ಉತ್ತಮ ಹಸುವಿನ ಆಯ್ಕೆಗೆ ಸೂಕ್ಷ್ಮ ಪರೀಕ್ಷೆಗಳು.

by | Oct 21, 2020 | Dairy Farming (ಹೈನುಗಾರಿಕೆ) | 0 comments

ಕೊಳ್ಳುವ ಹಸು ಮಾಲಕರು ಹೇಳಿದಂತೆ ಹಾಲು ಕೊಡುತ್ತದೆಯೇ, ಅವರು ಹೇಳುವುದರಲ್ಲಿ ಸತ್ಯ ಇದೆಯೇ ಎಂಬುದನ್ನು ಕೊಳ್ಳುವವರು ಪರೀಕ್ಷೆ ಮಾಡುವುದು ಅವನ ಹಕ್ಕು. ಇದಕ್ಕೆ ಕೊಡುವವರು ಆಕ್ಷೇಪ ಮಾಡಬಾರದು. ಹಾಲಿನ ಪರೀಕ್ಷೆ ಮತ್ತು ಹಾಲು ಹಿಂಡುವಾಗಿನ ಕೆಲವು ಪರೀಕ್ಷೆಗಳನ್ನು ಮಾಡಿ ಹಸುಕೊಂಡರೆ ಒಳ್ಳೆಯದು.

ಹಾಲು ಇಳುವರಿ ಪರೀಕ್ಷೆ :

  • ಹಸುವಿನಿಂದ ಒಂದೂವರೆ ದಿನದಲ್ಲಿ 3 ಬಾರಿ ಹಾಲನ್ನು ಕರೆದು, ದಿನಕ್ಕೆ ಎಷ್ಟು ಹಾಲು ಕೊಡುತ್ತದೆಂದು ತಿಳಿದುಕೊಳ್ಳಬಹುದು.
  • ಹಸು ಬೇಗ ಹಾಲು ತೊರೆ ಬಿಡಬೇಕು. ಮೊಲೆಗಳು ಗಟ್ಟಿಯಾಗಿರಬಾರದು.
  • ನಾಲ್ಕು ಮೊಲೆಗಳಿಂದ ಹಾಲು ಬರುತ್ತಿರಬೇಕು. ಹಾಲನ್ನು ಕರೆದಾಗ ಹಾಲು ಮೊಲೆಗಳ ದ್ವಾರದಿಂದ ದಪ್ಪವಾಗಿ ಬರುತ್ತಿರಬೇಕು.
  • ಸಿಂಪರಣೆ ಆದಂತೆ ಬರಬಾರದು. ಇದು ಪಾತ್ರೆಗೆ ಬೀಳುವಾಗ ತಿಳಿಯುತ್ತದೆ.
  • ಮೊಲೆ/ಮೊಲೆಗಳಲ್ಲಿ ಗಂಟು, ಗಂಟುಗಳು ಇರಬಾರದು.
  • ಕೆಚ್ಚಲಲ್ಲಿ ಹಾಲು ತುಂಬಿರುವಾಗ (ಹಾಲು ಕರೆಯುವುದಕ್ಕೂ ಮೊದಲೆ) ಹಾಲು ಸೋರಿ ಹೋಗಬಾರದು.

ಉತ್ತಮ ಹಾಲು ಕೊಡುವ ಹಸು ಹೀಗೆ ಸೌಮ್ಯ ಸ್ವಭಾವದಲ್ಲಿ ಇರುತ್ತದೆ.

ಹಾಲು ಕರೆಯಲು ಕೆಚ್ಚಲಲ್ಲಿ ಸ್ಥಳಾವಕಾಶ ಇರಬೇಕು. ಕೆಚ್ಚಲಿನ ಭಾಗದ ಒಳಗಡೆ ಮೂಲೆಯಲ್ಲಿ ಮೊಲೆಬುಡ ಇರಬೇಕು. ಅಂತಹ ರಾಸನ್ನು ಆಯ್ಕೆಮಾಡಿಕೊಳ್ಳಿ.

ಕೆಲವು ಹಸುಗಳು ಎಷ್ಟೇ ಆಹಾರ ಕೊಟ್ಟರೂ, ಆರೈಕೆ ಮಾಡಿದರೂ ಕೊಡುವ ಹಾಲು ಅಷ್ಟಕ್ಕಷ್ಟೇ. ಕೆಲವು ಅಂತಹ ಆರೈಕೆ ಇಲ್ಲದಿದ್ದರೂ ಉತ್ತಮ ಹಾಲು ಕೊಡುತ್ತವೆ. ಇದಕ್ಕೆ ಅವುಗಳ ತಳಿ ಗುಣ ಕಾರಣ. ತಳಿಗುಣವನ್ನು ಕೂಲಂಕುಶವಾಗಿ ನೋಡಲಿಕ್ಕೆ ಆಗುವುದಿಲ್ಲ. ಆದರೆ ಉತ್ತಮ ತಳಿಗುಣದ ಲಕ್ಷಣಗಳನ್ನು ಹಸುವನ್ನು ಹೊರ ನೋಟದಲ್ಲಿ ನೋಡುವಾಗಲೇ ತಿಳಿಯಬಹುದು.

