ನಮ್ಮ ಕೃಷಿ ಉತ್ಪನ್ನಗಳು ಯಾಕೆ ವಿದೇಶಗಳಲ್ಲಿ ತಿರಸ್ಕೃತವಾಗುತ್ತದೆ?

ಅಕ್ಕಿ ಆಗುವ ಭತ್ತದ ಪೈರಿಗೆ ಸಿಂಪರಣೆ

ನಮ್ಮಲ್ಲಿ 90% ಕ್ಕೂ ಹೆಚ್ಚಿನ ರೈತರು ಮಿತಿಗಿಂತ ಹೆಚ್ಚು  ಕೀಟನಾಶಕ ಬಳಸುತ್ತಾರೆ. ಬಹುತೇಕ ಕೃಷಿಕರಿಗೆ ಯಾವ ಹಂತದಲ್ಲಿ ಯಾವ ಕೀಟನಾಶಕ ಬಳಸಬೇಕು ಎಂದು ತಿಳಿದಿಲ್ಲ. ನಾವು ಬಳಸುವ ಕೀಟ ನಾಶಕ ರೋಗನಾಶಕ ಎಷ್ಟು ಸಮಯ ಬೆಳೆಯಲ್ಲಿ ಉಳಿಯುತ್ತದೆ ಎಂಬುದೂ ಗೊತ್ತಿಲ್ಲ. ಅಂಗಡಿಯವರು ಕೊಟ್ಟದ್ದನ್ನು, ಸ್ವಲ್ಪ ಸ್ಟಾಂಗ್ ಇದ್ದರೆ ಒಳ್ಳೆಯದೆಂದು ಬಾಟಲಿಯನ್ನೇ ಕ್ಯಾನಿಗೆ ಸುರಿದು  ಸಿಂಪಡಿಸುವ ಕಾರಣ ಅವು ಬೆಳೆಗಳಲ್ಲಿ ಉಳಿಯುತ್ತದೆ. ಆದ ಕಾರಣ ಅದು ಪರೀಕ್ಷೆಯಲಿ ಸಿಕ್ಕಿ ಬೀಳುತ್ತದೆ.

ನಮ್ಮ ದೇಶದಲ್ಲಿ ಮಾತ್ರ ಕೀಟನಾಶಕ ರೋಗನಾಶಕ ಬಳಕೆ ಮಾಡುವುದಲ್ಲ.ಕೃಷಿ ಮಾಡುವ ಎಲ್ಲಾ ದೇಶಗಳಲ್ಲೂ ಬಳಕೆ ಮಾಡುತ್ತಾರೆ. ಆದರೆ ಅವರು ಯಾರೂ ಈ ಪರೀಕ್ಷೆಗಳಲ್ಲಿ ಸಿಕ್ಕಿ ಬಿದ್ದು ರಾದ್ದಾಂತವಾಗುವುದಿಲ್ಲ. ಅಲ್ಲಿನ ರೈತರಿಗೆ ಕೀಟ ರೋಗ ನಾಶಕಗಳನ್ನು ಯಾವ ಸಮಯದಲ್ಲಿ ಸಿಂಪಡಿಸಿದರೆ ಅದರ ಉಳಿಕೆ ಅಂಶ ಇರುವುದಿಲ್ಲ ಎಂಬುದು  ತಿಳಿದಿದೆ. ಆ ಪ್ರಕಾರವೇ ಬಳಕೆ ಮಾಡುವ ಕಾರಣ ಅಲ್ಲಿ ಇಂತಹ ಸಮಸ್ಯೆ ಇಲ್ಲ.

