ಸಾವಿರಗಟ್ಟಲೆ ಉಳಿಸುವ ಉಚಿತ ಔಷಧಿ ಸಸ್ಯ ಇದು.

flower

ಸಾವಿರಗಟ್ಟಲೆ ಸಂದರ್ಶನ ಫೀಸ್ ಮತ್ತು ಸಾವಿರ ಲೆಕ್ಕದ ಮುಲಾಮು ಮಾತ್ರೆಗೆ ಖರ್ಚು ಮಾಡುವ ಬದಲು ಉಚಿತವಾಗಿ ಅ ಫಲವನ್ನು ಈ ಸಸ್ಯದ ಮೂಲಕ ಪಡೆಯಬಹುದು. ಇದು ಒಂದು ಸುಂದರ ಹೂ ಬಿಡುವ ಸಸ್ಯ. ಸಾಮಾನ್ಯವಾಗಿ ಹೊಳೆ ದಂಡೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ಕರಾವಳಿಯ ಜನ ಆನೆ ಸಜಂಕು ( ದೊಡ್ದ ಚಗಚೆ) ಎಂದು ಕರೆಯುತ್ತಾರೆ. ಇದು ಅಸಾಮಾನ್ಯ ಔಷಧೀಯ ಸಸ್ಯವಾಗಿದ್ದು, ಮಹತ್ವ ಗೊತ್ತಿದ್ದವರು ಇದನ್ನು ತಮ್ಮ ಹೊಲದ ಬದಿಯಲ್ಲಿ ನೆಟ್ಟು ಬೆಳೆಸಿರುತ್ತಾರೆ.

Senna alata plant

 • ನಮ್ಮ ಸುತ್ತಮುತ್ತ ಹಲವಾರು ಔಷಧೀಯ ಸಸ್ಯಗಳು ಇವೆ. ಇವುಗಳ ಬಳಕೆ ಗೊತ್ತಿರುವ ಹಿರಿಯರು ಇಲ್ಲದಾಗಿದ್ದಾರೆ.
 • ಕಿರಿಯರಿಗೆ ಅದರ ಮಹತ್ವ ಗೊತ್ತಿಲ್ಲದೆ ಅದು ಬರೇ ಸಸ್ಯದಂತಾಗಿದೆ.
 • ನಾವು ಜನ ಜಾನುವಾರು ಔಷಧೋಪಚಾರಕ್ಕೆ ನೇರವಾಗಿ ಪಶುವೈದ್ಯರ ಬಳಿಗೆ ಹೋಗುತ್ತೇವೆ.
 • ಅವರು ಮೆಡಿಕಲ್ ಸ್ಟೋರ್ ಗೆ ಚೀಟಿ ಬರೆದು ಕೊಡುತ್ತಾರೆ.
 • ಅದನ್ನು ದುಬಾರಿ ಬೆಲೆ ತೆತ್ತು ತಂದು ಹಚ್ಚುತ್ತೇವೆ, ಇದರ ಬದಲಿಗೆ ಅದಕ್ಕಿಂತಲೂ ಪರಿಣಾಮಕಾರಿಯಾದ ಔಷಧೀಯ ಸಸ್ಯ ನಮ್ಮ ಕಾಲಬುಡದಲ್ಲೇ  ಇರುತ್ತದೆ.
 • ಇಂತಹ ಒಂದು ಸಸ್ಯ  ದಡ್ಡು ಮರಡು daddumardu, ಧವಲಾ dahvala,  ಶೀಮಿಗಿಡ ಅಥವಾ ಆನೆ ಸಜಂಕು. ಇದು ಒಂದು ಶಿಲೀಂದ್ರ ಸೋಂಕು ನಿವಾರಕ ಔಷಧೀಯ ಸಸ್ಯ.