ಕೆಚ್ಚಲು ನೋಡಿ ಹಾಲಿನ ಅಂದಾಜು ಪರೀಕ್ಷೆ.

ಉತ್ತಮ ಹಸುವಿನ ದೃಷ್ಟಿ ಮತ್ತು ನೋಟ

  • ಹಿಂದಿನ ಕೆಚ್ಚಲು ಸ್ವಲ್ಪ ಹಿಂದಕ್ಕೆ ಇರಬೇಕು. ಹಿಂಗಾಲಿನ ಮಂಡಿಯ ಗಣ್ಣಿನ ಮಧ್ಯದಿಂದ ಮುಂದಕ್ಕೆ ಗೆರೆ ಎಳೆದರೆ ಅದು ಹೆಚ್ಚೆಂದರೆ ಮೊಲೆಗಳ ಬುಡಕ್ಕೆ ತಗುಲಬಹುದು.
  • ಈ ಗೆರೆಗಿಂತ ಕೆಳಕ್ಕೆ ಕೆಚ್ಚಲು ತೂಗುತ್ತಿರಬಾರದು. ಕೆಚ್ಚಲು ಶರೀರದ ಸ್ನಾಯುಗಳಿಂದ ಚೆನ್ನಾಗಿ ತೂಗು ಹಾಕಿದಂತಿರಬೇಕು.
  • ಕೆಚ್ಚಲು ಹಿಂದಕ್ಕೆ ಅಥವಾ ಮುಂದಕ್ಕೆ ಬಗ್ಗಿರಬಾರದು. ಪಕ್ಕಗಳಿಗೆ ಬಾಗಿರಬಾರದು.
  • ಕೆಚ್ಚಲನ್ನು ಹಾಲು ಕರೆಯುವ ಮೊದಲು ಮತ್ತು ನಂತರ ಪರೀಕ್ಷೆ ಮಾಡಬೇಕು.
  • ಇದಕ್ಕಾಗಿ ಕೆಚ್ಚಲಿನ ಎಡ ಮತ್ತು ಬಲ ಭಾಗಗಳಲ್ಲಿ ಕೈಗಳನ್ನು ಹಾಕಿ ಮೇಲಿಂದ ಕೆಳಕ್ಕೆ ಕೆಳಗಡೆಯಿಂದ ಮೇಲಕ್ಕೆ ಅಮುಕುತ್ತಾ ಹೋಗಬೇಕು.
  • ಅದೇ ರೀತಿಯಲ್ಲಿ ಕೆಚ್ಚಲಿನ ಹಿಂದುಗಡೆ ಮತ್ತು ಮುಂದುಗಡೆ ಕೈಗಳನ್ನು ಹಾಕಿ ಅಮುಕುತ್ತಾ ಬರಬೇಕು.
  • ಗಂಟುಗಳು ತಗುಲಬಾರದು. ಕೆಚ್ಚಲನ್ನು ಮೃದುವಾಗಿ ಅಮುಕಿದರೆ ಸ್ಪಾಂಜಿನಂತೆ ಭಾಸವಾಗಬೇಕು.
  • ಹಾಲು ಕರೆದ ನಂತರ ಕೆಚ್ಚಲು ಚೆನ್ನಾಗಿ ತೆಳುವಾಗಿ ಕಾಣಬೇಕು.
  • ಮಾಂಸ ತುಂಬ ಇದ್ದಂತೆ ಇರಕೂಡದು. ಮೊಲೆಗಳು ಹೆಚ್ಚು ನೇತಾಡುತ್ತಿರಬಾರದು.
  • ಮೊಲೆ ತೊಟ್ಟು ಕಾಲು ಹಿಮ್ಮಡಿ ಗಂಟಿನ  ನೇರಕ್ಕೆ  ಇರುವ ರಾಸು ಅತ್ಯುತ್ತಮ ಮತ್ತು ಕಾಲು ಗಂಟಿಗಿಂತ ಸ್ವಲ್ಪ ಮೇಲೆ ಇದ್ದರೆ ಆ ರಾಸು ಉತ್ತಮ.

ಹಿಂದಿನ ಕೆಚ್ಚಲು ಹಿಂದಕ್ಕೆ ಹೊರಗಡೆ ಬಂದಂತೆ ಇರಬೇಕು. ಯೋನಿಗೆ ಸಮೀಪದಲ್ಲಿ ಕೆಚ್ಚಲು ಮೂಲ ಇದ್ದರೆ ಆ ರಾಸು ಅತ್ಯುತ್ತಮ, ಸ್ವಲ್ಪ ಕೆಳಗೆ ಇದ್ದರೆ ಉತ್ತಮ.

ಉತ್ತಮ ಹಾಲು ಕೊಡುವ ಹಸುವಿನ ಕೆಚ್ಚಲು ಭಾಗ.

