ಯೂರಿಯಾ ಗೊಬ್ಬರ –ಖರೀದಿ ಇನ್ನು ಕಷ್ಟವಾಗಲಿದೆ!

by | Oct 16, 2020 | Government & Daily News (ಸರ್ಕಾರ ಮತ್ತು ದೈನಂದಿನ ಸುದ್ದಿ) | 0 comments

ರೈತರ ಬೆಳೆ ಪೋಷಣೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳಿಗೆ ಭಾರತ ಸರಕಾರ ಸಬ್ಸಿಡಿ ನೀಡುತ್ತದೆ. ಆದ ಕಾರಣ ಅದು ನಮಗೆ ಮಿತ ದರದಲ್ಲಿ ಲಭ್ಯವಾಗುತ್ತದೆ. ಈ ಸಬ್ಸಿಡಿ  ದುರುಪಯೋಗವಾಗುತ್ತಿದೆ. ಮನಬಂದಂತೆ ಯೂರಿಯಾ ಗೊಬ್ಬರ ಖರೀದಿ ಮಾಡಿ, ಅದನ್ನು ಬೇರೆ ಉದ್ದೇಶಗಳಿಗೂ ಬಳಕೆ ಮಾಡುತ್ತಾರೆ ಎಂಬ ಕಾರಣಕ್ಕೆ ಇನ್ನು ಆಯಾ ಹಂಗಾಮಿನಲ್ಲಿ ಮಾತ್ರ ನಿಗದಿಪಡಿಸಿದ ಪ್ರಮಾಣದ ಗೊಬ್ಬರ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಈ ನಿಬಂಧನೆ ಜ್ಯಾರಿಯಾಗಿ ಎರಡು ವರ್ಷಗಳೇ ಆಗಿದ್ದರೂ ಈಗ ಎಲ್ಲಾ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳವರೂ ಇದನ್ನು ಕಡ್ದಾಯವಾಗಿ ಪಾಲಿಸಲು ನಿರ್ಧೇಶನ ನೀಡಲಾಗಿದೆ. ಈಗ ಬಹುತೇಕ ಕಡೆ ನಿಮ್ಮ ಬೆರಳಚ್ಚು ಪಡೆದು ರಸ ಗೊಬ್ಬರ ಕೊಡುತ್ತಿದ್ದಾರೆ. ಒಮ್ಮೆಗೆ ಒಬ್ಬನಿಗೆ 15 ಚೀಲಗಳಷ್ಟು ಮಾತ್ರ ಯೂರಿಯಾ ಗೊಬ್ಬರ ಖರೀದಿಗೆ ಅವಕಾಶ ಇದೆ.

  • ರಾಸಾಯನಿಕ ಗೊಬ್ಬರಕ್ಕಾಗಿ ಭಾರತ ಸರಕಾರ ವಾರ್ಷಿಕ 2,27,255 ಕೋಟಿ ಸಬ್ಸಿಡಿ ನೀಡುತ್ತಿದೆ.
  • ಈ ವರ್ಷದ 2020-21  ರಲ್ಲಿ ಇದರಲ್ಲಿ ಯೂರಿಯಾ ಗೊಬ್ಬರಕ್ಕೆ 48,000 ಕೋಟಿ ಸಬ್ಸಿಡಿ ನೀಡಿದೆ..
  • ಇಷ್ಟೂ ಮೊತ್ತವನ್ನೂ ರಸಗೊಬ್ಬರ ತಯಾರಿಕಾ ಕಂಪೆನಿಗಳಿಗೆ ಕೊಡುತ್ತಿದ್ದು, ಅವರು ಪ್ರತೀ ಬ್ಯಾಗ್ ಗೆ ಅದರ ಪ್ರಮಾಣಕ್ಕನುಗುಣವಾಗಿ  ಮಾರಾಟ ಬೆಲೆಯಲ್ಲಿ ಕಡಿಮೆ ಮಾಡಿ ಅದನ್ನು ಚೀಲದಲ್ಲಿ ನಮೂದಿಸುತ್ತಾರೆ.
  • ಇಷ್ಟೊಂದು ದೊಡ್ಡ  ಪ್ರಮಾಣದ  ಸಬ್ಸಿಡಿ ದೇಶದ ಆರ್ಥ ವ್ಯವಸ್ಥೆಗೆ ಅತೀ ದೊಡ್ಡ ನಷ್ಟವಾಗಿದ್ದು, ಇದನ್ನು ದುರುಪಯೋಗವಾಗದಂತೆ ಹಂಚುವ ಯೋಚನೆಯನ್ನು ಕೇಂದ್ರ ಸರಕಾರ ಹೊಂದಿದೆ.

