ನಮ್ಮ ಕೃಷಿ ಉತ್ಪನ್ನಗಳು ಯಾಕೆ ವಿದೇಶಗಳಲ್ಲಿ ತಿರಸ್ಕೃತವಾಗುತ್ತದೆ?
ನಮ್ಮಲ್ಲಿ 90% ಕ್ಕೂ ಹೆಚ್ಚಿನ ರೈತರು ಮಿತಿಗಿಂತ ಹೆಚ್ಚು ಕೀಟನಾಶಕ ಬಳಸುತ್ತಾರೆ. ಬಹುತೇಕ ಕೃಷಿಕರಿಗೆ ಯಾವ ಹಂತದಲ್ಲಿ ಯಾವ ಕೀಟನಾಶಕ ಬಳಸಬೇಕು ಎಂದು ತಿಳಿದಿಲ್ಲ. ನಾವು ಬಳಸುವ ಕೀಟ ನಾಶಕ ರೋಗನಾಶಕ ಎಷ್ಟು ಸಮಯ ಬೆಳೆಯಲ್ಲಿ ಉಳಿಯುತ್ತದೆ ಎಂಬುದೂ ಗೊತ್ತಿಲ್ಲ. ಅಂಗಡಿಯವರು ಕೊಟ್ಟದ್ದನ್ನು, ಸ್ವಲ್ಪ ಸ್ಟಾಂಗ್ ಇದ್ದರೆ ಒಳ್ಳೆಯದೆಂದು ಬಾಟಲಿಯನ್ನೇ ಕ್ಯಾನಿಗೆ ಸುರಿದು ಸಿಂಪಡಿಸುವ ಕಾರಣ ಅವು ಬೆಳೆಗಳಲ್ಲಿ ಉಳಿಯುತ್ತದೆ. ಆದ ಕಾರಣ ಅದು ಪರೀಕ್ಷೆಯಲಿ ಸಿಕ್ಕಿ ಬೀಳುತ್ತದೆ. ನಮ್ಮ ದೇಶದಲ್ಲಿ ಮಾತ್ರ ಕೀಟನಾಶಕ ರೋಗನಾಶಕ ಬಳಕೆ…