ಈ ಬೀಜಕ್ಕೆ ಬಾರೀ ಬೆಲೆಯಂತೆ- ನಮ್ಮಲ್ಲೂ ಬೆಳೆಯುತ್ತದೆ.
ಇದು ಆಸ್ತ್ರೇಲಿಯಾ ಮೂಲದ ಬೀಜ. ಇದಕ್ಕೆ ಬಾರೀ ಬೆಲೆಯಂತೆ. ಮೆಕಡೇಮಿಯಾ ಇದರ ಹೆಸರು. ಪ್ರಪಂಚದ ಅತೀ ದುಬಾರಿಯ ಒಣ ಹಣ್ಣು ಎಂದರೆ ಇದು. ಮರವಾಗಿ ಬೆಳೆಯುವ ಇದರಲ್ಲಿ ತುಂಬಾ ಬೀಜಗಳಾಗುತ್ತವೆ. ಬೀಜದ ತೊಗಟೆ ಒಡೆದರೆ ಒಳಗಡೆ ಗೊಡಂಬಿ ತರಹದ ತಿನ್ನುವ ಒಣ ಬೀಜ ಇರುತ್ತದೆ. ಇದಕ್ಕೆ ವಿದೇಶಗಳಲ್ಲಿ ಭಾರೀ ಬೇಡಿಕೆ. ಮೆಕಡಾಮಿಯಾ Macadamia ವನ್ನು ಆಸ್ಟ್ರೇಲಿಯನ್ ನಟ್, ಕ್ವಿನ್ ಲ್ಯಾಂಡ್ ನಟ್ ಎಂದೂ ಇದನ್ನು ಕರೆಯುತ್ತಾರೆ. ಪ್ರಪಂಚದ ಬೇರೆ ಬೇರೆ ದೇಶಗಳಾದ ದಕ್ಷಿಣ ಆಫ್ರಿಕಾ, ಕ್ಯಾಲಿಫೋರ್ನಿಯಾ, ಬ್ರೆಝಿಲ್,…