ಬಾಳೆಯ ಎಲೆ ಹೀಗೆ ಆದರೆ ಅದು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ..
ಬಾಳೆ ಹಾಗೆಯೇ ಇನ್ನೂ ಕೆಲವು ಬೆಳೆಗಳಲ್ಲಿ ವೈರಾಣು ರೋಗ ಬಂದಿತೆಂದರೆ ಅದನ್ನು ಉಳಿಸಿದರೆ ಬೇರೆ ಬಾಳೆಗೆ ಹರಡುತ್ತದೆ. ಇದನ್ನು ಮುಂಚಿತವಾಗಿ ಗುರುತಿಸಿ ಅದನ್ನು ನಾಶ ಮಾಡುವುದರಲ್ಲೇ ಇರುವುದು ಬಾಳೆಯ ರೋಗ ಮುಕ್ತ ಬೇಸಾಯ ಕ್ರಮ. ನೀವು ನೆಟ್ಟ ಬಾಳೆಯ ಎಲೆಗಳು ಸಹಜವಾಗಿ ಇರದೆ ಎಲೆಗಳ ಮೂಡುವಿಕೆ ಗುಚ್ಚದ ತರಹ ಆಗಿ, ಯಾವುದೂ ಪೂರ್ಣವಾಗಿ ಬಿಡಿಸಿಕೊಳ್ಳದಿದ್ದರೆ ಅದು ನಂಜಾಣು ರೋಗ. ಕೆಲವು ಎಲೆಗಳು ಸಹಜವಾಗಿ ಬಂದು ನಂತರ ಬರುವ ಎಲೆಗಳು ಶಕ್ತಿ ಕಳೆದುಕೊಂಡು ಹಳದಿಯಾಗಿ ಮೂಡಿತೆಂದರೆ ಅದು ಸಹ…