ಹಲಸು ಹೇಗೆ ಕಾಯಿಯಾಗುತ್ತದೆ. ಅದರ ಕೌತುಕ ಏನು?

by | Mar 19, 2022 | Jack Fruit (ಹಲಸು) | 0 comments

ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು.  ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು.

 • ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ  ತನಕ ಹಲಸಿನ ಮರ ಹೂವು ಬಿಡುವ ಕಾಲ.
 • ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ  ಕೆಲವು ನಿಧಾನವಾಗಿ ಶಿವರಾತ್ರೆ  ನಂತರವೂ ಹೂವು ಬಿಡುತ್ತವೆ.
 • ಗಾಳಿ  ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ.
 • ವಾಸ್ತವವಾಗಿ ಹಾಗಲ್ಲ. ಶುಷ್ಕ ವಾತಾವರಣ ಇದ್ದಾಗ ಹೂ ಬಿಡುವಿಕೆ  ಹೆಚ್ಚು.

ಹಲಸಿನ ಕಾಯಿ ಗೊಂಚಲು

ಹಲಸಿನ ಮರಗ ಹೂವು  ಒಂದು ಕೌತುಕ.

 • ಹಲಸಿನ ಮರದಲ್ಲಿ ಎಲ್ಲಾ ಮರಗಳಂತೆ ಎಲೆ ಬಾಗದಲ್ಲಿ ಹೂ ಬಿಡುವುದಲ್ಲ.
 • ಕಾಂಡ ಮತ್ತು ದಪ್ಪದ ರೆಂಬೆಗಳಲ್ಲಿ ಮಾತ್ರ ಹೂ ಬಿಡುತ್ತದೆ.
 • ಅಧಿಕ ಸಂಖ್ಯೆಯಲ್ಲಿ ಹೂ ಬಿಡುತ್ತವೆಯಾದರೂ ಅದರಲ್ಲಿ  ಫಲಿತ ಗೊಳ್ಳುವ ಹೆಣ್ಣು ಹೂವು ಕೆಲವೇ ಕೆಲವು ಮಾತ್ರ.(ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಹೂವು ಎನ್ನುತ್ತೇವೆ.
 • ಇದು ಗಂಡು ಮತ್ತು ಹೆಣ್ಣು ಮಿಡಿಗಳು) ಕೆಲವು ಮರಗಳಲ್ಲಿ  ನೆಲಮಟ್ಟದಲ್ಲೂ ಮಿಡಿ ಬಿಡುತ್ತದೆ.
 • ಹೆಣ್ಣು ಮಿಡಿಗಳು ಗೊಂಚಲುಗಳಲ್ಲಿ ಗಂಡು ಮಿಡಿಗಳ ಸಮೇತವಾಗಿ ಬಿಡುವುದು ಜಾಸ್ತಿ.
 • ಗಂಡು ಮಿಡಿಗಳು ಬೇರೆ ಕಡೆಯಲ್ಲೂ ಬಿಡುವುದಿದೆ.
 • ಗಂಡು ಮಿಡಿಗಳ  ಆಕಾರ ಮತ್ತು ಹೆಣ್ಣು ಮಿಡಿಗಳ ಆಕಾರ ಭಿನ್ನವಾಗಿರುತ್ತದೆ.ಮೇಲ್ಮೈ ಸಹ ಭಿನ್ನವಾಗಿರುತ್ತದೆ.
ಹಲಸಿನ ಗಂಡು ಹೂವು

ಹಲಸಿನ ಗಂಡು ಹೂವು

ಪರಾಗಸ್ಪರ್ಶ ಆಗಬೇಕು:

ಹಲಸಿನ ಮರದಲ್ಲಿ ಮಿಡಿ ಬಿಡುವ ಸಮಯದಲ್ಲಿ ಒಂದು ಸುವಾಸನೆ ಸುತ್ತಲೂ ಹಬ್ಬುತ್ತದೆ. ಈ ಸುವಾಸನೆಯನ್ನು ಆಘ್ರಾಣಿಸಿಯೇ  ಹಲಸು ಮಿಡಿ ಬಿಟ್ಟಿದೆ ಎಂದು ತಿಳಿಯಬಹುದು. ಈ ಸುವಾಸನೆ ಮತ್ತೇನೂ ಅಲ್ಲ. ಅದರ ಪರಾಗಕಣಗಳು ಗಾಳಿಯಲ್ಲಿ  ಹಾರುವಾಗ ಬರುವಂತದ್ದು.