ಯಾವ ಚಿಕಿತ್ಸೆಗೆ ಫಲಕಾರಿ:

 • ಜಾನುವಾರುಗಳ ಮೈ ಮೇಲೆ ಚರ್ಮಕ್ಕೆ ಶಿಲೀಂದ್ರ ಸೋಂಕು ತಗಲಿ ಚರ್ಮ ಅಲ್ಲಲ್ಲಿ ಏಳುತ್ತದೆ.
 • ಇದನ್ನು ಪರಂಗಿ ಎಂದು ಕರೆಯುತ್ತಾರೆ. ಇದರ ನಿವಾರಣೆಗೆ ಈ ಸಸ್ಯದ ರಸವನ್ನು ತೆಗೆದು ಹಚ್ಚಿದರೆ ಗುಣಮುಖವಾಗುತ್ತದೆ.
 • ಜಾನುವಾರುಗಳ ಮೈ ಮೇಲೆ ನೊಣ ಕುಳಿತು ಅದು ಗಾಯವಾಗಿ, ಅಲ್ಲಿಗೆ ಚರ್ಮ ರೋಗ ಉಂಟಾಗುವುದೂ ಇದೆ.
 • ಅದಕ್ಕೂ ಸಹ ಇದರ ಎಲೆಯ ರಸವನ್ನು ತೆಗೆದು ಹಚ್ಚಿದರೆ ಗುಣವಾಗುತ್ತದೆ.
 • ಪ್ಪ್ರಪಂಚದಾದ್ಯಂತ ಇದರ ಬಳಕೆ ಇದೆ.  ಮನುಷ್ಯರಿಗೆ ರಿಂಗ್ ವರ್ಮ್ ring worm ಉಂಟಾದಾಗ ಅದರ ನಿವಾರಣೆಗೆ ಇದರ ಎಲೆಯ ರಸಕ್ಕೆ ಅಷ್ಟೇ ಪ್ರಮಾಣದಲ್ಲಿ ಖಾದ್ಯ ಎಣ್ಣೆ ಸೇರಿಸಿ ಹಚ್ಚಿದರೆ ಗುಣವಾಗುತ್ತದೆ,
 • ಇದರ ರಸದಲ್ಲಿ ಕ್ರೈಸೋಫಾನಿಕ್ ಆಮ್ಲ  Chrysophanic  acid.ಎಂಬ ಅಂಶ ಶಿಲೀಂದ್ರ ಸೋಂಕನ್ನು ತಡೆಯುವಲ್ಲಿ ಸಹಕಾರಿ.

ಬಳಕೆ ಹೇಗೆ  ಮಾಡಬಹುದು:

vigour of growth senna alata

 • ಇದರ ಎಲೆಯನ್ನು ನೆರಳಿನಲ್ಲಿ ಒಣಗಿಸಿ ಕಷಾಯ ಮಾಡಿ (ಮಿತಿಯಲ್ಲಿ)ಕುಡಿಯುವುದರಿಂದ ರಕ್ತ ಶುದ್ಧಿ ಆಗುತ್ತದೆ ಎಂಬ ಉಲ್ಲೇಖ ಇದೆ.
 • ಇದರ ಗಿಡದ ತೊಗಟೆಯನ್ನೂ ಸಹ ಚರ್ಮರೋಗ, ವಾಂತಿ ಭೇಧಿ, ಹೊಟ್ಟೆ ಹುಳ, ಮೈ ಮೇಲಿನ ಚರ್ಮದ ಹುಳಗಳು,(ಪರಾವಲಂಭಿ ಜೀವಿ) ಚಿಕಿತ್ಸೆಗೆ ಬೇರೆ ಬೇರೆ ವಿಧಾನದಲ್ಲಿ ಬಳಕೆ ಮಾಡಲಾಗುತ್ತದೆ.
 • ಸಾಮಾನ್ಯವಾಗಿ ತಾಜಾ ತೊಗಟೆಯನ್ನು ಜಜ್ಜಿ ರಸವನ್ನು ಹಚ್ಚಿ ವಾಸಿ ಮಾಡಲಾಗುತ್ತದೆ.
 • ಬೇರನ್ನು ಜಜ್ಜಿ ಔಷಧಿಯಾಗಿ ಬಳಕೆ ಮಾಡುವುದು ಇದೆ. ಗಾಯದ ಎಣ್ಣೆ  ಮಾಡುವವರು ಇದರ ಬೇರನ್ನು ಜಜ್ಜಿ ಎಣ್ಣೆಗೆ ಹಾಕುತ್ತಾರೆ.
 • ಇದರ ಬೀಜಗಳನ್ನೂ ಸಹ ಔಷಧಿಯಾಗಿ ಬಳಕೆ ಮಾಡುತ್ತಾರೆ.
 • ಇದನ್ನು ಜಜ್ಜಿ ನೀರಿನಲ್ಲಿ ಕುದಿಸಿ ಹೊಟ್ಟೆ ಹುಳದಿಂದಾಗುವ ನೋವಿಗೆ ಔಷಧಿಯಾಗಿ ಬಳಕೆ ಮಾಡುತ್ತಾರೆ.
 • ತೊಗಟೆಯ ಟ್ಯಾನಿನ್ (ಚೊಗರು) ಬಣ್ಣ ಹಾಕಲು ಬಳಕೆಯಾಗುತ್ತದೆ.

