ಮಾವಿನ ಮರದಲ್ಲಿ ಹೂ ಬರಲು ಇದನ್ನು ಮಾಡಬೇಕು.
ಮಾವಿನ ಮರದಲ್ಲಿ ಡಿಸೆಂಬರ್ ತಿಂಗಳಿಂದ ಪ್ರಾರಂಭವಾಗಿ ಫೆಬ್ರವರಿ ತನಕ ಹೂವಾಗುತ್ತದೆ. ಹೂವಾಗುವ ಸಮಯದಲ್ಲಿ ಮರದ ಆರೋಗ್ಯ ಉತ್ತಮವಾಗಿರಬೇಕು. ಮುಖ್ಯವಾಗಿ ಮಾವಿನ ಹೂ ಬರುವ ಮೊಗ್ಗು (bud) ಭಾಗ ಆರೋಗ್ಯವಾಗಿದ್ದರೆ, ಅಂದರೆ ಕೀಟ , ರೋಗ ಸೋಂಕಿನಿಂದ ಮುಕ್ತವಾಗಿದ್ದರೆ, ಹೂ ಹೆಚ್ಚು ಬರುತ್ತದೆ. ಮುಂದೆ ಹೂವಿಗೆ ಬರುವ ಕೀಟಗಳೂ ಕಡಿಮೆಯಾಗುತ್ತವೆ. ಹೂವು ಉದುರುವುದು ಕಡಿಮೆಯಾಗಿ ಕಾಯಿ ಕಚ್ಚುವಿಕೆ ಹೆಚ್ಚುತ್ತದೆ. ಇದಕ್ಕೆ ಮರ ಚಿಗುರುವ ಮುಂಚೆ ಕೆಲವು ಉಪಚಾರಗಳನ್ನು ತಪ್ಪದೆ ಮಾಡಬೇಕು. ಗೇರು ಮರ ಚಿಗುರಿದರೆ ಅದರಲ್ಲಿ ಹೂ ಗೊಂಚಲು…