ಗದ್ದೆ ಉಳುತ್ತಿರುವ ರೈತ

ಈ ತನಕ ಹೇಗಿತ್ತು:

  • 2018 ಕ್ಕೆ ಮುಂಚೆ ಯಾರೇ ಆಗಲಿ, ಎಲ್ಲಿಂದಲೇ ಆಗಲಿ ಯೂರಿಯಾ ಗೊಬ್ಬರವನ್ನು ಎಶ್ಟು ಬೇಕೋ ಅಷ್ಟು ಖರೀದಿ ಮಾಡಿ, ಬೇಕಾದಂತೆ ಬಳಸಬಹುದಿತ್ತು.
  • 2018 ರಲ್ಲಿ ರಸ ಗೊಬ್ಬರಗಳನ್ನು POS ( Point of Sale) ಮೂಲಕ ಮಾರಾಟ ಮಾಡುವ ವ್ಯವಸ್ಥೆ ಬಂತು.
  • ಇದರಂತೆ ರಸಗೊಬ್ಬರ ಖರೀದಿ ಮಾಡುವ ರೈತರು ತಮ್ಮ ಆದಾರ್ ನಂಬ್ರ ಲಿಂಕ್ ಆದ ಮೊಬೈಲ್ ನಂಬ್ರವನ್ನು ಮತ್ತು ಬೆರಳಚ್ಚು ಮೂಲಕ ಒಂದು ಯಂತ್ರದಲ್ಲಿ ನೋಂದಾಯಿಸಿ ಗೊಬ್ಬರ ಖರೀದಿ ಮಾಡಬೇಕಾದ ವ್ಯವಸ್ಥೆ ಬಂತು.
  • ಇದನ್ನು ಕೆಲವರು ಅನುಸರಿಸುತ್ತಿದ್ದರು, ಮತ್ತೆ ಕೆಲವರು ಅದನ್ನು ಅನುಸರಿಸುತ್ತಿರಲಿಲ್ಲ.
  • ರಸಗೊಬ್ಬರ ಸಬ್ಸಿಡಿಯ ನೇರ ಫಲಾನುಭವಿಗಳು ರಸಗೊಬ್ಬರ ತಯಾರಿಕಾ ಕಂಪೆನಿಗಳಾಗಿದ್ದವು.
  • ಸರಕಾರ ಅವುಗಳ ಉತ್ಪಾದನಾ ಪ್ರಮಾಣಕ್ಕನುಗುಣವಾಗಿ ಸಬ್ಸಿಡಿ ನೀಡುತ್ತಿತ್ತು.
  • ಅದನ್ನು  ಹಂಚಿ ಪ್ರತೀ ಬ್ಯಾಗ್ ಗೆ ಭಾರತ ಸರಕಾರದ ಸಬ್ಸಿಡಿ ಇಷ್ಟು, ಅದನ್ನು ಕಳೆದು ಗರಿಷ್ಟ ಮಾರಾಟ ಬೆಲೆಯನ್ನು ನಮೂದಿಸಿ ಮಾರಾಟ ಆಗುತ್ತಿತ್ತು.
  • ರಸ ಗೊಬ್ಬರವನ್ನು ಇಡೀ ವರ್ಷಕ್ಕೆ ಬೇಕಾದಷ್ಟು ದಾಸ್ತಾನು ಇಟ್ಟು ಕೊಳ್ಳಬಹುದಿತ್ತು.  ಯಾರು ಕೇಳಿದರೂ ಎಷ್ಟು ಬೇಕಾದರೂ ಗೊಬ್ಬರ ಲಭ್ಯವಿರುತ್ತಿತ್ತು.

ಇನ್ನು ಮುಂದೆ ಏನಾಗಲಿದೆ?

  • ಇನ್ನು ಮುಂದೆ ರೈತರು ತಾವು ಬೆಳೆಯುವ ಬೆಳೆ ಯಾವುದು, ಯಾವ ಸೀಸನ್ ನ ಬೆಳೆ, ಅದಕ್ಕೆ ಶಿಫಾರಿತ ರಸಗೊಬ್ಬರ ಪ್ರಮಾಣ ಎಷ್ಟು ಅಷ್ಟನ್ನು ಮಾತ್ರ ಆಯಾ ಸೀಸನ್ ನಲ್ಲಿ ಪಡೆಯುವ ಅವಕಾಶ.
  • ಸಬ್ಸಿಡಿ ಮೊತ್ತವನ್ನು ರಸಗೊಬ್ಬರ ತಯಾರಿಕಾ ಕಂಪೆನಿಗಳಿಗೆ ಕೊಡುವುದು ರೈತ ಖರೀದಿ ಮಾಡಿದ ನಂತರ.
  • ಇನ್ನು ಮುಂದೆ ಸರಕಾರದ ನೊಂದಾಯಿತ 2.30 ಲಕ್ಷ  ರೀಟೇಲ್ ಔಟ್ಲೆಟ್ ಮೂಲಕ ಮಾತ್ರ POS  ಯಂತ್ರದಲ್ಲಿ ನಮೂದಾಗಿಯೇ  ರಸಗೊಬ್ಬರ ಖರೀದಿ ನಡೆಯಬೇಕು.
  • ನಿಜವಾದ ರೈತ ಮಾತ್ರ ರಸಗೊಬ್ಬರ ಖರೀದಿ ಮಾಡಬೇಕು. ಅದು ಬೇರೆ ಕ್ಷೇತ್ರಗಳಿಗೆ ಹೋಗಬಾರದು. ಎಂಬುದು ಈ ಬದಲಾವಣೆಯ ಉದ್ದೇಶ.

