
ಕಬ್ಬು ಬೆಳೆಯಲ್ಲಿ ದಂಟು ಕೊರಕ ಕೀಟದ ನಿಯಂತ್ರಣ ಹೇಗೆ?
ಕಬ್ಬಿನ ಬೆಳೆ ಉಳಿದೆಲ್ಲಾ ವಾಣಿಜ್ಯ ಬೆಳೆಗಳಿಗಿಂತ ಸುಲಭದ ಬೆಳೆ.ಆದಾಗ್ಯೂ ಇದಕ್ಕೆ ಕೆಲವು ಕೀಟ ರೋಗ ಸಮಸ್ಯೆಗಳು ಇಲ್ಲದಿಲ್ಲ. ಬೇರು ಹುಳದಂತ ಸಮಸ್ಯೆ ಕೆಲವು ಭಾಗಗಳಲ್ಲಿ ಕಬ್ಬು ಬೆಳೆಯಲೇ ಸಾಧ್ಯವಿಲ್ಲ ಎಂಬ ಮಟ್ಟಕ್ಕೆ ಬಂದರೆ, ಗಂಟು ಕೊರೆಯುವ ಹುಳವೂ (Internode borer) ಬಹುತೇಕ ಎಲ್ಲಾ ಕಡೆ ಇದೆ. ನಿಯಂತ್ರಣ ಮಾಡದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಕರ್ನಾಟಕದ ಬಹುತೇಕ ಕಬ್ಬು ಬೆಳೆಯುವ ಭಾಗಗಳಲ್ಲಿ ಈ ಕೀಟದ ತೊಂದರೆ ಹೆಚ್ಚಾಗಿದ್ದು, ಗಂಟುಗಳು ಹತ್ತಿರವಾಗಿ(ಕಿರಿದಾಗಿ), ಗುಣಮಟ್ಟ ಕುಂಠಿತವಾಗಿ ಕಬ್ಬಿನ ರಿಕವರಿ ನಷ್ಟ…