ಉತ್ತಮ ಫಲಿತಾಂಶ ಬೇಕೇ? ಹೀಗೆ ಸಿಂಪರಣೆ ಮಾಡಬೇಕು.

by | Mar 27, 2021 | Crop Management (ಬೆಳೆ ನಿರ್ವಹಣೆ) | 0 comments

ಬಹಳಷ್ಟು ಜನ ರೈತರು ಬೆಳೆಗಳಿಗೆ ಏನೇ ಸಿಂಪರಣೆ ಮಾಡುವುದಿದ್ದರೂ ಸರಿಯಾದ ವಿಧಾನದಲ್ಲಿ ಮಾಡದೆ ಅದರ ಸರಿಯಾದ ಫಲಿತಾಂಶ ಪಡೆಯುತ್ತಿಲ್ಲ.
ಬೆಳೆಗಳಿಗೆ ಕೀಟ, ರೋಗನಾಶಕಗಳನ್ನು , ಪೋಷಕಗಳನ್ನು  ಹಾಗೆಯೇ ಇನ್ನಿತರ ಕೆಲವು ಉದ್ದೇಶಗಳಿಗೆ ಸಿಂಪರಣೆ ಮಾಡಲಾಗುತ್ತದೆ. ಹೆಚ್ಚಿನ ಸಿಂಪರಣೆಗಳು ಎಲೆಗೆ ಸಿಂಪಡಿಸುವುದಾಗಿದ್ದು, ಇದನ್ನು ಪತ್ರ ಸಿಂಚನ (Folie spray ) ಎಂದು ಕರೆಯಲಾಗುತ್ತದೆ. ಯಾವುದೇ ಸಿಂಪರಣೆ ಇರಲಿ, ಅದರಲ್ಲಿ ನಮಗೆ ನಿರೀಕ್ಷಿತ ಫಲಿತಾಂಶ ಬೇಕೆಂದಾದಲ್ಲಿ ಸರಿಯಾದ ವಿಧಾನದಲ್ಲಿ ಸಿಂಪರಣೆ ಮಾಡಿದರೆ ಮಾತ್ರ ಪಡೆಯಲು ಸಾಧ್ಯ.

un scientific method of spraying

ಈ ರೀತಿಯಲ್ಲಿ ಸಿಂಪಡಿಸಿದರೆ ಅದರಲ್ಲಿ ನಷ್ಟವೇ ಹೆಚ್ಚು

 • ಹೆಚ್ಚಿನವರು ಸಿಂಪರಣೆ ಮಾಡುವಾಗ ಸ್ಪ್ರೇಯರ್ ನಾಸಲ್ ಅನ್ನು ಸಸ್ಯದ ಮೇಲ್ಭಾಗದಲ್ಲಿ ಹಿಡಿದುಕೊಂಡು ಹೋಗುತ್ತಾರೆ.
 • ಸ್ವಲ್ಪ ಎಲೆಗಳಿಗೆ ಬೀಳುತ್ತದೆ. ಸ್ವಲ್ಪ ಗಾಳಿಗೆ ಹಾರಿ ಎಲ್ಲೆಲ್ಲೋ ಬೀಳುತ್ತದೆ. ಸ್ವಲ್ಪ ಸಿಂಪಡಿಸುವವರ ಮೈ,ಬಟ್ಟೆಯ ಮೇಲೆ ಬೀಳುತ್ತದೆ.
 • 1 ಲೀ. ಸಿಂಪರಕ ದ್ರಾವಣದಲ್ಲಿ ಉಪಯೋಗಕ್ಕೆ ಬರುವುದು ಬರೇ -30-40%  ಮಾತ್ರ.
 • ಇದು ಆರ್ಥಿಕವಾಗಿಯೂ ನಷ್ಟ , ಪರಿಸರಕ್ಕೆ ಹಾಗೂ ನಮ್ಮ ಆರೋಗ್ಯಕ್ಕೂ ಹಾಳು.
 • ಯಾವ ಉದ್ದೇಶಕ್ಕೆ ಸಿಂಪರಣೆ ಮಾಡುತ್ತೆವೆ ಅದಕ್ಕನುಗುಣವಾಗಿ ಸಿಂಪರಣಾ ವಿಧಾನವನ್ನು ಬದಲಾಯಿಸಿಕೊಳ್ಳಬೇಕು.

