ಮನೆಯ ಹಿತ್ತಲು, ಟೆರೇಸ್ ನಲ್ಲಿ ಹಣ್ಣು ಹಂಪಲು ಬೆಳೆಯುವ ವಿಧಾನ.
ಅವರವರ ಬಳಕೆಗೆ ಬೇಕಾಗುವ ಹಣ್ಣು ಹಂಪಲುಗಳನ್ನು ಹೀಗೆ ಬೆಳೆದರೆ ಉತ್ತಮ ಗುಣಮಟ್ಟದ ಸುರಕ್ಷಿತ ಹಣ್ಣುಗಳನ್ನು ತಿನ್ನಬಹುದು. ಒಂದು ಕುಟುಂಬಕ್ಕೆ ಮಾವಿನ ಹಣ್ಣು ಎಷ್ಟು ಬೇಕಾಗಬಹುದು? ವರ್ಷಕ್ಕೆ ಹೆಚ್ಚೆಂದರೆ 10 ಕಿಲೋ. ಇದನ್ನು ಉತ್ಪಾದಿಸಲು ಮಾವಿನ ತೋಟ ಮಾಡಬೇಕಾಗಿಲ್ಲ. ಮನೆಯ ಹಿತ್ತಲಲ್ಲಿ ಎಲ್ಲಿ ಗಾಳಿ ಬೆಳೆಕು ಚೆನ್ನಾಗಿ ಲಭ್ಯವಿರುತ್ತದೆಯೋ ಅಲ್ಲಿ ನೆಟ್ಟು ಫಲವನ್ನು ಪಡೆಯಬಹುದು. ಮಾವು ಮಾತ್ರವಲ್ಲ. ನಾವು ತಿನ್ನಬಯಸುವ ಎಲ್ಲಾ ನಮೂನೆಯ ಹಣ್ಣು ಹಂಪಲುಗಳನ್ನೂ ಇದೇ ತರಹ ಬೆಳೆಸಿ ನಮ್ಮ ಕುಟುಂಬಕ್ಕೆ ಬೇಕಾದ ವಿಷಮುಕ್ತ ಹಣ್ಣು ಹಂಪಲು…