ಈ ಬೀಜಕ್ಕೆ ಬಾರೀ ಬೆಲೆಯಂತೆ- ನಮ್ಮಲ್ಲೂ ಬೆಳೆಯುತ್ತದೆ.

by | Oct 27, 2022 | Fruit Crop (ಹಣ್ಣಿನ ಬೆಳೆ) | 2 comments

ಇದು ಆಸ್ತ್ರೇಲಿಯಾ ಮೂಲದ ಬೀಜ. ಇದಕ್ಕೆ ಬಾರೀ ಬೆಲೆಯಂತೆ. ಮೆಕಡೇಮಿಯಾ ಇದರ ಹೆಸರು. ಪ್ರಪಂಚದ ಅತೀ ದುಬಾರಿಯ ಒಣ ಹಣ್ಣು ಎಂದರೆ ಇದು. ಮರವಾಗಿ ಬೆಳೆಯುವ  ಇದರಲ್ಲಿ ತುಂಬಾ ಬೀಜಗಳಾಗುತ್ತವೆ. ಬೀಜದ ತೊಗಟೆ ಒಡೆದರೆ ಒಳಗಡೆ ಗೊಡಂಬಿ ತರಹದ ತಿನ್ನುವ ಒಣ ಬೀಜ ಇರುತ್ತದೆ. ಇದಕ್ಕೆ ವಿದೇಶಗಳಲ್ಲಿ ಭಾರೀ ಬೇಡಿಕೆ.

 • ಮೆಕಡಾಮಿಯಾ Macadamia  ವನ್ನು ಆಸ್ಟ್ರೇಲಿಯನ್ ನಟ್, ಕ್ವಿನ್ ಲ್ಯಾಂಡ್ ನಟ್  ಎಂದೂ ಇದನ್ನು ಕರೆಯುತ್ತಾರೆ.
 • ಪ್ರಪಂಚದ ಬೇರೆ ಬೇರೆ ದೇಶಗಳಾದ  ದಕ್ಷಿಣ ಆಫ್ರಿಕಾ, ಕ್ಯಾಲಿಫೋರ್ನಿಯಾ, ಬ್ರೆಝಿಲ್, ಇಸ್ರೇಲ್, ಕಿನ್ಯಾ, ನ್ಯೂಜೀಲ್ಯಾಂಡ್ ಮುಂತಾದ ದೇಶಗಳಲ್ಲಿ ಬೆಳೆಯುತ್ತಾರೆ.
 • ನಮ್ಮ ದೇಶದಲ್ಲಿ ಕರ್ನಾಟಕ, ಕೇರಳ ತಮಿಳುನಾಡು, ಮಹಾರಾಷ್ಟ್ರ, ಗುಜರಾತ್   ಓರಿಸ್ಸಾಗಳಲ್ಲಿ ಇದನ್ನು ಬೆಳೆಯುತ್ತಾರೆ.

ಇದು Plantae   ಕುಟುಂಬ, Magnoliophyta  ಪ್ರವರ್ಗದ Magnoliophyta    ಕುಟುಂಬದ  ಸಸ್ಯ ವರ್ಗವಾಗಿದೆ.

ಬೆಳೆಯಲು ಸೂಕ್ತ ಪ್ರದೇಶ:

 • ಬೆಂಗಳೂರಿನಂತಹ ಹವಾಮಾನದಲ್ಲಿ ಬೆಳೆಯುತ್ತದೆ. ಭಾರತೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಈ ಸಸ್ಯ ಕಾಯಿ ಬಿಡುತ್ತಿದೆ. 
 • ಭಾರತಕ್ಕೆ ಇದನ್ನು  4 ದಶಕದ ಹಿಂದೆಯೇ ಪರಿಚಯಿಸಲಾಗಿತ್ತು.
 • ಇದನ್ನು ಉತ್ತಮ ಬಿಸಿಲು ಇರುವ  ಚಳಿ ಉಳ್ಳ ಸಾಧಾರಣ ಮಳೆಯಾಗುವ ಪ್ರದೇಶದಲ್ಲೆಲ್ಲಾ ಬೆಳೆಸಬಹುದು.
 • ಈಗ ಕರ್ನಾಟಕ, ಕೇರಳ ಮುಂತಾದ  ಕಡೆಯ ಕೆಲವು ನರ್ಸರಿಗಳು ಸಸ್ಯೋತ್ಪಾದನೆ  ಮಾಡಿ ಕೊಡುತ್ತವೆ.
 • ಬೆಳೆಯಲು ಗರಿಷ್ಟ ತಾಪಮಾನ 25  ಡಿಗ್ರಿಯಿಂದ 30 ಡಿಗ್ರಿ ತನಕದ ತಾಪಮಾನ.
 • ಸಡಿಲವಾದ ಆಳ ಮಣ್ಣು ಉಳ್ಳ ಭೂಮಿಯಲ್ಲಿ ಇದು ಚೆನ್ನಾಗಿ ಬೆಳೆದು ಬೇಗ ಫಸಲು ಕೊಡಬಲ್ಲುದು.
 • ಕ್ವೀನ್ ಲ್ಯಾಂಡ್ ನಲ್ಲಿ ಇದು ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ.
ಮೆಕಡೆಮಿಯಾ ಬೀಜ