ಯುರಿಯಾ ಅಥವಾ ಸಾರಜನ ಅತಿ ಬಳಕೆ ಒಳ್ಳೆಯದಲ್ಲ:

ಯೂರಿಯಾ ಗೊಬ್ಬರ ದಾಸ್ತಾನಿಗೆ ಅವಕಾಶ ಇಲ್ಲ. ಕಾಳಸಂತೆ ವ್ಯಾಪಾರ ಸಾಧ್ಯವಿಲ್ಲ.

ದಾಸ್ತಾನಿಗೆ ಅವಕಾಶ ಇಲ್ಲ. ಕಾಳಸಂತೆ ವ್ಯಾಪಾರ ಸಾಧ್ಯವಿಲ್ಲ.

  • ಯೂರಿಯಾ ಗೊಬ್ಬರಗಳ ಅನಿಯಂತ್ರಿತ ಬಳಕೆಗೆ ಕಡಿವಾಣ ಹಾಕಲು ಇದು ಒಂದು ಉತ್ತಮ ವ್ಯವಸ್ಥೆ.
  • ಬಹಳಷ್ಟು ರೈತರು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಬಳಕೆ ಮಾಡುತ್ತಾರೆ.
  • ಈ ರೀತಿಯಲ್ಲಿ ಸಾರಜನಕ ಗೊಬ್ಬರ ಬಳಸುವ ವಿಧಾನ ಸಮರ್ಪಕ ವಿಧಾನ ಅಲ್ಲ.
  • ಇದರಲ್ಲಿ  ಬಳಕೆಯಾಗುವುದು ಸ್ವಲ್ಪ. ಬಹಳಷ್ಟು ನೀರಿನಲ್ಲಿ ಇಳಿದು ಹೋಗಿ ಆವಿಯಾಗಿ ನಷ್ಟವಾಗುತ್ತದೆ.
  • ಅಂತರ್ಜಲಕ್ಕೂ ಸೇರುತ್ತದೆ. ಸಸ್ಯದ ಬೆಳವಣಿಗೆಗೆ ಅನುಗುಣವಾಗಿ  ಲಭ್ಯವಾಗುವುದಿಲ್ಲ.
  • ಇಂದು ಕೀಟ, ರೋಗಗಳು ಹೆಚ್ಚಾಗಿರುವುದಕ್ಕೆ ಅತಿಯಾದ ಯೂರಿಯಾ ಬಳಕೆ ಒಂದು ಪ್ರಮುಖ ಕಾರಣವಾಗಿದೆ.
  • ರೈತನಿಗೆ ಒಂದು ಬಾರಿ ಖರೀದಿ ಮಾಡುವಾಗ ಇಂತಿಷ್ಟು ಎಂದು ನಿಗದಿ ಮಾಡುವುದರಿಂದ ಕಡಿಮೆ ಪ್ರಮಾಣದಲ್ಲಿ ಗೊಬ್ಬರದ ಬಳಕೆ ಆಗುತ್ತದೆ.
  • ಯೂರಿಯಾ ರಸ ಗೊಬ್ಬರವು ರೈತರ ಸಬ್ಸಿಡಿ ಹೆಸರಿನಲ್ಲಿ ಕ್ಯಾಟಲ್ ಫೀಡ್, ಕೋಳಿ ಫೀಡ್ ಮುಂತಾದವುಗಳಿಗೆ ಬಳಕೆ ಆಗುತ್ತಿರುವುದು ಕಂಡೂ ಬಂದಿದೆ.
  • ಇದನ್ನು ನಿಯಂತ್ರಿಸಲು ಇದು ಉತ್ತಮ  ವಿಧಾನ.
  • ರೈತರು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸಾರಜನಕ ಗೊಬ್ಬರವಾದ ಯೂರಿಯಾವನ್ನು ಬಳಕೆ ಮಾಡಿ, ಬದಲಿ ಮೂಲಗಳಾದ ಹಸುರೆಲೆ ಸೊಪ್ಪುಗಳ ಬಳಕೆ ಮಾಡುವುದು ಮತ್ತು ಕೊಟ್ಟಿಗೆ ಗೊಬ್ಬರವನ್ನು ಬಳಕೆ ಮಾಡುವುದು ಮಣ್ಣಿನ ಗುಣ ವೃದ್ಧಿಯಾಗಲು ಅನುಕೂಲ.
  • ಯೂರಿಯಾ ಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣಿನ ರಸ ಸಾರ ಸಹ ವ್ಯತ್ಯಾಸವಾಗಿ ತೊಂದರೆ ಆಗುತ್ತದೆ.
  • ಹಾಗೆಂದು ಇದರಲ್ಲಿ ರೈತರಿಗೆ ಯಾವ ತೊಂದರೆಯೂ ಇಲ್ಲ. ಮತ್ತೆ ತಿಂಗಳು ಕಳೆದು ಖರೀದಿ ಮಾಡಬಹುದು.  

