
ಅಡಿಕೆಯ ಧಾರಣೆ ಏನಾಗಬಹುದು? ಇಳಿಕೆಯೋ ಏರಿಕೆಯೋ?
ಅಡಿಕೆ ಧಾರಣೆಯ ಈಗಿನ ಪರಿಸ್ಥಿತಿ ಬೆಳೆಗಾರರನ್ನು ಚಿಂತೆಗೀಡುಮಾಡಿದ್ದು, ಇಳಿಕೆಯಾದೀತೋ ಎಂಬ ಆತಂಕ ಉಂಟುಮಾಡಿದೆ. ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಈಗ ದರ ಇಳಿಕೆ ಆಗಿದೆ. ಮುಂದೆ ಇದು ಸರಿಯಾಗುತ್ತದೆ. ಈ ಸಮಯದಲ್ಲಿ ದರ ಇಳಿಕೆ ಆಗುವುದು ಸಹಜವಾಗಿದೆ.ಈಗ ಕೃಷಿಕರಿಗೆ ಹಣದ ಅಗತ್ಯ ಇರುತ್ತದೆ. ಬೆಳೆಗಾರರಿಗೆ ಮಾರಾಟ ಮಾಡದೆ ನಿರ್ವಾಹ ಇಲ್ಲದ ಸ್ಥಿತಿ ಇರುತ್ತದೆ. ಅದಕ್ಕೆ ಅನುಗುಣವಾಗಿ ದರ ಇಳಿಕೆ ಆಗುತ್ತದೆ. ಈಗ ಅದದ್ದೂ ಇದೆ. ಬೆಳೆಗಾರರೆಲ್ಲರೂ ಅಧಿಕ ಬೆಲೆ ಸಿಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಧ್ಯವಾದಷ್ಟು…