ಹೇಗೆ ಸಿಂಪರಣೆ ಮಾಡಬೇಕು:

 • ಕೀಟ ನಿಯಂತ್ರಣಕ್ಕೆ ಸಿಂಪರಣೆ ಮಾಡುವುದೇ ಆದರೆ ಅದು ಯಾವ ಕೀಟ, ಅದು ಎಲ್ಲಿ ವಾಸವಾಗಿರುತ್ತದೆ, ಎಲ್ಲಿ ಅವಿತಿರುತ್ತದೆ ಎಂಬುದನ್ನು ತಿಳಿದು ಸಿಂಪರಣೆ ಮಾಡಬೇಕು.
 • ಬಹುತೇಕ ಹುಳಗಳು ಎಲೆಯ ಅಡಿ ಭಾಗದಲ್ಲಿ ವಾಸವಾಗಿದ್ದು, ಅಡಿ ಭಾಗದ ಪತ್ರ ಹರಿತ್ತನ್ನು ತಿನ್ನುತ್ತವೆ.
 • ಆ ಭಾಗ ಮೆತ್ತಗೆ ಇರುತ್ತದೆ ಮತ್ತು ನಯವಾಗಿರುವುದಿಲ್ಲ. ಹಾಗೆಯೇ ಯಾವುದೇ ದೂಳು ಇತ್ಯಾದಿ ಲೇಪನ ಇರುವುದಿಲ್ಲ.
 • ಹೆಚ್ಚಿನ ಕೀಟಗಳು ಎಲೆಯ ಅಡಿ ಭಾಗದಲ್ಲೇ ವಾಸವಾಗಿದ್ದು, ಅಲ್ಲಿಂದಲೇ ತೊಂದರೆ ಮಾಡುತ್ತವೆ.
 • ಬಹುತೇಕ ಹುಳಗಳು ಅನನುಕೂಲ ವಾತಾವರಣ( ಪ್ರಖರ ಬಿಸಿಲು) ದಲ್ಲಿ  ನೆಲದಲ್ಲಿ, ಗಿಡದ ಸಂದುಗಳಲ್ಲಿ ಅವಿತುಕೊಂಡಿರುತ್ತವೆ.
 • ಅದೇ ರೀತಿಯಲ್ಲಿ ರೋಗಕಾರಕಗಳೂ ಸಹ ಎಲೆಯ ಅಡಿ ಭಾಗಕ್ಕೆ ಮೊದಲು ಹಾನಿ ಮಾಡುತ್ತವೆ.
 • ಹೀಗಿರುವಾಗ ನಾವು ಎಲೆಯ ಮೇಲ್ಭಾಗಕ್ಕೆ ಬೀಳುವಂತೆ ಸಿಂಪರಣೆಯನ್ನು ಮಾಡುವುದು ಕೀಟನಾಶಕದ ಪೋಲು ಮತ್ತು ನಮಗೂ ಪರಿಸರಕ್ಕೂ ಹಾನಿ.
 • ಈ ರೀತಿ ಕೀಟನಾಶಕ ದ್ರಾವಣವನ್ನು ಗುರಿಯಲ್ಲದ ಕಡೆಗೆ ಸಿಂಪರಣೆ ಮಾಡುವುದರಿಂದ ಪರಿಸರದಲ್ಲಿರುವ ಅಸಂಖ್ಯ ಉಪಕಾರೀ ಕೀಟಗಳು ನಾಶವಾಗುತ್ತವೆ.
 • ಕೀಟಗಳು ಮಾತ್ರವಲ್ಲ ರೋಗಕಾರಕಗಳೂ ಮೊದಲು ಪ್ರವೇಶ ಆಗುವುದೇ ಎಲೆಗಳ ಅಡಿ ಭಾಗಕ್ಕೆ.

