ಕಾಲಸ್ಥಿತಿಗೆ ಅನುಗುಣವಾಗಿ ಕೃಷಿ ಮಾಡಬೇಕು- ಅಶೋಕ್ ಕುಮಾರ್ ಕರಿಕಳ..

ಕಾಲಸ್ಥಿತಿಗೆ ಅನುಗುಣವಾಗಿ ಕೃಷಿ ಮಾಡಬೇಕು- ಅಶೋಕ್ ಕುಮಾರ್ ಕರಿಕಳ.

ಕೃಷಿಕರಾದವರು ಕಾಲಸ್ಥಿತಿಗೆ ಅನುಗುಣವಾಗಿ ತಮ್ಮ ವೃತ್ತಿಕ್ಷೇತ್ರದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡು ಬಂದರೆ  ಯಾವುದೋ ಕಷ್ಟವಿಲ್ಲದೆ ಅದರಲ್ಲಿ ಯಶಸ್ಸನು ಹೊಂದಬಹುದು ಎಂಬುದು ಕರಿಕಳ ಅಶೋಕ್ ಕುಮಾರ್ ಇವರ ಅನುಭವದ ಮಾತು. ಇವರು ಹುಟ್ಟು ಕೃಷಿಕರು. ಅದೇ ಕ್ಷೇತ್ರದಲ್ಲಿ ವ್ಯಾಸಂಗವನ್ನೂ ಮಾಡಿದವರು. ಜೊತೆಗೆ ಅದೇ ಕ್ಷೇತ್ರದಲ್ಲೇ ತನ್ನ ಬದುಕನ್ನೂ ಕಟ್ಟಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಸಮೀಪದ ಕರಿಕಳ ಎಂಬಲ್ಲಿ ವೈದ್ಯರ ಮಗನಾಗಿ ಹುಟ್ಟಿ, ಈಗ ಬೆಂಗಳೂರು ದೊಡ್ಡಬಳ್ಳಾಪುರದಲ್ಲಿ ಕೃಷಿ ಮತ್ತು ಅದಕ್ಕೆ ಪೂರಕ ವೃತ್ತಿ ನಡೆಸುತ್ತಿದ್ದಾರೆ. ಇವರರನ್ನು  ಕೃಷಿ…

Read more
180 ಕ್ಕೂ ಹೆಚ್ಚು ಹಲಸಿನ ತಳಿ ತೋಟ

180 ಕ್ಕೂ ಹೆಚ್ಚು ಹಲಸು ತಳಿಗಳ ಖಜಾನೆ

ರಾಜ್ಯ ಹೊರ ರಾಜ್ಯಗಳ ವಿಶಿಷ್ಟ ಗುಣದ ಸುಮಾರು 180 ಕ್ಕೂ ಹೆಚ್ಚು ತಳಿಗಳನ್ನು ತಮ್ಮ ಹೊಲದಲ್ಲಿ ಬೆಳೆಸಿ, ಸಂರಕ್ಷಿಸಿದ ಬೆಂಗಳೂರು, ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ  IIHR  ಸಾಧನೆ ಪ್ರಶಂಸಾರ್ಹ. ಇಲ್ಲಿ ತಳಿಗಳ ಸಂಗ್ರಹ ಇದ್ದರೆ  ಸೇಫ್. ಹಲಸಿನ ಹಣ್ಣಿಗೆ ಈಗ ಹೆಚ್ಚಿನ ಮಹತ್ವ ಬಂದಿದೆ. ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ  ಹಲಸು ತಿನ್ನುವರು, ಬೆಳೆಸುವವರು ಹೆಚ್ಚಾಗಿದ್ದಾರೆ. ಹಲಸಿನ ಮೌಲ್ಯ ವರ್ಧಿತ ಉತ್ಪನ್ನಗಳು ಹೆಚ್ಚಿವೆ. ಹಲಸು ನಮ್ಮಲ್ಲಿ ಅನಾದಿ ಕಾಲದಿಂದಲೂ ಇದ್ದ ಹಣ್ಣು. ಅದರ ಮರಮಟ್ಟಿನ…

Read more
ಹಲಸಿನ ಕಾಯಿಯಾಗುವ ಕೌತುಕ

ಹಲಸು ಹೇಗೆ ಕಾಯಿಯಾಗುತ್ತದೆ. ಅದರ ಕೌತುಕ ಏನು?

ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು.  ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು. ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ  ತನಕ ಹಲಸಿನ ಮರ ಹೂವು ಬಿಡುವ ಕಾಲ. ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ  ಕೆಲವು ನಿಧಾನವಾಗಿ ಶಿವರಾತ್ರೆ  ನಂತರವೂ ಹೂವು ಬಿಡುತ್ತವೆ. ಗಾಳಿ  ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ. ವಾಸ್ತವವಾಗಿ ಹಾಗಲ್ಲ. ಶುಷ್ಕ…

Read more
ಬೊರ್ಡೋ ಪೇಸ್ಟ್- Bordeaux paint

ತೋಟಗಾರಿಕಾ ಬೆಳೆಗಾರರ ರಕ್ಷಕ ಈ ಶಿಲೀಂದ್ರ ನಾಶಕ.