ಸರಕಾರ ಇದೆಲ್ಲಾ ಮಾಡುವುದು ಸರಿ. ವಾಸ್ತವವಾಗಿ  ಭಾರತ ದೇಶದ ಕೃಷಿಕನಿಗೆ ಇನ್ನೂ ನಮ್ಮ ವ್ಯವಸ್ಥೆ ಸರಿಯಾದ ಪ್ರಮಾಣದಲ್ಲಿ (recomanded dose) ರಸ ಗೊಬ್ಬರ ಬಳಕೆ ಮಾಡುವ ಶಿಕ್ಷಣವನ್ನು ಕೊಡಲು ನಮ್ಮ ವ್ಯವಸ್ಥೆಯಿಂದ ಆಗಲಿಲ್ಲ. 80% ಕೃಷಿಕರು NPK ಎಂದರೇನು, ಅದರ ಕಾರ್ಯ ಏನು ಎಂಬುದನ್ನು ಮನವರಿಕೆ ಮಾಡಿಕೊಡಲು ಸಾಧ್ಯವಾಗಿಲ್ಲ. ಕೃಷಿಕ ರಾಸಾಯನಿಕ – ಸಾವಯವ ಎಂಬ ಎರಡು ವಿಷಯಗಳಲ್ಲಿ ಒಟ್ಟಾರೆ  ದ್ವಂದ್ವದಲ್ಲಿದ್ದಾನೆ.  ಅವೈಜ್ಞಾನಿಕ ಕೀಟನಾಶಕ , ರೋಗನಾಶಕ ಬಳಕೆ ಮಾಡುವ  ಮೂಲಕ ತಮ್ಮ ಆರೋಗ್ಯವನ್ನು ಮೊದಲು ಹಾಳು ಮಾಡಿಕೊಳ್ಳುತ್ತಿದ್ದಾನೆ. ಇದನ್ನು ಸರಿಮಾಡುವ ಕೃಷಿ ಶಿಕ್ಷಣವನ್ನು ರೈತನಿಗೆ ಒದಗಿಸುವ ಕೆಲಸ ಮೊದಲಾಗಿ ಮಾಡಬೇಕಾಗಿದೆ.
ಬದಲಾವಣೆಗೆ ವ್ಯವಸ್ಥೆ ಈಗಲೇ ಸಿದ್ದವಾಗಿದ್ದು, ಸಾಂಪ್ರದಾಯಿಕ ಗೊಬ್ಬರಗಳ ಬದಲಿಗೆ, ಸಬ್ಸಿಡಿ ರಹಿತ ಸಾಲ್ಯುಬಲ್ ಗೊಬ್ಬರಗಳನ್ನು,ಸಾವಯವ ಗೊಬ್ಬರಗಳನ್ನು  ಹೆಚ್ಚು ಒತ್ತು ಕೊಟ್ಟು ಮಾರಾಟ ಮಾಡುವುದಕ್ಕೆ ಸಿದ್ದರಾಗಿದ್ದಾರೆ. ಆಮದು ಗೊಬ್ಬರಗಳು, ನೂರಾರು ಪೂರೈಕೆದಾರರು, ಲಕ್ಷಾಂತರ ಮಾರಾಟಗಾರರು ಮತ್ತು ಸಲಹಾಕಾರರು ಸೇರಿಕೊಂಡು ಸಬ್ಸಿಡಿ ರಹಿತ ರಸಗೊಬ್ಬರದ ರುಚಿಯನ್ನು ರೈತ ಸಮುದಾಯಕ್ಕೆ ಒಗ್ಗಿಸಲಾಗುತ್ತಿದೆ.
end of the article:————————————————————————–
search words: Fertiliser subsidy# POS system# fertilisers# Subsidised fertilisers# Government of India fertiliser policy#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!