ಮದ್ದಾಲೆ ಮರದ ಚೆಕ್ಕೆ ತಿನ್ನಿ- ಆರೋಗ್ಯವಾಗಿರುತ್ತೀರಿ.
ಆಷಾಢ ಅಮವಾಸ್ಯೆಯ ದಿನ ಮದ್ದಾಲೆ ಮರದ ಬುಡಕ್ಕೆ ಬೆಳಗ್ಗಿನ ಜಾವದಲ್ಲಿ ಹೋಗಿ ಕತ್ತಿ ಇತ್ಯಾದಿ ಆಯುಧಗಳ ಸಹಾಯವಿಲ್ಲದೇ ಕಲ್ಲಿನಲ್ಲಿ ಮರದ ತೊಗಟೆಯನ್ನು ಜಜ್ಜಿ ತೆಗೆದು ಚೂರು ಚೆಕ್ಕೆಯನ್ನು ಜಗಿದು ಸೇವಿಸುವುದು ತುಳು ನಾಡಿನಲ್ಲಿ ಪ್ರತೀತಿ. ಈ ಮರದ ತೊಗಟೆಯ ರಸಕ್ಕೆ ಅನಾರೋಗ್ಯ ನಿವಾರಣೆ ಶಕ್ತಿ ಇದೆ. ಜೊತೆಗೆ ಈ ಮರವನ್ನು ಪೂಜನೀಯವಾಗಿಯೂ ಕಾಣಲಾಗುತ್ತದೆ. ಮದ್ದಾಲೆಗೆ ಇದೆ ದೈವಿಕತೆ: ಪೆರಿಯಾಕುಳು ಎಂಬ ಯಮಳ ವೀರರು ಬೈಲಬೀಡು ಬಳಿಯ ಮದ್ದಾಲೆ ಅಥವಾ ಪಾಲೆ ಮರದ ಬುಡದಲ್ಲಿ ಮಾಯವಾದರು ಎಂಬ ಐತಿಹ್ಯವಿದೆ….