ಮಂಗ ಮುಟ್ಟದ ಈ ಬಾಳೆ ಬೆಳೆದರೆ ಎಲೆ ಮಾರಾಟದಿಂದ ಲಾಭಗಳಿಸಬಹುದು.
ನಾವು ನೆಟ್ಟು ಬೆಳೆಸುವ ಎಲ್ಲಾ ತರಾವಳಿಯ ಬಾಳೆಗೂ ಒಂದಿಲ್ಲೊಂದು ದಿನ ರೋಗ ಬರಬಹುದು. ಆದರೆ ಇದಕ್ಕೆ ರೋಗ ಎಂಬುದೇ ಇಲ್ಲ. ಹಾಗೆಂದು ಇದು ಹಣ್ಣಿಗೆ ಹೊಂದುವ ಬಾಳೆ ಅಲ್ಲ. ಬಾಳೆ ಗೊನೆ ಬಿಟ್ಟರೂ ಒಳಗೆ ಬೀಜಗಳೇ ಇರುತ್ತವೆ.ಈ ಬಾಳೆ ಹಣ್ಣನ್ನು ಮಂಗ ತಿನ್ನಲಿ. ಎಲೆ ಮಾತ್ರ ನಾವು ಕೊಯ್ದು ಮಾರಾಟ ಮಾಡಬಹುದು. ಇದು ಎಲೆಗಾಗಿಯೇ ಇರುವ ಬಾಳೆ. ಬಾಳೆ ಎಲೆ ಎಂಬುದು ಪರಿಸರ ಸ್ನೇಹೀ ಅಗತ್ಯ ವಸ್ತು. ಹೋಟೇಲುಗಳು , ಸಭೆ ಸಮಾರಂಭಗಳಲ್ಲಿ ಬಾಳೆ ಹಣ್ಣಿಗಿಂತ ಹೆಚ್ಚಿನ…