ನಾವೆಲ್ಲಾ ಕೆಲವು ಸಂಶೋಧನಾ ಸಂಸ್ಥೆಗಳು, ಬೆಳೆ ಪ್ರಾತ್ಯಕ್ಷಿಕಾ ತಾಕುಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ತೋಟದ ಬೆಳೆಗಳ ಮರ, ಬಳ್ಳಿಯ ಕಾಂಡಕ್ಕೆ ನೀಲಿ ಮಿಶ್ರ ಬಿಳಿ ಬಣ್ಣದ ಲೇಪನ ಮಾಡಿರುವುದನ್ನು ಕಂಡಿರಬಹುದು.  ಅದು ಏನು ಗೊತ್ತೇ? ಇದು ನೋಡಲು ಚೆಂದವಾಗಿ ಇರಲಿ ಎಂದು ಲೇಪನ ಮಾಡಿದ್ದು ಅಲ್ಲ. ಅದು ಒಂದು ಸಸ್ಯ ಸಂರಕ್ಷಣಾ ಔಷಧಿಯ ಲೇಪನ. ಬಹುತೇಕ ತೋಟಗಾರಿಕಾ ಬೆಳೆಗಳಿಗೆ ಕಾಂಡದ ಮೂಲಕ ಕೆಲವು ರೋಗ – ಕೀಟಗಳು ಪ್ರವೇಶವಾಗುತ್ತವೆ. ಅದನ್ನು ಪ್ರತಿಬಂಧಿಸುವಲ್ಲಿ ಈ ಬಣ್ಣದ ಪೇಸ್ಟ್ ಲೇಪನ…

Read more

ಮನೆಯಲ್ಲೇ ಹಲಸಿನ ಹಣ್ಣಿನ ವೈನ್ ತಯಾರಿಕೆ.

ಹಲವು ಬಗೆಯ ಹಣ್ಣುಗಳಿಂದ ವೈನ್ ತಯಾರಿಸಲಿಕ್ಕೆ ಆಗುತ್ತದೆ. ಹುಳಿ ಅಂಶ ಇರುವ ಹಣ್ಣುಗಳ ವೈನ್ ಮಾಡುವುದು ಸಾಮಾನ್ಯವಾದರೂ , ಬರೇ ಸಿಹಿ ಇರುವ ಹಣ್ಣುಗಳಿಂದಲೂ ವೈನ್ ಮಾಡಬಹುದು. ವೈನ್ ಎಂಬುದು ಆರೋಗ್ಯಕ್ಕೆ ಉತ್ತಮ ಪೇಯವಾಗಿದ್ದು, ಎಲ್ಲರೂ ಇದನ್ನು ಹಿತ ಮಿತವಾಗಿ ಸೇವಿಸಬಹುದು. ಹಲಸಿನ ಹಣ್ಣಿನ ವೈನ್ ವಿಶಿಷ್ಟ ಸುವಾಸನೆಯೊಂದಿಗೆ ಸಿಹಿ ವೈನ್ ಆಗಿರುತ್ತದೆ. ಹಲಸಿನಲ್ಲಿ ಬಕ್ಕೆ ಮತ್ತು ಬೆಳುವ ಎಂಬ ಎರಡು ವಿಧ. ಹಣ್ಣಿಗೆ ಬಕ್ಕೆ ಹಲಸು ಸೂಕ್ತ. ಬೆಳುವೆ ಅಥವಾ ಅಂಬಲಿ ಹಣ್ಣು ರುಚಿಯಲ್ಲಿ, ಎಲ್ಲದರಲ್ಲೂ…

Read more

ಸಸ್ಯ ಪೀಳಿಗೆಗೆ ಮರು ಜೀವ ಕೊಡುವ ಕಸಿ ಗುರುಗಳು.