 • ಬೆಳೆ ಉಳಿದರೆ ನಾವು ಉಳಿಯುತ್ತೇವೆ ಎಂಬ ಸ್ಥಿತಿಯಲ್ಲಿ ನಮ್ಮ ದೇಶದ ರೈತರು ಇದ್ದಾರೆ.
 • ಇದಕ್ಕಾಗಿ ಬೇರೆ ಬೇರೆ ಕೀಟನಾಶಕಗಳು ಹಾಗೂ ಶಿಲೀಂದ್ರ ನಾಶಕಗಳನ್ನು ಬಳಕೆ ಮಾಡಬೇಕಾಗುತ್ತದೆ.
 • ಈ ಬೆಳೆ ಸಂರಕ್ಷಣಾ ರಾಸಾಯನಿಕಗಳನ್ನು ಬಳಕೆ ಮಾಡುವಾಗ ಅವುಗಳ ಉಳಿಕೆಗಳು ಫಸಲಿನಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ.
 • ಸಾರ್ವಜನಿಕ ಸ್ವಾಸ್ತ್ಯದ ದೃಷ್ಟಿಯಿಂದ ಕೀಟ ನಾಶಕ, ಶಿಲೀಂದ್ರನಾಶಕಗಳ ಉಳಿಕೆಗಳು ಸಹ್ಯ ಪ್ರಮಾಣದಲ್ಲಿರುವಂತೇ ಮಾಡಲು ಗರಿಷ್ಟ ಉಳಿಕೆ ಮಿತಿಯನ್ನು  (Maximum Residue Limit  MRT ) ನಿರ್ಧರಿಸಲಾಗಿದೆ. 
 • ಈ ಮಿತಿಯಲ್ಲಿರುವ ಹಣ್ಣನ್ನು, ತರಕಾರಿಯನ್ನು ತಿನ್ನುವುದರಿಂದ ಬಳಕೆದಾರರ ಆರೋಗ್ಯಕ್ಕೆ ತೊಂದರೆ ಇರುವುದಿಲ್ಲ.
 • ಈ ನಿಯಮವನ್ನು  ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ  ಆಹಾರ ಕಲಬೆರಕೆ ನಿಯಂತ್ರಣ ಕಾಯಿದೆ 1954  (Prevention of Food  Adultration (PFA) Act 1954,  by Ministry of Health and Family Welfare) ರ ಅಡಿಯಲ್ಲಿ ಜ್ಯಾರಿಗೆ ತರಲಾಗಿದೆ.
 • ಇದು ಮಿಲಿ ಗ್ರಾಂ, ಕಿಲೋ, ಅಥವಾ ಪಿಪಿಎಂ ನ ಅಳತೆಯಲ್ಲಿರುತ್ತದೆ. 
 • ಈ ಮಟ್ಟವನ್ನು ಪೂರೈಸಲು ಯಾವುದೇ ರಾಸಾಯನಿಕಗಳನ್ನು ಸಿಂಪರಣೆ ಮಾಡುವಾಗ ಪ್ರಥಮ ಕೊಯಿಲಿನ  ಮುಂಚೆ ನಿರ್ಧರಿತ ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
 • ಈ ದಿನಗಳ ಅಂತರವನ್ನು ಕೊಯಿಲಿಗೆ ಮುಂಚಿನ ಮಧ್ಯಂತರ (Pre Hravest Interval (PHI ) ಎನ್ನುತ್ತಾರೆ. 
 • ಇದನ್ನು ಅನುಸರಿಸಿದಾಗ ಹೊಲದಲ್ಲಿ ಕೃಷಿ ರಾಸಾಯನಿಕಗಳ ಕರಗದೇ ಉಳಿಯುವಿಕೆ ನಗಣ್ಯಗಾಗುತ್ತದೆ.

ಭತ್ತದ ಪೈರಿಗೆ ಬೆಳೆಯುವ ಹಂತದಲ್ಲಿ ಸಿಂಪರಣೆ ನಿಶಿದ್ದ

ಪ್ರತೀಯೊಂದು ಕೀಟನಾಶಕ, ಶಿಲೀಂದ್ರ ನಾಶಕಗಳಿಗೆ ಅವುಗಳನ್ನು ತಯಾರಿಸಿದ ಮೂಲವಸ್ತುವಿನ ಮೇಲೆ ಅವುಗಳ ಕರಗುವ ಅವಧಿ  ಭಿನ್ನವಾಗಿರುತ್ತದೆ. ಈ ವಿಚಾರವನ್ನು ಉತ್ಪನ್ನದ ಜೊತೆಗೆ ಕೊಡುವ ಕರಪತ್ರದಲ್ಲಿ ಕಡ್ದಾಯವಾಗಿ ನಮೂದಿಸಬೇಕು ಎಂಬ ಕಾಯಿದೆ ಇರುತ್ತದೆ.