 • ಗಂಡು ಮಿಡಿಗಳ ಮೇಲ್ಮೈ ನಯವಾಗಿದು, ಹೆಣ್ಣು ಮಿಡಿಗಳಲ್ಲಿ ಮುಳ್ಳುಗಳ ರಚನೆ  ಇರುತ್ತವೆ.
 • ಗಂಡು ಸಣ್ಣದಾಗಿರುತ್ತದೆ. ಹೆಣ್ಣು ದೊಡ್ಡದಿರುತ್ತದೆ.ಗಂಡು ಮಿಡಿಗಳಲ್ಲಿ ಬರೇ ಪರಾಗ ಇರುವ ಹೂ ಮಾತ್ರ ಇರುತ್ತವೆ.
 • ಹೆಣ್ಣು ಮಿಡಿಗಳಲ್ಲಿ ಅಂಡಾಶಯ ಮತ್ತು  ಶಲಾಖೆಗಳೆರಡೂ ಇರುತ್ತವೆ.
 • ಗಂಡು ಮಿಡಿ ತನ್ನ ರಕ್ಷಾ ಪೊರೆಯನ್ನು ಬಿಡಿಸಿದ  ಮರು ದಿನದಲ್ಲಿ ಕಪ್ಪಗಾಗುತ್ತಾ ಕೆಲವೇ ದಿನದಲ್ಲಿ ಉದುರುತ್ತದೆ.
 • ಹೆಣ್ಣು ಮಿಡಿಯ ರಕ್ಷಾ ಪೊರೆ ಬಿಡಿಸಿದ ತರುವಾಯ ಮುಳ್ಳಿನ ಮೇಲಿರುವ ಹೂವುಗಳು ಅರಳಿ ಪರಾಗಸ್ಪರ್ಷಕ್ಕೆ ಸಜ್ಜಾಗುತ್ತವೆ.
 • ಇದು 4-6 ದಿನಗಳ ತನಕವೂ ಮುಂದುವರಿಯುತ್ತವೆ.
ಹಲಸಿನ ಹೂವು ಪರಾಗಸ್ಪರ್ಶ ಮಾಡುವ ಜೀವಿಗಳು

ಹಲಸಿನ ಹೂವು 

 • ಪರಾಗಸ್ಪರ್ಶ ಆದ ತರುವಾಯ ಮುಳ್ಳಿನ ತುದಿ ಭಾಗ ಕಪ್ಪಗಾಗುತ್ತದೆ.
 • ಹೆಣ್ಣು ಮಿಡಿಯನ್ನು ಪರೆ ಬಿದ್ದ ತಕ್ಷಣ ಕಾಗದಲ್ಲಿ ಸುತ್ತಿಟ್ಟರೆ ಅದು ಪರಾಗಸ್ಪರ್ಶ ಆಗದೆ  ಉದುರಿ ಬೀಳುತ್ತದೆ.
 • ಅದ ಕಾರಣ ಹಲಸು ಅನ್ಯ ಪರಾಗಸ್ಪರ್ಶದಿಂದ ಫಲಿಸುವ ಕಾಯಿಯಾಗಿದೆ.
 • ಗಂಡು ಹೂವಿನ ಪರಾಗವು ಹೆಣ್ಣು  ಹೂವಿಗೆ ಲಭ್ಯವಾಗುತ್ತದೆ. ಅದು ಗಾಳಿಯ ಮೂಲಕ ಪರಾಗ ವರ್ಗಾವಣೆಯಾಗುತ್ತದೆ.
 • ಆ ಸಮಯದಲ್ಲಿ ಘಾಢ ಪರಿಮಳ ಬರುತ್ತದೆ. ಬರೇ ಗಾಳಿಯಲ್ಲದೆ ಕೀಟಗಳು, ಇರುವೆಗಳೂ ಸಹ ಪರಾಗಸ್ಪರ್ಶಕ್ಕೆ ಹೆಚ್ಚಾಗಿ ಸಹಕರಿಸುತ್ತವೆ.
 • ಇದೇ ಕಾರಣಕ್ಕೆ ಹಲಸು ಬೀಜದಿಂದ  ಸಸ್ಯಾಭಿವೃದ್ದಿಯಾದಾಗ ತನ್ನ ಮಾತೃ ಗುಣದಿಂದ ಭಿನ್ನವಾದ ಕಾಯಿ ಬಿಡುವುದು.
 • ಇಂದೇ ನಿಮ್ಮ ಹಲಸಿನ ಮರ ಹೂ ಬಿಡುವ ಸಮಯದಲ್ಲಿ ಇದನ್ನು ಗಮನಿಸಿ.ಹಲಸಿನ ಮರದಲ್ಲಿ 95-96 %  ಗಂಡು ಹೂ ಮಿಡಿಗಳೇ ಇರುತ್ತದೆ.
 • ಹೆಣ್ಣು ಮಿಡಿ ಇರುವ ಸಮಯದುದ್ದಕ್ಕೂ ಇದು ಇರುತ್ತದೆ.
ಹೂವು ಪರಾಗಸ್ಪರ್ಶ ಆದಾಗ ಮುಳ್ಳಿನ ತುದಿ ಕಪ್ಪಾಗುವುದು

ಹೂವು ಪರಾಗಸ್ಪರ್ಶ ಆದಾಗ ಮುಳ್ಳಿನ ತುದಿ ಕಪ್ಪಾಗುವುದು

ಅಪರೂಪದಲ್ಲಿ  ಕೆಲವು ಮರಗಳಲ್ಲಿ ಹೆಣ್ಣು ಹೂ ಮಿಡಿಗಳು ಜಾಸ್ತಿ ಇರುತ್ತವೆ. ಅಂತವುಗಳಲ್ಲಿ ಅಧಿಕ ಸಂಖ್ಯೆಯ ಕಾಯಿಯಾಗುತ್ತದೆ.ಸಮರ್ಪಕವಾಗಿ ಪರಾಗ ಸ್ಪರ್ಷ ಆಗದೇ ಇದ್ದ ಕಾಯಿ ಅಲ್ಲಲ್ಲಿ  ಪೊಳ್ಳು ಆಗುವುದನ್ನು  ಕಾಣಬಹುದು.   

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!