ಉತ್ತರ ಕನ್ನಡದ ವಿಶೇಷ ಮಾವು- ಕರೇ ಈಶಾಡ್.
ಕುಮಟಾ ಅಂಕೋಲಾ ಮಧ್ಯೆ ಹೆಚ್ಚಿನವರ ಮನೆ ಬಾಗಿಲಿನಲ್ಲಿ ಒಂದೆರಡು ಮಾವಿನ ಮರ ಇದ್ದೇ ಇರುತ್ತದೆ. ಇಲ್ಲಿ ಜನ ಯಾವುದಾದರೂ ಮರ ಕಡಿದಾರು ಆದರೆ ಮನೆ ಹಿತ್ತಲಿನಲ್ಲಿರುವ ಕರೇ ಈಶಾಡ್ ಮಾವಿನ ಮರಕ್ಕೆ ಕೊಡಲಿ ಇಡಲಾರರು. ಕಾರಣ ಇದು ಆ ಪ್ರದೇಶದ ಪ್ರಸಿದ್ದ ಮಾವಿನ ತಳಿ. ಜೊತೆಗೆ ಹಣ್ಣಿನ ಸೀಸನ್‍ನಲ್ಲಿ ಸ್ವಲ್ಪ ಉತ್ಪತ್ತಿ ತಂದುಕೊಡುವ ಬೆಳೆ. ಕರೇ ಈಶಾಡ್ ಎಂಬುದು ಕುಮಟಾ ಅಂಕೋಲಾ ಮಧ್ಯದ ಪ್ರದೇಶಗಳಲ್ಲಿ ಬೆಳೆಯಲ್ಪಡುವ ಸ್ಥಳೀಯ ಮಾವಿನ ತಳಿ. ಸುಮಾರಾಗಿ ಮುಂಡಪ್ಪದ ಗಾತ್ರದಲ್ಲಿರುವ ಈ…