ಇಂದು ಕೀಟನಾಶಕಗಳ ಪರಿಣಾಮ ಸಮರ್ಪಕವಾಗಿ ಆಗದೇ ಇರುವುದಕ್ಕೆ, ಅದೇ ರೀತಿಯಲ್ಲಿ ಕೀಟಗಳು ಪ್ರಭಲವಾಗುವುದಕ್ಕೆ ಮುಖ್ಯ ಕಾರಣ ಅಸಮರ್ಪಕ ವಿಧಾನದಲ್ಲಿ ಕೀಟನಾಶಕ ಸಿಂಪರಣೆ ಮಾಡುವುದೇ ಆಗಿರುತ್ತದೆ.

this in not a good method of spraying

 • ರಸ ಹೀರುವ ಕೀಟಗಳು ಯಾವ ಹೊತ್ತಿನಲ್ಲಿ ಹೆಚ್ಚು ಚಟುವಟಿಕೆಯಲ್ಲಿ ಇರುತ್ತವೆ ಆ ಹೊತ್ತಿನಲ್ಲಿ ಅದಕ್ಕೆ ಸಿಂಪರಣೆ ಮಾಡಬೇಕು.
 • ಸಿಂಪರಣೆ ಮಾಡುವಾಗ ಕೀಟನಾಶಕ ಅದು ಯಾವುದೇ ಇರಲಿ ಅತೀ ಕನಿಷ್ಟ ಪ್ರಮಾಣದಲ್ಲಿ ಬಳಕೆಯಾಗುವಂತೆ ಅಂಟು ಅಥವಾ ಪ್ರಸರಕಗಳನ್ನು ಸೇರಿಸಿ ಸಿಂಪರಣೆ ಮಾಡಬೇಕು.

ಪೋಷಕಗಳ ಸಿಂಪರಣೆ ಮಾಡುವುದು:

 • ಹೆಚ್ಚಿನ ಎಕದಳ ಸಸ್ಯಗಳ ಎಲೆಗಳಲ್ಲಿ ಆಹಾರ ಸಂಗ್ರಹಿಸುವ ಸ್ಟೊಮಾಟಾ ಇರುವುದು ಎಲೆಯ ಅಡಿ ಭಾಗದಲ್ಲಿ.
 • ದ್ವಿದಳ ಸಸ್ಯಗಳಲ್ಲಿ ಎರಡು ಬದಿಯಲ್ಲೂ ಇವೆ. ಪೋಷಕಗಳ ಸಿಂಪರಣೆ  ಮಾಡುವಾಗ ಯಾವಾಗಲೂ ದ್ರಾವಣದ ಹನಿಗಳು ಎಲೆಯ ಅಡಿ ಭಾಗಕ್ಕೆ ಬೀಳುವಂತೆ ಸಿಂಪರಣೆ ಮಾಡಿದರೆ ಅದರ ಫಲ ಹೆಚ್ಚು.
 • absorption takes place through their stomata and also through their epidermis.
 • ಅದನ್ನು  ಸಸ್ಯಗಳು  ಚೆನ್ನಾಗಿ ಬಳಸಿಕೊಳ್ಳುತ್ತವೆ ಸಹ.
 • ಸಿಂಪರಕವನ್ನು ಎಲೆಗಳ ಮೇಲ್ಮೈಗೆ ಮಾತ್ರ ಬೀಳುವಂತೆ ಸಿಂಪಡಿಸಿದರೆ ಅದರಲ್ಲಿ ಹೆಚ್ಚಿನ ಪ್ರಮಾಣವು  ಬಿಸಿಲಿನ ತಾಪಕ್ಕೆ   ನಷ್ಟವಾಗುತ್ತದೆ.
 • ಪೋಷಕಾಂಶಗಳನ್ನು ಹಸುರು ಭಾಗಗಳೆಲ್ಲವೂ ಹೀರಿಕೊಳ್ಳುತ್ತವೆ.
 • ಆದ ಕಾರಣ ಕೆಳಭಾಗದಿಂದ ನಾಸಲ್ ಅನ್ನು ಹಿಡಿದು ಸಿಂಪಡಿಸುವುದು ಉತ್ತಮ.
 • ಹೆಚ್ಚಿನವರು ಪೊಷಕಾಂಶಗಳನ್ನು ಹಾಗೆಯೇ ಕೆಲವು ಲೇಪನವಾಗಬೇಕಾದ ವಸ್ತುಗಳನ್ನು ಕಡಿಮೆ ಒತ್ತಡದಲ್ಲಿ (Low pressure) ಸಿಂಪಡಿಸುವ ಸ್ಪ್ರೇಯರ್ ಗಳ ಮೂಲಕ ಸಿಂಪಡಿಸಬಾರದು.
 • ಅದನ್ನು ಯಾವಾಗಲೂ ಹೆಚ್ಚು ಒತ್ತಡದಲ್ಲಿ (High pressure) ಸಿಂಪರಣೆಯಾಗುವಂತೆ ಸಿಂಪಡಿಸಬೇಕು.
 • ಹೀಗೆ ಸಿಂಪರಣೆ ಮಾಡಿದರೆ ಎಲೆಗಳು ಅಲುಗಾಡಿ ಎರಡೂ ಬದಿಗೂ ದ್ರಾವಣ ಬೀಳುತ್ತದೆ.

