
ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.
ಈ ವರ್ಷ ಮಾವಿನ ಮರಗಳೆಲ್ಲಾ ಹೂವು ಬಿಟ್ಟಿವೆ. ಎಲ್ಲಾ ಹೂವು ಕಾಯಿಕಚ್ಚಿ ಕಾಯಿಯಾದರೆ ಮಾವಿನ ಮಾರುಕಟ್ಟೆಯೇ ಸಾಕಾಗದು. ಆದರೆ ಬಹುತೇಕ ಮಾವಿನ ಹೂವು ಉಳಿಯುವುದಿಲ್ಲ. ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಾವಿನ ಮರದಲ್ಲಿ ಹೂ ಬಿಡುವ ಹಂತ ಬಹಳ ನಿರ್ಣಾಯಕ ಹಂತವಾಗಿದ್ದು, ದೊಡ್ಡ ದೊಡ್ಡ ಬೆಳೆಗಾರರರು ಹೂ ಉಳಿದು ಕಾಯಿ ಹೆಚ್ಚಲು ಗರಿಷ್ಟ ಸಿಂಪರಣೆ ಮಾಡುತ್ತಾರೆ.ವಾಣಿಜ್ಯಿಕ ಮಾವು ಬೆಳೆಗೆ ಇದೆಲ್ಲಾ ಸರಿ. ಸಣ್ಣ ಸಣ್ಣ ಹಿತ್ತಲಿನ ಹಣ್ಣು ಹಂಪಲು ಮರವುಳ್ಳವರು ಹೂವು ಬಿಟ್ಟದ್ದನ್ನು ರಕ್ಷಿಸಿಕೊಳ್ಳುವ ಉಪಾಯ…