ತೊಳೆದಾಗ ಅದು  ಬೆಳಗುತ್ತದೆ.
 • ಬಿಳಿ ಬಟ್ಟೆಯ ಕಲೆ ತೆಗೆಯಲು ಬಳಕೆ ಮಾಡುತ್ತಾರೆ.
 • ಹಣ್ಣು ರೂಪದಲ್ಲಿ ತಿನ್ನಲು ಸಿಹಿ ದಾರೆಹುಳಿಯೇ ಉತ್ತಮ.
 • ಇದು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ ಹಣ್ಣು.
 • ಇದನ್ನು ಶರಬತ್ತು ಮಾಡಿ ಸೇವಿಸಬಹುದು.
 • ಒಂದು ದಾರೆ ಹುಳಿಯನ್ನು ಜಜ್ಜಿ  ರಸ ತೆಗೆದು ಸಕ್ಕರೆ ಸೇರಿಸಿ ಪಾನಕ ಮಾಡೀ ಸೇವಿಸುವುದರಿಂದ ಅದು ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ.
 • ಇದನ್ನು ಉಪ್ಪಿನ ಕಾಯಿ ಮಾಡುತ್ತಾರೆ. ಜ್ಯಾಂ, ಸಾಂಬಾರು  ಚಟ್ನಿಯಲ್ಲಿ  ಇದನ್ನು ಮಳಕೆ ಮಾಡುತ್ತಾರೆ.
 • ವಿದೇಶಿ ಆಡುಗೆಯಲ್ಲಿಯೂ ಸಹ ಇದನ್ನು  ಬಳಕೆ ಮಾಡುತ್ತಾರೆ.
 • ಇದರಲ್ಲಿ ಮತ್ತು ಸಿ ಜೀವಸತ್ವ ಹೇರಳವಾಗಿದ್ದು ಕಬ್ಬಿಣ, ಕ್ಯಾಲ್ಸಿಯಂ  ರಂಜಕ, ನಾರಿನ ಅಂಶ ಪ್ರೊಟೀನು ಹಾಗೂ ಶರ್ಕರ ಪಿಷ್ಟ ಒಳಗೊಂಡಿದೆ.
 • ಇದರ ಸಿಹಿ ಹಣ್ಣು  ಮಾರುಕಟ್ಟೆಯಲ್ಲಿ ತಾಜಾ ಹಣ್ಣಾಗಿ ತಿನ್ನಲು ಬೇಡಿಕೆ ಪಡೆದಿದೆ. ಹುಳಿ ಹಣ್ಣು ಹಣ್ಣಾಗುವ ಮುನ್ನ ಉಪ್ಪಿನ ಕಾಯಿಗೆ ಉತ್ತಮ

ಹಣ್ಣಿನ ಸಸಿಯನ್ನು  ಮನೆ ಹಿತ್ತಲಲ್ಲಿ ಬೆಳೆಸಿ  ಬೇರೆ ಬೇರೆ ಬಳಕೆಗೆ  ಉಪಯೋಗಿಸಬಹುದು.  ಇದರ ಹೂವು ಜೇನು ನೊಣಗಳಿಗೆ ಉತ್ತಮ ಮಧುವನ್ನು ಕೊಡುತ್ತದೆ. ಮಳೆಗಾಲ ಕಳೆದ ತಕ್ಷಣ ದೊರೆಯುವ ದೊಡ್ಡ ಪ್ರಮಣದ ಹೂವು ಇದು. ವರ್ಷದಲ್ಲಿ ಎರಡು ಬಾರಿ ಹೂವಾಗಿ ಫಲ  ಕೊಡುತ್ತದೆ.

 • ಹುಳಿ ರುಚಿಯ ಹಣ್ಣಿಗಿಂತ ಸಿಹಿ ಹಣ್ಣು ಬಹಳ ಉತ್ತಮ. ಇದನ್ನು ಪಾನಕ ಮಾಡಿದರೆ ಸಕ್ಕರೆ, ಬೆಲ್ಲ ಹಾಕಬೇಕಾಗಿಲ್ಲ. ಬೀಜದಿಂದ ಸಸ್ಯಾಭಿವೃದ್ದಿ ಮಾಡಿದಾಗ ತಳಿ ವ್ಯತ್ಯಾಸ ಆಗದು.

ನಾವು ಆಪಲ್ ಜ್ಯೂಸ್ , ಮೂಸಂಬಿ ಜ್ಯೂಸ್, ಕಿತ್ತಳೆ, ಹೀಗೆಲ್ಲಾ ಜ್ಯೂಸ್ ಗಳನ್ನು ಇಚ್ಚೆಪಟ್ಟು ಕುಡಿಯುತ್ತೇವೆ. ಆದರೆ ಈ ಹಣ್ಣಿನ ಮರ ಇದ್ದರೆ ಅದರ ಹಣ್ಣುಗಳನ್ನು ಹಕ್ಕಿಗಳು, ಅಳಿಲುಗಳಿಗೆ ಬಿಡುತೇವೆ. ಅದನ್ನು ಯಾಕೆ ನಾವು ಪಾನಕವಾಗಿ ಬಳಸಿ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಡಬಾರದು?
end of the article: ————————————————–
search words: Traditional fruit# Star fruit# sour fruit# Healthy fruit#  Averroha carambola #  carambola# Kamaraka # Darehuli# 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!