ಇದನ್ನು ಬೆಳೆಸುವುದು ಕಷ್ಟವಿಲ್ಲ. ಎಲ್ಲಿಯಾದರೂ ಸಸಿ ಇದ್ದರೆ ತಂದು ನೆಟ್ಟರೆ ಬದುಕುತ್ತದೆ. ಬೀಜದ ಮೂಲಕವೂ ಸಸ್ಯಾಭಿವೃದ್ದಿಯಾಗುತ್ತದೆ. ಇದನ್ನು ಅಲಂಕಾರಿಕ  ಹೂವಿನ ಗಿಡವಾಗಿಯೂ ಬೆಳೆಸಬಹುದು. ಇದರ ಹಳದಿ ಹೂವು ಬಲು ಆಕರ್ಷಕ. ಜೇನು ನೊಣಗಳಿಗೆ ಉತ್ತಮ ಮಕರಂದವನ್ನು ಒದಗಿಸುತ್ತದೆ.

ಎಚ್ಚರಿಕೆ:

Senna alata flower

 • ಇದನ್ನು ಜಾನುವಾರುಗಳಿಗೆ  ಹೊಟ್ಟೆಗೆ ಬಳಕೆ ಮಾಡುವಾಗ ಜಾಗರೂಕತೆ ವಹಿಸಬೇಕು.
 • ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಚರ್ಮಕ್ಕೆ ಹಚ್ಚುವಾಗ ಅಂತಹ ತೊಂದರೆ ಇಲ್ಲ.
 • ಮನುಷ್ಯರಿಗೆ ಬಳಕೆ ಮಾಡುವಾಗ ಹೊಟ್ಟೆಗೆ ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು.
 • ಇದು ಆಡಿಗೆ  ವಿಷವಾಗುತ್ತದೆ. ಇದರ ಬೀಜಗಳು ಮೀನನ್ನು ಕೊಲ್ಲುತ್ತದೆ.
 • ಆದ ಕಾರಣ ತೀರಾ ಕಡಿಮೆ ಪ್ರಮಾಣದಲ್ಲಿ ಸ್ಥಳೀಯ ನಾಟಿ ವೈದ್ಯರ ಅಥವಾ ಬಳಕೆ ಮಾಡಿದವರ  ಸಲಹೆಯಂತೆ ಉಪಯೋಗಿಸಬೇಕು.

ನಮ್ಮ ಸುತ್ತಮುತ್ತ ಇರುವ ಹಲವಾರು ಔಷಧೀಯ ಸಸ್ಯಗಳ ಪರಿಚಯ ಮತ್ತು ಅದರ ಬಳಕೆ ವಿಧಾನಗಳನ್ನು ನಾವು ಕಲಿತು, ಅದನ್ನು ಬಳಕೆ ಮಾಡಿಕೊಂಡರೆ ಅನವಶ್ಯಕ  ಖರ್ಚು  ಕಡಿಮೆ ಮಾಡಬಹುದು.
end of the article: ———————————————————————————————–
search words: medicinal plant# herbs# indigenous medicine# Rural medicine# veterinary medicine# ring worm medicine

Leave a Reply

Your email address will not be published. Required fields are marked *

error: Content is protected !!