 ಉಳಿಕೆ ಅವಧಿ:

ಸಾಮಾನ್ಯವಾಗಿ ಬಳಕೆಯಾಗುವ ಕೀಟನಾಶಕಗಳು ಮತ್ತು ಅವುಗಳ ಬಳಕೆ ಪ್ರಮಾಣ ಗರಿಷ್ಟ ಉಳಿಕೆ ಮಿತಿ, ಮತ್ತು ಕೊಯಿಲಿನ ಮುಂಚೆ ಕಾಯ್ದುಕೊಳ್ಳಬೇಕಾದ ದಿನಗಳ ಅಂತರ ಹೀಗಿದೆ.

 • ಅಸೆಫೇಟ್ (Acephate )                   1.0ಗ್ರಾಂ/ಲೀ        0.01 ಪಿಪಿಎಂ.           30 ದಿನಗಳು
 • ಬೆನೊಮಿಲ್ (Benomyl )                   1.0 ಗ್ರಾಂ/ಲೀ     2.00 ಪಿಪಿಎಂ             30 ದಿನಗಳು
 • ಬಿಫೆನ್‍ಥ್ರ್ರಿನ್ (Bifenthrin )                  0.5 ಮಿಲಿ/ಲೀ.    0.50 ಪಿಪಿಎಂ            16 ದಿನಗಳು
 • ಕಾರ್ಬನ್ ಡೈಜಿಮ್ (Carbendazim)       1.0 ಗ್ರಾಂ/ಲೀ     2.00 ಪಿಪಿಎಂ.       30 ದಿನಗಳು
 • ಸೈಪರ್ ಮೆಥ್ರಿನ್ (Cypermethrin)         1.0 ಮಿಲಿ/ಲೀ     0.03 ಪಿಪಿಎಂ        21 ದಿನಗಳು
 • ಡಿಫೆನೋಕೊನೆಝೋಲ್ (Difonoconazole)  0.5 ಮಿಲಿ /ಲೀ.   0.07 ಪಿಪಿಎಂ.    28 ದಿನಗಳು
 • ಡೆಲ್ಟ್ರಾಮೆಥ್ರಿನ್ (Deltramethrin)             1.0 ಮಿಲಿ/ಲೀ     0.50 ಪಿಪಿಎಂ        21 ದಿನಗಳು
 • ಡೈಮೆಥೊಯೇಟ್ (Dimethoate)            2.0 ಮಿಲಿ/ಲೀ     1.00 ಪಿಪಿಎಂ        15 ದಿನಗಳು
 • ಫೆನ್‍ಥಿಯೋನ್ (Fenthion)                 2.0 ಮಿಲಿ/ಲೀ    2.00 ಪಿಪಿಎಂ            21 ದಿನಗಳು
 • ಫೆನ್ವೊಲೊರೇಟ್ (Fenvalerate)            1.0 ಮಿಲಿ/ಲೀ    1.00 ಪಿಪಿಎಂ         30 ದಿನಗಳು
 • ಇಮಿಡಾ ಕ್ಲೋಫ್ರಿಡ್ (Imidacloprid)          0.4 ಮಿಲಿ/ಲೀ    1.00 ಪಿಪಿಎಂ        60 ದಿನಗಳು
 • ಪ್ರೋಡಿಯೋನ್  (Iprodione)               2.0 ಗ್ರಾಂ/ಲೀ.   10.0 ಪಿಪಿಎಂ            3 ದಿನಗಳು
 • ಲಾಂಬ್ಡಾ ಹಲೋಥ್ರಿನ್(Lambda cyhalothrin)   0.5 ಮಿಲಿ/ಲೀ   0.50ಪಿಪಿಎಂ.  15 ದಿನಗಳು
 • ಪ್ರೊಕ್ಲೊರಾಜ್(Prochloraz)                      1.0 ಗ್ರಾಂ/ಲೀ   2.00 ಪಿಪಿಎಂ        6 ದಿನಗಳು
 • ಕ್ವಿನಾಲ್ ಪೋಸ್(Quinalphos)                2.0 ಮಿಲಿ/ಲೀ    0.02 ಪಿಪಿಎಂ.      20 ದಿನಗಳು
 • ಥಿಯೋಫೆನೇಟ್ ಮಿಥೇಲ್(Thiophanatemethyl)1.0 ಗ್ರಾಂ/ಲೀ.   2.00 ಪಿಪಿಎಂ  30 ದಿನಗಳು.
 • ಫೋರೇಟ್  (phorate)                                                                             28-40 ದಿನಗಳು
 • ಕಾರ್ಬೋಫ್ಯ್ರಾನ್ , ಅಥವಾ ಫ್ಯೂರಡಾನ್  (  arbofuran,  Furadan )                   21-40 ದಿನಗಳು.
 • ಮೊನೋಕ್ರೋಟೋಫೋಸ್ (monocrotophos)                                               17-96 ದಿನಗಳು.