  • ಕೆಚ್ಚಲು ಜೋಪು ಇರುವ ಹಸು ಹೆಚ್ಚು ಹಾಲು ಕೊಡುವುದಿಲ್ಲ.
  • ಮುಂದಿನ ಕೆಚ್ಚಲು ಗುಂಡಗಿರಬಾರದು. ಸಡಿಲವಾಗಿ ಇರಬಾರದು.
  • ಹಿಂದಿನ ಕೆಚ್ಚಲಿನ ಗಾತ್ರದಷ್ಟೇ ಇದ್ದು ಅಡಿಯಲ್ಲಿ ಅಗಲವಾಗಿರಬೇಕು.  ನಾಲ್ಕು ಮೊಲೆಗಳು ಸಮಾನ ದೂರದಲ್ಲಿರಬೇಕು.
  • ಕೆಚ್ಚಲಿನ ಒಳಗಡೆ ಮೂಲೆಯಲ್ಲಿ ಮೊಲೆ ಬುಡ ಇರಬೇಕು.
  • ಪ್ರತಿಯೊಂದು ಮೊಲೆಯನ್ನು ಕರೆದು, ಹಾಲು ಬರುತ್ತಾ ಇದೆ ಅಥವಾ ಇಲ್ಲವಾ ಎಂಬುದನ್ನು ನಿರ್ಧಾರ ಮಾಡಿಕೊಳ್ಳಬೇಕು.
  • ಕುರುಡು ಮೊಲೆಗಳು ಇರಬಾರದು. ಸ್ವಚ್ಛವಾದ ಹಾಲು ಬರುತ್ತಿದ್ದು, ಹಾಲಿಗೆ ಇರತಕ್ಕಂಥ ಪರಿಮಳ ಇರಬೇಕು.
  • ಮೊಲೆಗಳ ಮೇಲೆ ನರೋಲಿ ಇರಕೂಡದು. ಮೊಲೆಗಳ ಮೇಲೆ ಗಾಯಗಳಾಗಿರಬಾರದು.
ಹಸುಗಳು ಯಾರೇ ಬಂದರೂ ತಿರುಗಿ ನೋಡುವಷ್ಟು ಚುರುಕು ಇರಬೇಕು.

ಹಸುಗಳು ಯಾರೇ ಬಂದರೂ ತಿರುಗಿ ನೋಡುವಷ್ಟು ಚುರುಕು ಇರಬೇಕು.

ಮೊಲೆಗಳು 5.5 ಸೆಂ.ಮೀ. ಉದ್ದ ಇರಬೇಕು. ನಾಲ್ಕು ಮೊಲೆಗಳು ಒಂದೇ ದಪ್ಪ, ಒಂದೇ ಉದ್ದ ಇರಬೇಕು. ಮೊಲೆ ಉದ್ದ 5.5 ಸೆಂ.ಮೀ ಗಿಂತ  ಹೆಚ್ಚು ಇಲ್ಲದ 5 ಸೆಂ. ಮೀ. ಕಡಿಮೆ ಇರದ  ರಾಸುಗಳನ್ನು ಆರಿಸಿಕೊಳ್ಳುವುದು ಉತ್ತಮ.

  • ಹಾಲಿನ ನಾಳಗಳು ಹೆಚ್ಚು ಹೆಚ್ಚಾಗಿ ಡೊಂಕಾಗಿದ್ದರೆ ರಾಸು ಹೆಚ್ಚು ಹಾಲುಕೊಡುತ್ತದೆ.
  • ಈ ನಾಳಗಳು ದಪ್ಪವಾಗಿದ್ದರೆ ಹೆಚ್ಚು ಕರುಗಳು ಹಾಕಿದೆ ಎಂದು ಹೇಳಬಹುದು.

ಹಸು ಕೊಳ್ಳುವಾಗ ಕೊಡುವವರು ಎಷ್ಟೇ ನಂಬಿಕೆಯುಳ್ಳವರಾಗಿದ್ದರೂ  ಈ ಕೆಲವು ಪರೀಕ್ಷೆಗಳನ್ನು ನಾವು ಮಾಡಲೇ ಬೇಕು.  ಇದು ನಮಗೆ ಜ್ಞಾನವನ್ನು ಕೊಡುತ್ತದೆ. ಖರೀದಿಗೆ ಮುನ್ನ ಸ್ಥಳೀಯ ಅನುಭವಿ ಪಶು ವೈದ್ಯರನ್ನು ಸಂಪರ್ಕಿಸಿ ಅವರಿಂದ ಕೆಲವು ಸರಳ ಪರೀಕ್ಷೆಗಳನ್ನು ಹೇಗೆ ಮಾಡುವುದು ಎಂದು ತಿಳಿಯುವುದು ಸೂಕ್ತ.
End of the article:————————————————————–
search words: Milking cows# Cow selection# characters of healthy cows# which cow give more milk# good milking cows#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!