ಅಡಿಕೆ ಸಸಿ ನೆಡುವವರು ಗಮನಿಸಿ- ಹೇಗೆ ನೆಡಬೇಕು- ಹೇಗೆ ರಕ್ಷಿಸಬೇಕು?
ಅಡಿಕೆ ಸಸ್ಯ ಏಕದಳ ಸಸ್ಯವಾಗಿದ್ದು, ಇದಕ್ಕೆ ತಾಯಿ ಬೇರು ಇಲ್ಲ. ಕವಲು ಬೇರುಗಳಿರುವ ಏಕದಳ ಸಸ್ಯದ, ಬೇರಿನ ಗುಣ ಮೇಲು ಭಾಗದಲ್ಲಿ ಪಸರಿಸುತ್ತಾ ಬೆಳೆಯುವುದಾಗಿರುತ್ತದೆ. ಮೊದಲಾಗಿ ಎಲ್ಲಾ ಅಡಿಕೆ ಬೆಳೆಸುವ ರೈತರು ಸಸ್ಯ ಬೆಳವಣಿಗೆಯ ಕ್ರಮವನ್ನು ತಿಳಿದು, ಅದಕ್ಕನುಗುಣವಾದ ಬೇಸಾಯ ಕ್ರಮವನ್ನು ಅನುಸರಿಸಬೇಕು. ಅಡಿಕೆ ಸಸಿ ನೆಡುವ ಹೊಂಡ ಹೇಗಿರಬೇಕು, ಹೇಗೆ ನೆಡಬೇಕು- ಹೇಗೆ ರಕ್ಷಿಸಬೇಕು? ಎಂಬುದರ ಫೂರ್ತಿ ಮಾಹಿತಿ ಇಲ್ಲಿದೆ. ಎಳವೆಯಲ್ಲಿ ಒಂದು ಗಿಡವನ್ನು ಸರಿಯಾಗಿ ಪೋಷಣೆ ಮಾಡಿದರೆ ಮಾತ್ರ ಅದರ ಮುಂದಿನ ಬೆಳವಣಿಗೆಗೆ ಅಡಿಪಾಯ…