ಮೇಲ್ಕಾಣಿಸಿದ ಕೀಟನಾಶಕ ಬಳಸಿದ ನಂತರ  ಇಷ್ಟು ದಿನಗಳು ಕಳೆಯುವುದಕ್ಕೆ ಮುಂಚೆ  ಆ ತರಕಾರಿ, ಹಣ್ಣು ಹಂಪಲು ಯಾವುದನ್ನೇ ಮಾನವ ಬಳಕೆ ಮಾಡಿದರೆ ಅದರ ಉಳಿಕೆ ಅಂಶ ಮಾನವ ದೇಹಕ್ಕೆ ಸೇರುತ್ತದೆ. ಇದು ನಿಧಾನವಾಗಿ ಮಾನವ ದೇಹದ ಜೀವ ಕೊಶಗಳನ್ನು ಹಾಳು ಮಾಡುತ್ತದೆ.

ಯಾವುದೇ ಬೆಳೆ ಇರಲಿ ಬೆಳೆ ಮಾಗುವ ಹಂತದಲ್ಲಿ ಕೀಟನಾಶಕ ಸಿಂಪಡಿಸಬಾರದು.
ಯಾವುದೇ ಬೆಳೆ ಇರಲಿ ಬೆಳೆ ಮಾಗುವ ಹಂತದಲ್ಲಿ ಕೀಟನಾಶಕ ಸಿಂಪಡಿಸಬಾರದು.

 ಪರಿಣಾಮ ಕಡಿಮೆ ಮಾಡುವುದು:

 • ಇವುಗಳಲ್ಲಿ ಕೆಲವು ಕೀಟನಾಶಕ ಮತ್ತು ಶಿಲೀಂದ್ರನಾಶಕಗಳನ್ನು ನೀರಿನಲ್ಲಿ ತೊಳೆಯುವುದರಿಂದ,
 • ಸಾಮಾನ್ಯ ಉಪ್ಪಿನ ದ್ರಾವಣದಲ್ಲಿ ತೊಳೆಯುವುದರಿಂದ,
 • ಸಾಮಾನ್ಯ ಸಾಬೂನು ಸೇರಿಸಿದ ನೀರಿನಲ್ಲಿ ತೊಳೆಯುವುದರಿಂದ,
 • ಸಿಪ್ಪೆ ತೆಗೆಯುವುದರಿಂದ ಅದರ ಉಳಿಕೆಯನ್ನು ಕಡಿಮೆ ಮಾಡಬಹುದು.
 • ಕಾರ್ಬನ್ ಡೈಜಿಮ್ ಅನ್ನು ಈ ರೀತಿ ತೊಳೆದರೆ 25-30 % ಕಡಿಮೆಯಾಗುತ್ತದೆ.
 • ಡಿಫೆನೋಕೊನೆಝೋಲ್ 30-50 % ವೂ, ಪೊರಡಿಯೋನ್ 75-80 % ವೂ, ಪ್ಲೊಕ್ಲೊರಾಜ್ 75-80 % ವೂ ಕಡಿಮೆಯಾಗುತ್ತದೆ.