ಮೆಕಡೆಮಿಯಾ ಬೀಜ

ಮರ ಲಕ್ಷಣ:

 • ಇದು ಗೇರು ಮರದಂತೆ ಎತ್ತರಕ್ಕೆ ಬೆಳೆಯಬಲ್ಲ ಮರ. ಸಣ್ಣ ಎಲೆಗಳು ಸುಮಾರು 10 -18 ಮೀಟರು ಎತ್ತರದ ತನಕವೂ ಬೆಳೆಯುತ್ತದೆ.
 • ಸುಮಾರು 15  ಮೀ ಸುತ್ತಳತೆಯ ತನಕವೂ ಬೆಳೆಯುತ್ತದೆ.
 • ಇದರಲ್ಲಿ ಬಾಟಲ್ ಬ್ರಷ್ ತರಹದ ಹೂ ಗೊಂಚಲು ಆಗುತ್ತದೆ.
 • ಅದೇ ರೀತಿಯಲ್ಲಿ ಗೊಂಚಲು ಗೊಂಚಲು ಕಾಯಿಗಳೂ ಆಗುತ್ತದೆ.
 • ಕಾಯಿಯ ಗಾತ್ರ ಸಾಧಾರಣ ಹೊನ್ನೆ ಕಾಯಿಯನ್ನು ಹೋಲುತ್ತದೆ.
 • ಬಲಿಯುತ್ತಿರುವಾಗ ಕಾಯಿಯ ಬಣ್ಣ ಹಸುರು. ಬಲಿತ ನಂತರ ಅದು ಕಂದು ಬಣ್ಣಕ್ಕೆ  ತಿರುಗುತ್ತದೆ.
 • ಹೊರಗಡೆ ಸುಮಾರು 2-3 ಎಂ ಎಂ ದಪ್ಪದ  ಗಟ್ಟಿ ತೊಗಟೆ ಒಳಗೆ ಕೆನೆ ಬಣ್ಣದ ತಿನ್ನುವ ಭಾಗ ಇರುತ್ತದೆ.
 • ಮಾರ್ಚ್ ನಿಂದ ಎಪ್ರೀಲ್ ತಿಂಗಳಲ್ಲಿ ಹೂವಾಗುತ್ತದೆ. ಕಾಯಿ ಬೆಳೆಯಲು ಸುಮಾರು 200- 225 ದಿನಗಳು ಬೇಕು.
ಮರ ಹೀಗೆ ಇರುತ್ತದೆ

ಮರ ಹೀಗೆ ಇರುತ್ತದೆ

ಏನು ವಿಶೇಷ:

 • ಇದು ಅತ್ಯಧಿಕ ಸತ್ವಾಂಶಗಳನ್ನು  ಒಳಗೊಂಡ ಬೀಜ. ಇತರೆಲ್ಲಾ ಒಣ ಹಣ್ಣುಗಳಿಗಿಂತ ಅತ್ಯಧಿಕ ಪ್ರಮಣದಲ್ಲಿ ಮೊನೋ ಸೆಚುರೇಟೆಡ್  ಫ್ಯಾಟ್ ಅಂಶ ಇರುತ್ತದೆ.
 • ಒಣ ಬೀಜದಲ್ಲಿ 73% ಎಣ್ಣೆ ಅಂಶ ಮತ್ತು   9%  ಸಕ್ಕರೆ  2 % ಪ್ರೊಟೀನ್ ಹಾಗೂ ನಾರಿನ ಅಂಶ ಇದೆ.
 • ಖನಿಜಾಂಶಗಳಾದ ಕ್ಯಾಲ್ಸಿಯಂ, ಫೋಸ್ಫರಸ್, ಪೊಟ್ಯಾಶಿಯಂ, ಕಬ್ಬಿಣಾಂಶ, ವಿಟಮಿನ್ B1, B2   ಇದೆ.
 • ಇದರ ಎಣ್ಣೆ  ಇತರೆಲ್ಲಾ ಒಣ ಬೀಜಗಳಲ್ಲಿರುವ ಎಣ್ಣೆಯ ಸತ್ವಾಂಶಕ್ಕಿಂತ ಸರ್ವಶ್ರೇಷ್ಠ. 
 • ಇದನ್ನು ಐಸ್ ಕ್ರೀಮ್ ಚಾಕಲೇಟು  ಮತ್ತು ತಾಜಾ ರೂಪದಲ್ಲಿ ತಿನ್ನಲು ಬಳಕೆಯಾಗುತ್ತದೆ.
 • ಎಣ್ಣೆಯನ್ನು ಸೌಂದರ್ಯವರ್ಧಕವಾಗಿ ಬಳಸುವುದಿದೆಯಂತೆ.
ಹೂವು ಬಿಡುವ ಕ್ರಮ