ಉಡುಪಿಯ ಪೆರ್ಡೂರು ಸಮೀಪ ಗುರುರಾಜ ಬಾಲ್ತಿಲ್ಲಾಯ ಎಂಬ ಕಸಿ ತಜ್ಞ ಮಾಡದ ಕಸಿ ಇಲ್ಲ. ಇವರು ಸಸ್ಯಾಭಿವೃದ್ದಿಯಅಥವಾ ಕಸಿಗಾರಿಕೆಯ  ತಜ್ಞನೂ ಅಲ್ಲದೆ ಒಬ್ಬ ಸಸ್ಯ ಸಂರಕ್ಷಕನೂ ಹೌದು. ಇವರ ಕೈಯಲ್ಲಿ ಮರುಜೀವ ಪಡೆದ ಅದೆಷ್ಟೋ ಅಳಿದು ಹೋದ ತಳಿಗಳಿವೆ. ಸಸ್ಯದ ಒಂದು ಮೊಗ್ಗು ಸಿಕ್ಕರೂ ಸಾಕು ಹೇಗಾದರೂ ಅದನ್ನು ಕಸಿ ಮಾಡಿ ಮರು ಜೀವ ಕೊಡಬಹುದು ಎನ್ನುತ್ತಾರೆ. ಸುಮಾರು 25 ಕ್ಕೂ ಹೆಚ್ಚು ವಿಧಾನದಲ್ಲಿ ಕಸಿಮಾಡುವ ತಂತ್ರವನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ನಿಮ್ಮ ಹೊಲದಲ್ಲಿ ಒಂದು ವಿಶಿಷ್ಟ …

Read more

ಇದು ಹಲಸಿನ ಹೊಸ ತಳಿ.

ಹಲಸಿನಲ್ಲಿ ಕೆಲವು ತಳಿಗಳ ಗುಣಗಳನ್ನುಅಧ್ಯಯನ ನಡೆಸಿ ಉತ್ತಮ ತಳಿ ಎಂದು ಸಂಶೋಧನಾ ಕೇಂದ್ರಗಳು ಬಿಡುಗಡೆ ಮಾಡಿವೆ. ಕೆಲವು ರೈತರೇ ಬಿಡುಗಡೆ ಮಾಡಿದ್ದೂ ಇದೆ!! ಹಲಸಿಗೆ ಘಮ ಘಮ ಸುವಾಸನೆ  ಬಂದದ್ದು  ಅದಕ್ಕೆ  ದೊರೆತ  ಪ್ರಚಾರದ ಕಾರಣದಿಂದ. ಇವೆಲ್ಲಾ ಪ್ರಚಾರ ಗಳಿಗೂ ಮುಂಚೆಯೇ  ಬೆಂಗಳೂರಿನ ಕೃಷಿ ವಿಶ್ವವಿಧ್ಯಾನಿಲಯದ ತೋಟಗಾರಿಕಾ ವಿಭಾಗದಲ್ಲಿ ಸಾಕಷ್ಟು  ಹಲಸಿನ ಬೇರೆ  ಬೇರೆ ತಳಿಗಳ  ಸಂಗ್ರಹ ಇತ್ತು. ಅಲ್ಲಿ ಅದರ ಅಧ್ಯಯನ ನಡೆಯುತ್ತಿತ್ತು. ಆದರೆ ಆಂಥ ಪ್ರಚಾರ ಇರಲಿಲ್ಲ. ಇಲ್ಲಿ ಅಧಿಕ ಇಳುವರಿ, ಗುಣ ಮಟ್ಟದ…

Read more

ಗುಣಮಟ್ಟದ ಹಲಸು ಪಡೆಯುವ ವಿಧಾನ.

ಹಲಸಿನ ಮರದಲ್ಲಿ ಮಿಡಿ ಕಾಯಿಗಳು ಬಿಡಲು ಪ್ರಾರಂಭವಾಗಿವೆ. ಇನ್ನು ಬರುವ ಚಳಿ, ಒಣ ಹವೆಯಿಂದ ಇನ್ನೂ ಸ್ವಲ್ಪ ಕಾಯಿ ಬಿಡಬಹುದು. ಬಿಟ್ಟ ಎಲ್ಲಾ ಕಾಯಿಗಳನ್ನೂ ಉಳಿಸಬೇಡಿ. ಒಂದು ಮರಕ್ಕೆ  ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ ಕಾಯಿ ಉಳಿಸಿಕೊಂಡರೆ ಗುಣಮಟ್ಟದ ಹಲಸಿನ ಕಾಯಿ ಪಡೆಯಬಹುದು. ಹಲಸಿನ ಮರದಲ್ಲಿ ಮಿಡಿಗಳು ಸಾಕಷ್ಟು ಬಿಟ್ಟರೆ  ಎಲ್ಲಾ ಕಾಯಿಗಳೂ ಒಳ್ಳೆಯ ರೀತಿಯಲ್ಲಿ ಬೆಳೆವಣಿಗೆ ಹೊಂದುವುದಿಲ್ಲ. ಕೆಲವು ಚಪ್ಪಟೆಯಾಗುತ್ತದೆ. ಕೆಲವು ಮಾತ್ರ ಪುಷ್ಟಿಯಾಗುತ್ತದೆ. ಚಪ್ಪಟೆ ಇಲ್ಲದ ಎಲ್ಲಾ ಭಾಗವೂ ಏಕಪ್ರಕಾರವಾಗಿ ಉಬ್ಬಿರುವ ಹಲಸಿನ ಕಾಯಿಯಲ್ಲಿ ಸೊಳೆಗಳು…

Read more
error: Content is protected !!