ಹಲಸು ಬೆಳೆಸುವವರು ಹೀಗೊಮ್ಮೆ ಯೋಚಿಸಿ- ಸಸಿ ನೆಡಿ.
ಹಲಸಿಗೆ ಭವಿಷ್ಯದಲ್ಲಿ ಭಾರೀ ಬೆಲೆ ಬರಲಿದೆ ಎಂದು ಬಹಳ ಜನ ಹಲಸಿನ ಕೃಷಿಗೆ ಮುಂದಾಗಿದ್ದಾರೆ. ಒಳ್ಳೆಯದು.ಆದರೆ ಎಲ್ಲವೂ ಕಸಿ ಗಿಡ ಬೇಡ. ಹಲಸು ಬೆಳೆಸುವುದೆಂದರೆ ಎಲ್ಲರಿಗೂ ಈಗ ಪ್ರತಿಷ್ಟೆಯ ಪ್ರಶ್ನೆ. ಇದಕ್ಕೆ ಎಲ್ಲೆಡೆಯೂ ಪ್ರೋತ್ಸಾಹ ಇದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ. ಕೇರಳ, ಆಂದ್ರ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರಗಳಲ್ಲಿ ಸಹ ಭಾರೀ ಪ್ರಮಾಣದಲ್ಲಿ ಹಲಸಿನ ಸಸಿ ನೆಡಲಾಗುತ್ತಿದೆ. ವಾರ್ಷಿಕ ಕರ್ನಾಟಕ, ಕೇರಳದ ಹಲಸಿನ ಸಸಿ ಮಾಡುವ ನರ್ಸರಿಗಳಿಂದ ಕೋಟ್ಯಾಂತರ ಸಂಖ್ಯೆಯ ಹಲಸಿನ ಕಸಿ ಗಿಡಗಳು ಮಾರಾಟವಾಗುತ್ತಿದೆ. ಜನ ಬೀಜ…