ಹೂವು ಬಿಡುವ ಕ್ರಮ

ಸಸ್ಯಾಭಿವೃದ್ದಿ:

 • ಬೀಜಗಳಿಂದ ಸಸ್ಯಾಭಿವೃದ್ದಿ ಮಾಡಲಾಗುತ್ತದೆ. ಕೆಲವು ಉಪಚಾರಗಳಲ್ಲಿ  ಇದು ಮೊಳಕೆ ಒಡೆಯುತ್ತದೆ.
 • ಬೀಜದಿಂದ ಮಾಡಿದ ಸಸಿಗೆ  ಕಣ್ಣು ಕಸಿ ಮಾಡಿ ಮೂಲಗುಣದ ಸಸ್ಯಾಭಿವೃದ್ದಿ ಮಾಡಲಾಗುತ್ತದೆ.
 • ಕಸಿ ಮಾಡಿದ ಗಿಡ ನಾಟಿ ಮಾಡಿ 3-4  ವರ್ಷಕ್ಕೆ  ಇಳುವರಿ ಕೊಡಬಲ್ಲುದು.
ಗೊಂಚಲು ಗೊಂಚಲು ಇಳುವರಿ

ಗೊಂಚಲು ಗೊಂಚಲು ಇಳುವರಿ

ಇಳುವರಿ:

 •  ಉತ್ತಮ ಸಡಿಲ ಮತ್ತು ಫಲವತ್ತಾದ ಮಣ್ಣಿನಲ್ಲಿ  ಮರವೊಂದರ 100 ಕಿಲೋ ತನಕವೂ ಇಳುವರಿ ಪಡೆಯಬಹುದು. 
 • 15 ವರ್ಷದ ಮರದಲ್ಲಿ ಸರಾಸರಿ 30-40 ಕಿಲೋ ಇಳುವರಿಗೆ  ಸಮಸ್ಯೆ ಇಲ್ಲ. 
 • ನಿತ್ಯ ಹರಿದ್ವರ್ಣದ ಸಸ್ಯ.  ಸಾಕಷ್ಟು ಎಲೆಗಳಿರುವ ಕಾರಣ ಮಣ್ಣು ಫಲವತ್ತತೆಗೂ ಅನುಕೂಲ.
 • ಬೆಳೆದ ನಮ್ತರ ಕಾಯಿ ಉದುರುತ್ತದೆ. ಇದನ್ನು ಹೆಕ್ಕಿ ಸಂಗ್ರಹಿಸಬೇಕು.

ಹಣ ಏನೇ ಇರಲಿ. ಅದು ಆನ್ ಲೈನ್ ದರ. ಇದರ  ಕಾಲು ಪಾಲು ಬೆಲೆ ಸಿಕ್ಕಿದರೂ  ನಮ್ಮ ಗೋಡಂಬಿಗಿಂತ ಇದು ಉತ್ತಮ ಬೆಳೆ. ಅದಕ್ಕಿಂತ ಹೆಚ್ಚಿನ ಇಳುವರಿ ಕೊಡಬಲ್ಲುದು.

————-End Of Article————–
Search Keywords : plantae  , Magnoliophyta  Magnoliophyt Macadamia Macadomia dryfruit Dryfruits cashew  Australian nut  Macadamia  Macadamia crop  Macadamia flower   Macadamia fruit  Macadamia nut  Macadamia tree  Quin land nut

2 Comments

 1. ರಾಮಲಿಂಗ

  ಇದನ್ನು ನಾವು ಸೆಳೆಯಬಹುದಾ..?
  ಇದರ ಸಸಿಗಳು ಸಿಗುತ್ತವಾ..?

  Reply
  • Srinivas HA

   ನಿಮ್ಮ number send madi plz.
   ಮಾಹಿತಿ ಕೊಡಿ ಸರ್

   Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!