ಹಲಸು ಹೇಗೆ ಕಾಯಿಯಾಗುತ್ತದೆ. ಅದರ ಕೌತುಕ ಏನು?
ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು. ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು. ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ ತನಕ ಹಲಸಿನ ಮರ ಹೂವು ಬಿಡುವ ಕಾಲ. ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ ಕೆಲವು ನಿಧಾನವಾಗಿ ಶಿವರಾತ್ರೆ ನಂತರವೂ ಹೂವು ಬಿಡುತ್ತವೆ. ಗಾಳಿ ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ. ವಾಸ್ತವವಾಗಿ ಹಾಗಲ್ಲ. ಶುಷ್ಕ…