ಮಾವಿನ ಕಾಯಿ ಹಣ್ಣಾಗುವಾಗ ಕೊಳೆಯುವುದಕ್ಕೆ ಏನು ಕಾರಣ?
ಮಾವಿನ ಹಣ್ಣಿನ ತೊಟ್ಟಿನ ಭಾಗ ಮೊದಲು ಮೆತ್ತಗಾಗಿ ಕೊಳೆಯುತ್ತದೆ. ಹಣ್ಣು ಮೇಲ್ಮೈಯಲ್ಲಿ ಅಲ್ಲಲ್ಲಿ ತಪ್ಪು ಕಲೆಗಳಾಗಿ ಕೊಳೆಯುತ್ತದೆ. ಮಾವಿನ ಹಣ್ಣು ನೋಡುವಾಗ ಅದನ್ನು ತಿನ್ನಲು ಹೇಸಿಗೆಯೆನಿಸುತ್ತದೆ. ಇದು ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ಬಹಳಷ್ಟು ರೈತರಿಗೆ ಗೊತ್ತೇ ಇಲ್ಲ. ಇದು ರಾಸಾಯನಿಕ ಬಳಸಿ ಬೆಳೆದರೂ ಆಗುತ್ತದೆ. ಸಾವಯವದಲ್ಲಿ ಬೆಳೆದರೂ ಆಗುತ್ತದೆ. ಇದನ್ನು ಕೆಲವು ಕ್ರಮಗಳ ಮೂಲಕ ನಿಯಂತ್ರಣ ಮಾಡಬಹುದು. ಇದು ಮಾವಿನ ಹಣ್ಣಿನ ಸೀಸನ್. ಕೆಲವರ ಮನೆಯಂಗಳದ ಮಾವಿನ ಮರದಲ್ಲಿ ಕಾಯಿ ಇದೆ. ಕೆಲವರು ಅಂಗಡಿಯಿಂದ ಒಯ್ಯುತ್ತಾರೆ. …