ಸಿಂಪಡಿಸುವಾಗ ಎಚ್ಚರಿಕೆಗಳು:

This type of spray cause harm to atmosphere and humans

ಈ ರೀತಿಯಲ್ಲಿ ಸಿಂಪಡಿಸಿದರೆ ವಾತಾವರಣಕ್ಕೂ ಹಾಳು, ಉಸಿರಾಡುವ ಮಾನವನಿಗೂ ಹಾಳು.

 • ಯಾವಾಗಲೂ ಕೀಟನಾಶಕಗಳು ಮಾನವನಿಗೆ ಚರ್ಮಕ್ಕೆ, ಕಣ್ಣಿಗೆ  ಹಾಗೆಯೇ ಉಸಿರಾಟದಿಂದ ಶ್ವಾಸಕೋಶಕ್ಕೆ ಖಂಡಿತವಾಗಿಯೂ ತೊಂದರೆ ಮಾಡುತ್ತದೆ.
 • ಬಹುತೇಕ ಸಿಂಪರಣೆ ಮಾಡುವವರಿಗೆ  ಉಸಿರಾಟದ ಮೂಲಕ ಅದು ದೇಹದ ಒಳಗೆ ಹೋಗುತ್ತದೆ.
 • ಆದ ಕಾರಣ ಸಿಂಒಪಡಿಸುವಾಗ ಮೈ ಕೈಗೆ ಬೀಳದಂತೆ, ಗಾಳಿ ಬೀಸುವ ದಿಕ್ಕಿಗೆ ಮುಖ ಮಾಡಿ ಸಿಂಪರಣೆ ಮಾಡಬೇಕು.
 • ಪ್ರಮಾಣ ಎಷ್ಟು ಎಂಬುದನ್ನು ತಿಳಿದು ಅದರಷ್ಟೇ ಪ್ರಮಾಣವನ್ನು ಬಳಕೆ ಮಾಡಬೇಕು. ಹೆಚ್ಚು ಬಳಕೆ ಮಾಡಬಾರದು.

ಆರೋಗ್ಯ ಪ್ರತೀಯೊಬ್ಬನಿಗೂ ಪ್ರಾಮುಖ್ಯ ಆದ್ಯತೆ. ಅದೇ ರೀತಿಯಲ್ಲಿ ಬಳಕೆ ಮಾಡುವ ಸಿಂಪರಣಾ ವಸ್ತುಗಳೂ ಸಹ ಬಹಳ ದುಬಾರಿ. ಇವುಗಳ ಫಲವನ್ನು ಚೆನ್ನಾಗು ಬಳಸಿಕೊಳ್ಳಬೇಕು. ಎರಡು ಮೂರು ಸಿಂಪರಣೆ ಬದಲಿಗೆ ಒಂದೇ ಸಿಂಪರಣೆಯಲ್ಲಿ ಆಗುವಂತೆ ಗುರಿಗೆ ಸಿಂಪರಣೆ ಮಾಡುವುದನ್ನು ರೈತರು ಕಲಿಯಬೇಕು.

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!