ವಹಿಸಬೇಕಾದ ಮುನ್ನೆಚ್ಚರಿಕೆ:

ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳ ಉಳಿಕೆಯನ್ನು ಕಡಿಮೆ ಮಾಡಲು  ಕೆಲವು ಕ್ರಮಗಳನ್ನು ಪಾಲಿಸಬೇಕು ಅವುಗಳೆಂದರೆ

 • ಯಾವಾಗಲೂ ಶಿಫಾರಿತ ಕೀಟನಾಶಕ, ಶಿಲೀಂದ್ರ ನಾಶಕಗಳನ್ನು ಸಮಗ್ರ ಕೀಟ ನಿಯಂತ್ರಣ ಕ್ರಮದಂತೆ ಬಳಕೆ ಮಾಡಬೇಕು.
 • ರಾಸಾಯನಿಕ ಮೂಲದವುಗಳನ್ನು ಸಸ್ಯ ಬೆಳವಣಿಗೆ ಸಮಯದಲ್ಲೂ, ಸಸ್ಯ ಜನ್ಯ ಔಷಧಿಗಳನ್ನು ಕಾಯಿಯಾದ ನಂತರವೂ ಬಳಕೆ ಮಾಡಬೇಕು.
 • ಯಾವಾಗಲೂ ಕೊಯಿಲಿಗೆ ಹತ್ತಿರದ ಸಮಯದಲ್ಲಿ ಸಿಂಪರಣೆ ಮಾಡಬೇಡಿ.
 • ಪರಿಸರಕ್ಕೆ ಹಾನಿ ಇಲ್ಲದ್ದನ್ನು ಆರಿಸಿ ಕಡಿಮೆ ಸಾಂದ್ರತೆಯಲ್ಲಿ ಬಳಸಿರಿ
 • ಸಿಂಪಡಿಸಲು ಸೂಕ್ತ ಸಾಧನಗಳನ್ನು, ಮತ್ತು ಸಿಂಪಡಿಸುವಾಗ ತೊಡಬೇಕಾದ ರಕ್ಷಕ ಉಡುಗೆ ಧರಿಸಲು ಮರೆಯಬೇಡಿ.

ಇದು ಕೃಷಿ ಮಾಡುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ವಿಚಾರ. ಇದು ಕೃಷಿಕನ ಮೂಲಭೂತ ಜ್ಞಾನವಾಗಿರಬೇಕು. ಅಂಗಡಿಯವರು ಹೊಡೆಯಿರಿ ಇದು ಬೆಸ್ಟ್ ಎನ್ನುತ್ತಾರೆ. ಆದರೆ ಇದರಿಂದ ಸಿಂಪರಣೆ  ಮಾಡುವ ನಮಗೆ ಅಧಿಕ ಪ್ರಮಾಣದಲ್ಲೂ, ನಾವು ಬೆಳೆದ ಉತ್ಪನ್ನ ತಿನ್ನುವವರಿಗೆ ಸ್ವಲ್ಪ  ಪ್ರಮಾಣವನ್ನೂ ನಾವು ಹಂಚುತ್ತೇವೆ.
End of the article:——————————————————–
Search words: insecticides# insecticides and its harm# maximum residual effect of insecticides# how to use insecticides# Insecticides names# Health problems in insecticides# How to minimize insecticide  poison# Method of using plant  insecticides#

One thought on “ನಮ್ಮ ಕೃಷಿ ಉತ್ಪನ್ನಗಳು ಯಾಕೆ ವಿದೇಶಗಳಲ್ಲಿ ತಿರಸ್ಕೃತವಾಗುತ್ತದೆ?

Leave a Reply

Your email address will not be published. Required fields are marked *

error: Content is protected !!